Bengaluru: ಸೈಟ್ ಕೊಂಡುಕೊಳ್ಳುವ ನೆಪದಲ್ಲಿ ವಂಚನೆ ಮಾಡುತ್ತಿದ್ದವ ಅರೆಸ್ಟ್
ಹೊಸ ಟೆಕ್ನಾಲಜಿಗಳನ್ನ ಬಳಸಿ ಸೈಟ್ ಕೊಂಡುಕೊಳ್ಳುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನ ಇದೀಗ ಈಶಾನ್ಯ ವಿಭಾಗ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಆಂದ್ರ ಪ್ರದೇಶದ ವಿನೋದ್ ಕುಮಾರ್ ರೆಡ್ಡಿ ಎಂಬಾತನು ಸೈಟ್ ಮಾರಾಟದ ಜಾಹಿರಾತು ಹಾಕಿದ್ದವರಿಗೆ ಕರೆ ಮಾಡುವ ಮೂಲಕ , ಸೈಟ್ ಕೊಂಡುಕೊಳ್ಳುವುದಾಗಿ ತಿಳಿಸಿ ಮೀಟಿಂಗ್ ಫೀಕ್ಸ್ ಮಾಡುತ್ತಿದ್ದ ನಂತರ ಸೈಟ್ ಜಾಗಕ್ಕೆ ಬಂದು ಸೈಟ್ ನೋಡಿ ಡೀಲ್ ಖುದುರಿಸುತಿದ್ದ. ಬಳಿಕ ಫೋನ್ ಪೇ ಮೂಲಕ ಅಥವಾ ಆನ್ಲೈನ್ ಬ್ಯಾಂಕಿಂಗ್ ಮೂಲಕ ಅಡ್ವಾನ್ಸ್ ಹಣ ಹಾಕುವುದಾಗಿ ಹೇಳಿ ಬ್ಯಾಂಕ್ ಮಾಹಿತಿ ಪಡೆದ ಬಳಿಕ ಇದು ಯಾಕೊ ಸರಿ ಆಗುತ್ತಿಲ್ಲ ಎಂದು ಸೈಟ್ ಮಾಲಿಕರ ಮೊಬೈಲ್ ಪಡೆದು ಚೆಕ್ ಮಾಡಲು ಮುಂದಾಗುತ್ತಿದ್ದ. ಈ ವೇಳೆಯಲ್ಲಿ ಮೊಬೈಲ್ನ ಪಾಸ್ವರ್ಡ್ ಹಾಗೂ ಫೋನ್ ಪೇ ಪಾಸ್ವರ್ಡ್ ಪಡೆದುಕೊಂಡು ಮೆತ್ತಗೆ ಮೊಬೈಲ್ ಸಹಿತ ಎಸ್ಕೇಪ್ ಆಗುತ್ತಿದ್ದ.
ಇದೇ ಮಾದರಿಯಲ್ಲಿ ಕರ್ನಾಟಕ ಗೋವಾ ಹಾಗೂ ಆಂಧ್ರಪ್ರದೇಶದ ಹಲವು ಕಡೆ ವಂಚನೆ ಮಾಡಿದ್ದ ಅರೋಪಿ. ಪೀಣ್ಯದಲ್ಲಿ ಸೈಟ್ ನೋಡುವುದಾಗಿ ಬಂದು ವಂಚಿಸಿದ್ದ. ಈ ಬಗ್ಗೆ ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಅರೋಪಿಯನ್ನ ಬಂಧಿಸಿ ಹಲವಾರು ಜನರಿಗೆ ವಂಚಿಸಿದ್ದ 1.40 ಲಕ್ಷ ನಗದು, ಒಂದು ಬೊಬೈಲ್ನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ:ವೋಟ್ ಕಳ್ಳತನ ನೋಟ್ ಪ್ರಿಂಟ್ ಮಾಡಿದ್ದಷ್ಟೇ ಅಪರಾಧ: ಮಾನನಷ್ಟ ಮೊಕದ್ದಮೆಗೆ ನಾನು ಭಯಪಡಲ್ಲ -ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಬ್ಲಾಕ್ ಪೇಪರ್ ದಂಧೆ ಬಯಲಿಗೆಳೆದ ಸಿಸಿಬಿ ಪೊಲೀಸರು
ಬೆಂಗಳೂರು: ನಗರದಲ್ಲಿ ಇದೀಗ ಬ್ಲಾಕ್ ಪೇಪರ್ ದಂಧೆ ಶುರುವಾಗಿದ್ದು, ಒಂದು ನೋಟ್ ಕೊಟ್ಟರೆ ಅಂತಹ ನಾಲ್ಕು ನೋಟ್ ಅಗುವಂತಹ ಬ್ಲಾಕ್ ಪೇಪರ್ ಹಾಗೂ ಅದಕ್ಕೆ ಒಂದಷ್ಟು ಅಡೋಡಿನ್ ಜೊತೆ ಬೇರೆ ಕೆಮಿಕಲ್ ನೀಡುತ್ತಿದ್ದರು. ಅರೋಪಿಗಳ ಬಳಿ ಸುಮಾರು ಒಂದು ಕೋಟಿ ಮೌಲ್ಯದ ನಕಲಿ ಭಾರತೀಯ ಹಾಗೂ ವಿದೇಶಿ ನೋಟುಗಳು ಪತ್ತೆಯಾಗಿವೆ.
ಈ ರೀತಿಯ ದಂಧೆ ಅಮೇರಿಕಾದಲ್ಲಿ ಹೆಚ್ಚಾಗಿ ನಡೆಯುತ್ತಿತ್ತು. ಈಗ ಭಾರತದಲ್ಲಿ ಈ ರೀತಿಯ ಚೀಟಿಂಗ್ ಮಾಡಲು ಯತ್ನಿಸಲಾಗಿದೆ. ಸದ್ಯ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಂಧೆ ನಡೆಯುತಿದ್ದ ಬಗ್ಗೆ ಖಚಿತ ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು. ದಾಳಿ ವೇಳೆ ಪ್ರಿಂಟರ್, ಹಣ ಹಾಗೂ ಕೆಮಿಕಲ್ನ್ನು ವಶಕ್ಕೆ ಪಡಿದಿದ್ದಾರೆ. ಅಮರ್ ಮಹಮದ್, ಶಬ್ಬಿರ್, ಯಾಸಿನ್, ರಮೇಶ್ ಬಂಧಿತ ಅರೋಪಿಗಳು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ