AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ 927 ಕೋಟಿ ರೂ ವಂಚನೆ: ಓಜೋನ್ ಅರ್ಬನ್ ಸಿಎಂಡಿ ಬಂಧನ

ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ 927 ಕೋಟಿ ರೂ ವಂಚಿಸಿದ ಆರೋಪದಡಿ ಮಿ. ಓಝೋನ್ ಅರ್ಬನ್ ಇನ್ಫ್ರಾ ಸಿಎಂಡಿ ಎಸ್. ವಾಸುದೇವನ್​​ರನ್ನ ಇ.ಡಿ ಬಂಧಿಸಿದೆ. ಮನೆ ನಿರ್ಮಾಣ ಪೂರ್ಣಗೊಳಿಸದೆ, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ವಾಸುದೇವನ್​​ರನ್ನ 14 ದಿನ ನ್ಯಾಯಾಲಯ ಇ.ಡಿ ಕಸ್ಟಡಿಗೆ ನೀಡಿದೆ.

ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ 927 ಕೋಟಿ ರೂ ವಂಚನೆ: ಓಜೋನ್ ಅರ್ಬನ್ ಸಿಎಂಡಿ ಬಂಧನ
ಎಸ್.ವಾಸುದೇವನ್Image Credit source: tv9 kannada
ಪ್ರದೀಪ್​ ಚಿಕ್ಕಾಟಿ
| Edited By: |

Updated on: Oct 02, 2026 | 4:14 PM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ ವಂಚನೆ ಪ್ರಕರಣ
  • ಮಿ.ಓಜೋನ್ ಅರ್ಬನ್​​ ಕಂಪನಿಯ ಸಿಎಂಡಿ ಎಸ್.ವಾಸುದೇವನ್ ಬಂಧನ
  • ಮನೆ ಖರೀದಿದಾರರಿಗೆ 927.22 ಕೋಟಿ ರೂ ವಂಚಿಸಿರುವುದು ಪತ್ತೆ

ಬೆಂಗಳೂರು, ಅಕ್ಟೋಬರ್​​ 02: ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿ.ಓಜೋನ್ ಅರ್ಬನ್ ಇನ್ಫ್ರಾ ಡೆ.ಪ್ರೈಲಿ.ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ವಾಸುದೇವನ್​ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಮನೆ ಖರೀದಿದಾರರಿಗೆ 927.22 ಕೋಟಿ ರೂ ವಂಚಿಸಿರುವುದು ತನಿಖೆಯಲ್ಲಿ ಪತ್ತೆ ಆಗಿದೆ.

14 ದಿನಗಳ ಕಾಲ ಇಡಿ ವಶಕ್ಕೆ

ಸಿಬಿಐ ಮತ್ತು ಬೆಂಗಳೂರಲ್ಲಿ ದಾಖಲಾಗಿದ್ದ ಎಫ್​​ಐಆರ್​ ಆಧರಿಸಿ ಇ.ಡಿ ತನಿಖೆ ನಡೆಸಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರುವ ವಾಸುದೇವನ್​​ರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ 2002ರ ಅಡಿಯಲ್ಲಿ ಇ.ಡಿಯ ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ಸೆಪ್ಟೆಂಬರ್ 30ರಂದು ಬಂಧಿಸಿದ್ದು, ಅಕ್ಟೋಬರ್ 1ರಂದು ಅವರನ್ನು ಬೆಂಗಳೂರಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಮುಂದಿನ ವಿಚಾರಣೆಗಾಗಿ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಿದೆ.

927.22 ಕೋಟಿ ರೂ ಹಣ ದುರ್ಬಳಕೆ

ಗ್ರಾಹಕರಿಗೆ ಅಪಾರ್ಟ್‌ಮೆಂಟ್‌ ನೀಡುವುದಾಗಿ ನಂಬಿಸಿ ಹಣ ಸಂಗ್ರಹಿಸಿದ್ದ ಕಂಪನಿ ಮತ್ತು ಅದರ ಪ್ರವರ್ತಕರು, ನಿಗದಿತ ಸಮಯಕ್ಕೆ ಫ್ಲ್ಯಾಟ್‌ಗಳ ನಿರ್ಮಾಣವನ್ನೂ ಪೂರ್ಣಗೊಳಿಸಿಲ್ಲ. ಅಲ್ಲದೇ ಗ್ರಾಹಕರ ನೀಡಿದ ಕೋಟ್ಯಂತರ ರೂ ಹಣವನ್ನೂ ಮರುಪಾವತಿಸಿಲ್ಲ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಇದನ್ನು ಓದಿ: ಅಕ್ರಮ ಹಣ ವರ್ಗಾವಣೆ: ಬೆಂಗಳೂರಿನ 5 ಕಂಪನಿಗಳಿಗೆ ಇಡಿ ಶಾಕ್, 6 ಕೋಟಿ ರೂ ಜಪ್ತಿ

ಇನ್ನು ಮನೆ ಖರೀದಿದಾರರಿಂದ ಸಂಗ್ರಹಿಸಲಾಗಿದ್ದ 927.22 ಕೋಟಿ ರೂ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಈ ಅಕ್ರಮ ಹಣದ ಮೂಲ, ಹಣ ಬೇರೆಡೆಗೆ ವರ್ಗಾವಣೆಗೊಂಡ  ಮಾರ್ಗಗಳು ಮತ್ತು ಆ ಹಣವನ್ನು ಎಲ್ಲೆಲ್ಲಿ ಬಳಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಆರೋಪಿಯನ್ನು ಬಂಧಿಸುವುದು ಅಗತ್ಯವಾಗಿತ್ತು ಎಂದು ಇ.ಡಿ ಸ್ಪಷ್ಟನೆ ನೀಡಿದೆ.

LIVE TV

423.37 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು 2025ರ ಆಗಸ್ಟ್ 1 ರಂದು ಹಲವು ಕಡೆ ಶೋಧ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ನಂತರ ಸುಮಾರು 423.378 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಇದನ್ನೂ ಓದಿ: ಅಟ್ಟಿಕಾ ಗೋಲ್ಡ್‌ ಕಂಪನಿ ಮೇಲೆ ದಾಳಿ: ಸ್ಫೋಟಕ ಮಾಹಿತಿ ಬಯಲಿಗೆಳೆದ ಇಡಿ

ಇದರಲ್ಲಿ ಓಜೋನ್‌ನ ಅವೆನ್ಯೂ ಯೋಜನೆಯ 92 ಮಾರಾಟವಾಗದ ಫ್ಲ್ಯಾಟ್‌ಗಳು, ಆಕ್ವಾ 2 ಯೋಜನೆಯ 13 ಫ್ಲ್ಯಾಟ್‌ಗಳು, 4.5 ಎಕರೆ ವಾಣಿಜ್ಯ ಭೂಮಿ ಹಾಗೂ ವಾಸುದೇವನ್ ಮತ್ತು ಅವರ ಪತ್ನಿಗೆ ಸೇರಿದ ಆಸ್ತಿಗಳು ಸೇರಿವೆ. ಜೊತೆಗೆ ಕರ್ನಾಟಕದ ಮೂಡಿಗೆರೆ ತಾಲೂಕಿನ ಕನ್ನೆಹಳ್ಳಿ ಗ್ರಾಮದಲ್ಲಿರುವ 179 ಎಕರೆ ಭೂಮಿಯನ್ನೂ ಇ.ಡಿ ಜಪ್ತಿ ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಪ್ರದೀಪ್​ ಚಿಕ್ಕಾಟಿ
ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More