ಬೆಂಗಳೂರು: ಬೆಮಲ್​ನಲ್ಲಿ ಸಿದ್ಧವಾಗ್ತಿದೆ ನಮ್ಮ ಮೆಟ್ರೋ ಚಾಲಕರಹಿತ ರೈಲು!

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಗುಡ್ ನ್ಯೂಸ್ ಸಿಗಲಿದೆ. ಬ್ಲೂ ಮತ್ತು ಪಿಂಕ್ ಲೈನ್​ನಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ವಿಶೇಷ ಅಂದರೆ ಈ ಮೆಟ್ರೋ ಕೋಚ್​​ಗಳು ಬೆಂಗಳೂರಿನಲ್ಲೇ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಬರೋಬ್ಬರಿ 3400 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.

ಬೆಂಗಳೂರು: ಬೆಮಲ್​ನಲ್ಲಿ ಸಿದ್ಧವಾಗ್ತಿದೆ ನಮ್ಮ ಮೆಟ್ರೋ ಚಾಲಕರಹಿತ ರೈಲು!
ನಮ್ಮ ಮೆಟ್ರೋ
Follow us
Kiran Surya
| Updated By: Ganapathi Sharma

Updated on: Sep 09, 2024 | 7:31 AM

ಬೆಂಗಳೂರು, ಸೆಪ್ಟೆಂಬರ್ 9: ಬೆಂಗಳೂರಿನ ಬಹುನಿರೀಕ್ಷಿತ ಚಾಲಕ ರಹಿತ / ಡ್ರೈವರ್ ಲೆಸ್ ಮೆಟ್ರೋ ರೈಲುಗಳನ್ನು ಪಿಂಕ್ ಮತ್ತು ಬ್ಲೂ ಲೈನ್​ನಲ್ಲಿ ಟ್ರ್ಯಾಕ್​ಗಿಳಿಸಲು ಬಿಎಂಆರ್​​ಸಿಎಲ್ ಮುಂದಾಗಿದೆ. ಆದರೆ, ಈ ಬಾರಿ ವಿಶೇಷ ಅಂದರೆ ಈ ಎರಡು ಮಾರ್ಗಗಗಳಲ್ಲಿ ಸಂಚಾರ ಮಾಡಲಿರುವ ಮೆಟ್ರೋ ರೈಲುಗಳನ್ನು ಕೇಂದ್ರ ಸರ್ಕಾರ, ಬೆಂಗಳೂರಿನ ಬೆಮಲ್​ನಲ್ಲಿ ತಯಾರು ಮಾಡಿಸುತ್ತಿದೆ. ಈಗಾಗಲೇ ಈ ಒಪ್ಪಂದಕ್ಕೆ ಬಿಎಂಆರ್​​ಸಿಎಲ್ ಮತ್ತು ಬೆಮಲ್ ಮುಖ್ಯಸ್ಥರು ಸಹಿ ಹಾಕಿದ್ದಾರೆ.

ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಡ್ರೈವರ್ ​​ಲೆಸ್ ರೈಲು ಕೋಚ್​ಗಳು ತಯಾರಾಗಲಿವೆ. 3177 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಡ್ರೈವರ್ ಲೆಸ್ ರೈಲುಗಳು ನಿರ್ಮಾಣವಾಗುತ್ತಿದ್ದು, 53 ಟ್ರೈನ್ ಸೆಟ್​ಗಳು ಸೇರಿದಂತೆ 318 ಕೋಚ್​ಗಳನ್ನು ಬೆಮಲ್ ತಯಾರು ಮಾಡಲಿದೆ. ಕಾಳೇನ ಅಗ್ರಹಾರದಿಂದ ನಾಗವಾರ ( ಪಿಂಕ್‌ ಲೈನ್ ) 21 ಕಿಮೀ ಹಾಗೂ ಸಿಲ್ಕ್ ಬೋರ್ಡ್​​ನಿಂದ ವಿಮಾನ ನಿಲ್ದಾಣ (ಬ್ಲೂ ಲೈನ್) 55 ಕಿ.ಮೀ ಎರಡು ಮಾರ್ಗದಲ್ಲೂ ಡ್ರೈವರ್ ಲೆಸ್ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ ಎಂದು ಬಿಎಂಆರ್​​ಸಿಎಲ್ ಎಂಡಿ ಮಹೇಶ್ವರ ರಾವ್ ತಿಳಿಸಿದ್ದಾರೆ.

ಬೆಮೆಲ್​ನಲ್ಲೇ ಚಾಲಕರಹಿತ ಮೆಟ್ರೋ ತಯಾರಿಸಲು ಕಾರಣವೇನು?

ಈಗಾಗಲೇ ಆರ್​​ವಿ ರಸ್ತೆಯಿಂದ ಬೊಮ್ಮಸಂದ್ರ (ಹಳದಿ ಮಾರ್ಗಕ್ಕೆ) ಚೀನಾದಿಂದ ಡ್ರೈವರ್ ಲೆಸ್ ರೈಲುಗಳನ್ನು ತರಿಸಿಕೊಳ್ಳಲಾಗಿದೆ. ಚೀನಾದಿಂದ ಸರಿಯಾದ ಸಮಯಕ್ಕೆ ಆ ರೈಲುಗಳು ಬರಲಿಲ್ಲ, ಸಾಗಾಟ ತುಂಬಾ ವಿಳಂಬವಾಗಿತ್ತು. ಇನ್ನೂ ಆ ರೈಲುಗಳು ಟ್ರಯಲ್ ರನ್ ನಡೆಸುತ್ತಿವೆ. ಈ ವರ್ಷ ಅಥವಾ ಮುಂದಿನ ವರ್ಷ ಈ ಮಾರ್ಗಕ್ಕೆ ಚಾಲನೆ ಸಿಗಲಿದ್ದು, ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಕ್ಕೆ‌ ಮೆಟ್ರೋ ಕೋಚ್​ಗಳು ವಿಳಂಬವಾಗಬಾರದು ಎಂದು ಬೆಂಗಳೂರಿನ ಬೆಮಲ್​​ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣಕ್ಕಾಗಿ ಬೆಂಗಳೂರು ಸುತ್ತ 5 ಸ್ಥಳಗಳನ್ನು ಗುರುತಿಸಿದ ರಾಜ್ಯ ಸರ್ಕಾರ

ಒಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಮ್ಮ ಬೆಂಗಳೂರಿನ ಬೆಮಲ್​​ನಲ್ಲಿ ಡ್ರೈವರ್ಲೆಸ್ ರೈಲುಗಳು ತಯಾರಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ