ಇದು ರೀಲ್ ಸ್ಟೋರಿಯಲ್ಲ, ರಿಯಲ್ ಸ್ಟೋರಿ: ತಾಯಿಯ ನೆಮ್ಮದಿ ನಿದ್ರೆಗಾಗಿ 10 ವರ್ಷ ಬಾಲಕನಿಂದ ವಿಶಿಷ್ಟ ಅಭಿಯಾನ

ಸಿನಿಮಾದಲ್ಲಿ ತಾಯಿಗಾಗಿ ಏನೆಲ್ಲಾ ತ್ಯಾಗ ಮಾಡೋದನ್ನ ನೋಡಿದ್ದೀರಾ. ಆದ್ರೆ ರಿಯಲ್ ಲೈಫ್ ನಲ್ಲಿ ತಾಯಿಗಾಗಿ ಈ ಬಾಲಕನ ಮಾಡ್ತಿರೋ ಕೆಲಸ ಏನು ಗೊತ್ತಾ? ಕೇಳಿದ್ರೆ ಆಶ್ಚರ್ಯ ಪಡೋದ್ರಲ್ಲಿ ಡೌಟೇ ಇಲ್ಲ. ಬಾಲಕನ ಈ ಕಾರ್ಯ ನಿಮ್ಮನ್ನು ಒಂದು ಕ್ಷಣ ಥ್ರಿಲ್ ಮಾಡದೇ ಇರೋದಿಲ್ಲ. ತಾಯಿಗಾಗಿ ಮಗ ಮಾಡ್ತಿರೋ ಈ ಅಭಿಯಾನ ಖುಷಿ ಕೊಡೋದು ಮಾತ್ರವಲ್ಲ. ಇನ್ಮುಂದೆ ನಾವು ಹೀಗೆ ಮಾಡಬಾರದು ಎಂಬ ಶಪಥವೊಂದು ಮನದಾಳದಲ್ಲಿ ಹುಟ್ಟಿಕೊಳ್ಳುತ್ತೆ.

ಇದು ರೀಲ್ ಸ್ಟೋರಿಯಲ್ಲ, ರಿಯಲ್ ಸ್ಟೋರಿ: ತಾಯಿಯ ನೆಮ್ಮದಿ ನಿದ್ರೆಗಾಗಿ 10 ವರ್ಷ ಬಾಲಕನಿಂದ ವಿಶಿಷ್ಟ ಅಭಿಯಾನ
ತಾಯಿಯ ನೆಮ್ಮದಿ ನಿದ್ರೆಗಾಗಿ 10 ವರ್ಷ ಬಾಲಕನಿಂದ ವಿಶಿಷ್ಟ ಅಭಿಯಾನ
Follow us
Vinay Kashappanavar
| Updated By: ಆಯೇಷಾ ಬಾನು

Updated on: Sep 09, 2024 | 8:15 AM

ಬೆಂಗಳೂರು, ಸೆ.09: ನನ್ನ ಅಮ್ಮ (Amma) ನನಗೆ ಎಷ್ಟೆಲ್ಲಾ ಮಾಡ್ತಾಳೆ. ಬೆಳಗ್ಗೆ ಸ್ಕೂಲ್ಗೆ ರೆಡಿ ಮಾಡಲು ಅವಳ ಕೆಲಸ ಕಾರ್ಯ ಅಷ್ಟಿಷ್ಟಲ್ಲ. ಕೋಳಿ ಕೂಗುವ ಮುನ್ನ ಎದ್ದು ತಿಂಡಿ ಮಾಡಿ, ಬುತ್ತಿ ಕಟ್ಟಿ, ನಮ್ಮನ್ನು ಎಬ್ಬಸಿ ರೆಡಿ ಮಾಡಿ ಕಳಿಸ್ತಾಳೆ. ಆದ್ರೆ ಅವಳಿಗೆ ಎಂದೂ ದಣಿವಾಗಲ್ವಾ? ರಾತ್ರಿ ನಿದ್ದೆ (Sleep) ಆದ್ರೂ ಸರಿ ಮಾಡ್ತಾಳಾ ಎಂಬ ಆಲೋಚನೆಗೆ ಇಳಿದ ಈ ಬಾಲಕನನ್ನು ಬಡಿದೆಬ್ಬಿಸಿದ್ದು ವಾಹನಗಳ ಕರ್ಕಶ ದನಿ. ಕರ್ಕಶ ದನಿಗೆ ಕೊನೆ ಇಲ್ವಾ ಎಂಬ ಆಲೋಚನೆಗೆ ಹುಟ್ಟಿಕೊಂಡಿದ್ದೇ ಈ ಅಭಿಯಾನ. ತನ್ನ ತಾಯಿಗಾಗಿ, ತನ್ನವರಿಗಾಗಿ ಈ ಬಾಲಕ ವಾಹನಗಳ ಕರ್ಕಶ ದನಿ ವಿರುದ್ಧ ಧ್ವನಿಯಾಗಿದ್ದಾನೆ.

ಕುಂಜಿತ್ ಲೋಹಿಯ ಎಂಬ ಕೇವಲ 10 ವರ್ಷ ವಯಸ್ಸಿನ 6ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ತನ್ನ ತಾಯಿಗಾಗಿ, ತಾಯಂದಿರಿಗಾಗಿ ಈ ವಿಶಿಷ್ಟ ಅಭಿಯಾನ ಕೈಗೊಂಡಿದ್ದಾನೆ. ಕೇಂದ್ರಿಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕುಂಜಿತ್ ಲೋಹಿಯ ಕಳೆದ ಒಂದೂವರೆ ವರ್ಷಗಳಿಂದ ಡೋಂಟ್ ಹಾಂಕ್ ಅಭಿಯಾನ ಕೈಗೊಂಡಿದ್ದಾನೆ.

bengaluru news 10 year old boy unique campaign against Honking for her mother sleep kannada news

ಇದನ್ನೂ ಓದಿ: ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ಅಬ್ಬಿಗೆರೆ ನಿವಾಸಿ ಜುಗಲ್ ಲೋಹಿಯ, ಸಾಕ್ಷಿ ಅವರ ಸುಪುತ್ರನಾಗಿರುವ ಕುಂಜಿತ್ ಪ್ರತಿ ದಿನ ಶಾಲೆಗೆ ಹೋಗುವಾಗ, ಸಂಜೆ ಶಾಲೆ ಮುಗಿಸಿ ಬರುವಾಗ ಒಂದೊಂದು ಗಂಟೆ ಅಭಿಯಾನ ಕೈಗೊಳ್ತಾನೆ. ದಯವಿಟ್ಟು ಹಾರ್ನ್ ಮಾಡಬೇಡಿ ಎಂಬ ಬಾಲಕನ ವಿಶಿಷ್ಠ ಅಭಿಯಾನಕ್ಕೆ ಪುಟ್ಟ ತಂಗಿ ಕೃಶ ಕೂಡ ಸಾಥ್ ನೀಡಿದ್ದಾಳೆ. ತನಗಾಗಿ, ಭವಿಷ್ಯದ ಪೀಳಿಗೆಗಾಗಿ ಬಾಲಕ ಕೈಗೊಂಡಿರುವ ಈ ಸ್ಪೆಷಲ್ ಕ್ಯಾಂಪೈನ್ಗೆ ತಾಯಿ, ತಂದೆ ಖುಷಿ ಪಟ್ಟಿದ್ದಾರೆ.

ತಾಯಿ ನೆಮ್ಮದಿಯಿಂದ ನಿದ್ದೆ ಮಾಡಬೇಕು. ಮನೆಯ ನಿಶಬ್ಧ ವಾತಾವರಣದಲ್ಲಿದ್ದು ಹೊರಗೆ ಓದಲು ಬರುವ ನಮಗೆ ಪೀಸ್ಫುಲ್ ಪರಿಸರ ಬೇಕು. ನಿಮ್ಮ ಕರ್ಕಶ ವಾಹನಗಳ ಸದ್ದು ಭವಿಷ್ಯದ ಪೀಳಿಗೆಗೆ ಮಾರಕವಾಗ್ತಿದೆ. ಪ್ಲೀಸ್ ಡೋಂಟ್ ಹಾಂಕ್ ಎಂಬ ಕುಂಜಿತ್ ಅಭಿಯಾನ ಸಿಟಿ ವಾಹನ ಸವಾರರನ್ನು ಎಚ್ಚರಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು