ಬೆಂಗಳೂರು, ಮಾ.5: ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ವಿಜಯ್ ತಾತ ಮತ್ತು ಸಹಚರರಿಗೆ ಸಂಬಂಧಿಸಿದ ಒಟ್ಟು ಎಂಟು ಸ್ಥಳಗಳಲ್ಲಿ ನಡೆದಿದ್ದ ದಾಳಿ (ED Raid) ಪ್ರಕರಣ ಸಂಬಂಧ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಜಾರಿ ನಿರ್ದೇಶನಾಲಯ (Enforcement Directorate-ED), ಆರೋಪಿಗಳ ಅಕೌಂಟ್‌ನಲ್ಲಿದ್ದ ಸುಮಾರು 11.25 ಕೋಟಿ ಹಣವನ್ನ ಫ್ರೀಜ್ ಮಾಡಲಾಗಿದ್ದು, 120 ಕೋಟಿ ಮೌಲ್ಯದ ಆಸ್ತಿ ಪತ್ರಗಳು, ಡಿಜಿಟಲ್ ಎವಿಡೆನ್ಸ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಜಾರಿ ನಿರ್ದೇಶನಾಲಯ, ಫೆಬ್ರವರಿ 29 ಮತ್ತು ಮಾರ್ಚ್ 1 ರಂದು ಬೆಂಗಳೂರಿನ 8 ಸ್ಥಳಗಳಲ್ಲಿ ಪಿಎಂಎಲ್‌ಎ 2002 ರ ಅಡಿಯಲ್ಲಿ ಆರೋಪಿಗಳಾದ ವಿಜಯಾ ಆರ್ ತಾತಾ ಮತ್ತು ಅವರ ಸಹಚರರ ವಸತಿ ಆವರಣದಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು ಎಂದು ತಿಳಿಸಿದೆ.
ಇದನ್ನೂ ಓದಿ: DK Shivakumar: ಇಡಿ ಪ್ರಕರಣ ರದ್ದಾದರೂ ಡಿಕೆ ಶಿವಕುಮಾರ್ಗೆ ಕಾಡುತ್ತಿದೆ ಸಿಬಿಐ ಕಂಟಕ!
ಆರ್ ಎಸ್ ಚಂದ್ರಶೇಖರ್, ಮುನಿರಾಜು ಕೆ, ಡಿ ನಾಗೇಂದ್ರ ಬಾಬು, ಮಂಜುನಾಥ್ ಬಿ ಎಸ್ ಮತ್ತು ಸಂಬಂಧಿತ ಕಂಪನಿಗಳ ಕಚೇರಿಗಳ ಮೇಲೆ. ಸಂಚಯ ಲ್ಯಾಂಡ್ ಆ್ಯಂಡ್ ಎಸ್ಟೇಟ್ ಪ್ರೈ. ಲಿಮಿಟೆಡ್, ಬಿಸಿಸಿ ಕನ್ಸ್ಟ್ರಕ್ಷನ್ಸ್ ಪ್ರೈ. ಲಿಮಿಟೆಡ್, ಆಕಾಶ್ ಎಜುಕೇಶನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್, ಎಸ್ ವಿ ಕಾಂಕ್ರೀಟ್ ಪ್ರಾಜೆಕ್ಟ್ಸ್ ಪ್ರೈವೇಟ್, M/s ಸಂಚಯ ಲ್ಯಾಂಡ್ & ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಸಂಬಂಧಿಸಿದ ಪ್ರಕರಣಗಳು ಇದಾಗಿದೆ.
ED, Bengaluru has conducted search operations on 29.02.2024 and 01.03.2024 at 8 locations in Bengaluru under the provisions PMLA, 2002 at the residential premises of the accused persons Vijaya R Tata and his associates i.e., R S Chandrasekhar, Muniraju K, D Nagendra Babu,…
— ED (@dir_ed) March 5, 2024
ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಬ್ಯಾಂಕ್ ಖಾತೆಯಲ್ಲಿ 11.25 ಕೋಟಿ ರೂಪಾಯಿ ಪತ್ತೆಯಾಗಿದ್ದು, ಇದನ್ನು ಫ್ರೀಜ್ ಮಾಡಲಾಗಿದೆ. ಇದರೊಂದಿಗೆ 120 ಕೋಟಿ (ಅಂದಾಜು) ಮೌಲ್ಯದ ಸ್ಥಿರ/ಚರ ಆಸ್ತಿಗಳಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ