ಕಾಮಗಾರಿ ಹಿನ್ನೆಲೆ ನಾಳೆ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
ನಾಳೆ (ಫೆ. 26) ಬೆಂಗಳೂರಿನ 1, 2 ಮತ್ತು 3ನೇ ಹಂತದಿಂದ ಸರಬರಾಜು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು: ನಾಳೆ (ಫೆ. 26) ಬೆಂಗಳೂರಿನ 1, 2 ಮತ್ತು 3ನೇ ಹಂತದಿಂದ ಸರಬರಾಜು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ (kaveri water supply) ವ್ಯತ್ಯಯ ಉಂಟಾಗಲಿದೆ. ಪಂಪಿಂಗ್ ಸ್ಟೇಷನ್ಗಳ ತುರ್ತು ದುರಸ್ಥಿ ಹಾಗೂ ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ಸ್ಥಾವರಗಳ ತುರ್ತು ನಿರ್ವಹಣೆ ಕಾರ್ಯ ಹಿನ್ನೆಲೆ ನಾಳೆ (ಫೆ. 26) ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರಿಗೆ ಕಾವೇರಿ ನೀರು ಪೂರೈಕೆ ಬಂದ್ ಆಗಲಿದೆ. ಬೆಂಗಳೂರಿನ ಅರ್ಧ ಭಾಗದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಬೆಂಗಳೂರು ಜನತೆ ಸಹಕರಿಸಬೇಕೆಂದು ಜಲಮಂಡಳಿ ಮನವಿ ಮಾಡಿದೆ.
ಮೆಟ್ರೋ ಮಾರ್ಗಕ್ಕಾಗಿ ಭೂಗತ ಸುರಂಗ ಕಾಮಗಾರಿ ನಡೆಯುತ್ತಿರುವ ಬ್ರಿಗೇಡ್ ರಸ್ತೆಯಲ್ಲಿ ಕಳೆದ ತಿಂಗಳು ಬೃಹತ್ ಹೊಂಡ ಕಾಣಿಸಿಕೊಂಡಿತ್ತು. ಬಳಿಕ ಬಿಡಬ್ಲ್ಯುಎಸ್ಎಸ್ಬಿ ಈ ಕಾಮಗಾರಿ ಕೈಗೆತ್ತಿಕೊಂಡಿದೆ. ಇಲ್ಲಿನ ಗುಂಡಿ ತಪ್ಪಿಸಲು ಹೋದ ಬೈಕ್ ಸವಾರ ಬಿದ್ದು ಗಾಯ ಮಾಡಿಕೊಂಡಿರುವುದು ಕೂಡ ವರದಿಯಾಗಿತ್ತು.
ಇದನ್ನೂ ಓದಿ: BBMP: ಮಾರ್ಚ್ 1ರಿಂದ ಬಿಬಿಎಂಪಿ ನೌಕರರ ಪ್ರತಿಭಟನೆ: 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹ
ಎಲ್ಲೆಲ್ಲಿ ನಾಳೆ ಕಾವೇರಿ ನೀರು ಬರಲ್ಲ?
ನೇತಾಜಿ ನಗರ, ಕೆಪಿ ಅಗ್ರಹಾರ, ಟಿಪ್ಪುನಗರ, ಚಾಮರಾಜಪೇಟೆ, ಆದರ್ಶ ನಗರ, ಪಾದಾರಾಯನಪುರ, ಬಿನ್ನಿ ಲೇಔಟ್, ವಿದ್ಯಾಪೀಠ, ವಿವೇಕಾನಂದ ನಗರ, ಎನ್ ಆರ್ ಕಾಲೋನಿ, ಬನಶಂಕರಿ ಮೊದಲ ಹಂತ, ಶ್ರೀನಗರ, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಅಶೋಕ ನಗರ, ಶಾಂತಲಾನಗರ, ಇಸ್ರೋ ಲೇಔಟ್, ನೀಲಸಂದ್ರ, ಜಿ ರೋಡ್, ಬ್ರಿಗೇಡ್ ರೋಡ್, ಕೋರಮಂಗಲ, ಶಾಂತಿನಗರ, ನೇತಾಜಿ ನಗರ, ಕೆಪಿ ಅಗ್ರಹಾರ, ಬಿನ್ನಿ ಲೇಔಟ್, ರಾಘವೇಂದ್ರ ಕಾಲೋನಿ, ಅಂಜನಪ್ಪ ಗಾರ್ಡನ್, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್.
ಇದನ್ನೂ ಓದಿ: ಕಲಾಸಿಪಾಳ್ಯ ಬಸ್ ನಿಲ್ದಾಣ ಕೊನೆಗೂ ಉದ್ಘಾಟನೆ, ಇಲ್ಲಿಂದ ಯಾವೆಲ್ಲ ಬಸ್ ಸಂಚರಿಸಲಿವೆ?ಇಲ್ಲಿದೆ ಮಾಹಿತಿ
ವಿವೇಕಾನಂದ ನಗರ, ಕತ್ರಿಗುಪ್ಪೆ, ತ್ಯಾಗರಾಜ ನಗರ, ಶಾಸ್ತ್ರೀ ನಗರ, ಎನ್.ಆರ್ ಕಾಲೋನಿ, ಇಸ್ರೋ ಲೇಔಟ್, ಶ್ರೀನಗರ, ಕುಮಾರಸ್ವಾಮಿ ಲೇಔಟ್ ಕೆಲವು ಭಾಗಗಳು, ಶಾಂತಲಾ ನಗರ, ಶಾಂತಿನಗರ, ಆನೆಪಾಳ್ಯ, ಆಸ್ಟಿನ್ ಟೌನ್, ಈಜಿಪುರ, ವಿವೇಕನಗರ, ಅಶೋಕ ನಗರ, ರಿಚ್ಮಂಡ್ ಟೌನ್, ವಿಕ್ಟೋರಿಯಾ ಲೇಔಟ್, ದೊಮಲೂರು, ಕಮಾಂಡ್ ಹಾಸ್ಪಿಟಲ್, ಹಾಲ್ II ಸ್ಟೇಜ್, ಅಮರಜ್ಯೋತಿ ಲೇಔಟ್, ಕೋಡಿಹಳ್ಳಿ, ಆಡುಗೊಡಿ, ಜಯನಗರ, ಗಾಂಧಿಬಜಾರ್, ಜಯಮಹಲ್, ಇಂದಿರಾನಗರ, ಜೋಗುಪಾಳ್ಯ ಸೇರಿದಂತೆ ಹಲವು ಕಡೆ ನೀರಿನ ಪೂರೈಕೆಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.