Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡಿ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣ: ಸಿಬಿಐ ತನಿಖೆಗೆ ವಹಿಸಿದ ಹೈಕೋರ್ಟ್ ಆದೇಶ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಂಗಾಳ

West Bengal vs ED: ಸಂದೇಶಖಾಲಿಯಲ್ಲಿ ಇಡಿ ಅಧಿಕಾರಿಗಳ ಮೇಲಿನ ಹಲ್ಲೆ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸಂದೇಶಖಾಲಿ ಹಿಂಸಾಚಾರಗಳಲ್ಲಿ ಪ್ರಮುಖ ಆರೋಪಿಯಾಗಿರುವ ಶೇಖ್ ಶಾಹಜಹಾನ್​ನನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಬೇಕೆಂದೂ ಹೈಕೋರ್ಟ್ ರಾಜ್ಯ ಪೊಲೀಸರಿಗೆ ಸೂಚಿಸಿದೆ.

ಇಡಿ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣ: ಸಿಬಿಐ ತನಿಖೆಗೆ ವಹಿಸಿದ ಹೈಕೋರ್ಟ್ ಆದೇಶ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಂಗಾಳ
ಸಂದೇಶಖಾಲಿಯಲ್ಲಿ ಮಹಿಳೆಯರ ಪ್ರತಿಭಟನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 05, 2024 | 5:15 PM

ಕೋಲ್ಕತಾ, ಮಾರ್ಚ್ 5: ಸಂದೇಶಖಾಲಿಯಲ್ಲಿ (SandeshKhali) ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ನಡೆದ ದಾಳಿ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಿದ ಕಲ್ಕತ್ತಾ ಹೈಕೋರ್ಟ್ (Calcutta High Court) ಆದೇಶವನ್ನು ಪಶ್ಚಿಮ ಬಂಗಾಳ ಪ್ರಶ್ನಿಸಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಆ ಪ್ರಕರಣದ ತನಿಖೆಯನ್ನು ಸದ್ಯ ಬಂಗಾಳ ಪೊಲೀಸ್ ಇಲಾಖೆ ನಡೆಸುತ್ತಿದೆ. ಮೇ 5ರಂದು ಟಿಎಂಸಿ ನಾಯಕ ಶೇಖ್ ಶಾಹಜಹಾನ್ (Sheikh Shahjahan) ಅವರ ನಿವಾಸದಲ್ಲಿ ಅವರ ಬೆಂಬಲಿಗರು ಇಡಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದರು. ಆ ಘಟನೆ ಬಳಿಕ ಶೇಖ್ ಪರಾರಿಯಾಗಿದ್ದರು. ನಾರ್ತ್ ಪರಗಣ ಜಿಲ್ಲೆಯಲ್ಲಿ ಫೆಬ್ರುವರಿ 29ರಂದು ಶೇಖ್ ಶಾಹಜಹಾನ್​ನನ್ನು ಬಂಗಾಳ ಪೊಲೀಸರು ಬಂಧಿಸಿದ್ದರು. ಸದ್ಯ ಅವರನ್ನು ಮಾರ್ಚ್ 10ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ದೆಹಲಿ ಹೈಕೋರ್ಟ್ ಇಡಿ ಅಧಿಕಾರಿಗಳ ಮೇಲಿನ ದಾಳಿ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಲು ಇಂದು (ಮಾ. 5) ಆದೇಶಿಸಿದೆ. ಜೊತೆಗೆ, ಶಾಹಜಹಾನ್​ರನ್ನೂ ಕೂಡ ಸಿಬಿಐ ಸುಪರ್ದಿಗೆ ಒಪ್ಪಿಸುವಂತೆ ತಿಳಿಸಿದೆ. ಈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಇದನ್ನೂ ಓದಿ: ಬಿಹಾರ: ನಾಸಾಗೆ ಹೋಗಲು ಸಜ್ಜಾದ ಭಾಗಲ್ಪುರದ ಯುವ ವಿಜ್ಞಾನಿಗಳ ತಂಡ

ಇಡಿ ಅಧಿಕಾರಿಗಳ ಮೇಲಿನ ಹಲ್ಲೆಯ ಘಟನೆಯ ತನಿಖೆಯನ್ನು ಸಿಬಿಐನ ವಿಶೇಷ ತನಿಖಾ ತಂಡ (ಎಸ್​ಐಟಿ) ಮತ್ತು ಬಂಗಾಳ ಪೊಲೀಸ್ ತಂಡ ಜಂಟಿಯಾಗಿ ನಡೆಸಬೇಕೆಂದು ಜನವರಿ 17ರಂದು ಹೈಕೋರ್ಟ್ ಪೀಠವೊಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಇಡಿ ಮತ್ತು ಬಂಗಾಳ ಸರ್ಕಾರ ಎರಡೂ ಕೂಡ ಮೇಲ್ಮನವಿ ಸಲ್ಲಿಸಿದ್ದವು. ಪ್ರಕರಣದ ತನಿಖೆಯನ್ನು ಸಿಬಿಐ ಮಾತ್ರವೇ ನಡೆಸಬೇಕು ಎಂಬುದು ಇಡಿ ಮನವಿ ಆಗಿತ್ತು. ರಾಜ್ಯ ಪೊಲೀಸರು ಮಾತ್ರವೇ ತನಿಖೆ ನಡೆಸಬೇಕು ಎಂಬುದು ಸರ್ಕಾರದ ವಾದವಾಗಿತ್ತು. ಅಂತಿಮವಾಗಿ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿ ಹೈಕೋರ್ಟ್ ಆದೇಶಿಸಿದೆ.

ನಾರ್ತ್ 24ಪರಗಣ ಜಿಲ್ಲೆಯ ಸಂದೇಶ್​ಖಾಲಿ ದ್ವೀಪದಲ್ಲಿ ಟಿಎಂಸಿ ಮುಖಂಡ ಶೇಖ್ ಶಾಹಜಹಾನ್ ಮತ್ತವರ ಬೆಂಬಲಿಗರು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಕೊಟ್ಟಿರುವುದೂ ಸೇರಿದಂತೆ ಬಹಳಷ್ಟು ಹಿಂಸಾಚಾರ ನಡೆಸಿರುವ ಆರೋಪ ಇದೆ. ಟಿಎಂಸಿ ಪಕ್ಷ ಶೇಖ್ ಶಾಹಜಹಾನ್​ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ