ತಂತ್ರಜ್ಞಾನ, ಆವಿಷ್ಕಾರಗಳಿಗೆ ಬೆಂಗಳೂರು ಬೇಕು, ಆದ್ರೆ ಮೂಲ ಸೌಕರ್ಯ ಕೊಡುವಲ್ಲಿ ಸರ್ಕಾರ ಸೋತಿದೆ: ಅಶ್ವತ್ಥನಾರಾಯಣ

ತಂತ್ರಜ್ಞಾನ(Technology) ಮತ್ತು ಆವಿಷ್ಕಾರಗಳಿಗೆ ಎಲ್ಲರಿಗೂ ಬೆಂಗಳೂರು ಬೇಕು, ಆದರೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿಎನ್ ಅಶ್ವತ್ಥನಾರಾಯಣ(CN Ashwath Narayan) ಹೇಳಿದ್ದಾರೆ. ಉದ್ಯಮಿ ಮೋಹನ್​ದಾಸ್ ಪೈ ಎಕ್ಸ್​ನಲ್ಲಿ ಮಾಡಿರುವ ಪೋಸ್ಟ್​ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಭ್ರಷ್ಟಾಚಾರ ಸಹಿಸಲಾಗದ ಮಟ್ಟಿಗಿದೆ. ಬಿಲ್ಡರ್​ಗಳು ಇಂದು ಕಟ್ಟಡಗಳನ್ನು ಕಟ್ಟಲು ಸಿದ್ಧರಿಲ್ಲ. ಹೀಗಾಗಿ ಎಲ್ಲರಿಗೂ ಹೈದರಾಬಾದ್ ಆಕರ್ಷಣೀಯವಾಗಿದೆ ಎಂದರು.

ತಂತ್ರಜ್ಞಾನ, ಆವಿಷ್ಕಾರಗಳಿಗೆ ಬೆಂಗಳೂರು ಬೇಕು, ಆದ್ರೆ ಮೂಲ ಸೌಕರ್ಯ ಕೊಡುವಲ್ಲಿ ಸರ್ಕಾರ ಸೋತಿದೆ: ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ
Edited By:

Updated on: Nov 29, 2023 | 12:41 PM

ತಂತ್ರಜ್ಞಾನ(Technology) ಮತ್ತು ಆವಿಷ್ಕಾರಗಳಿಗೆ ಎಲ್ಲರಿಗೂ ಬೆಂಗಳೂರು ಬೇಕು, ಆದರೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿಎನ್ ಅಶ್ವತ್ಥನಾರಾಯಣ(CN Ashwath Narayan) ಹೇಳಿದ್ದಾರೆ. ಉದ್ಯಮಿ ಮೋಹನ್​ದಾಸ್ ಪೈ ಎಕ್ಸ್​ನಲ್ಲಿ ಮಾಡಿರುವ ಪೋಸ್ಟ್​ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಭ್ರಷ್ಟಾಚಾರ ಸಹಿಸಲಾಗದ ಮಟ್ಟಿಗಿದೆ. ಬಿಲ್ಡರ್​ಗಳು ಇಂದು ಕಟ್ಟಡಗಳನ್ನು ಕಟ್ಟಲು ಸಿದ್ಧರಿಲ್ಲ. ಹೀಗಾಗಿ ಎಲ್ಲರಿಗೂ ಹೈದರಾಬಾದ್ ಆಕರ್ಷಣೀಯವಾಗಿದೆ ಎಂದರು.

ವ್ಯಾಪಾರಕ್ಕೆ, ವ್ಯವಹಾರಕ್ಕೆ ಹೈದರಾಬಾದ್ ಉತ್ತಮ ಸ್ಥಳವೆಂಬಂತಾಗಿದೆ. ಬೆಂಗಳೂರಿನಲ್ಲಿ 100 ಸ್ಕ್ವೇರ್​ಫೀಟ್​ ನಿರ್ಮಾಣವಾದರೆ ಹೈದರಾಬಾದ್​ನಲ್ಲಿ 1000 ಸ್ಕ್ವೇರ್​ಫೀಟ್​ ನಿರ್ಮಾಣವಾಗುತ್ತಿದೆ.

ಇಲ್ಲಿ ಒಂದು ಪಟ್ಟು ಕಟ್ಟಡ ನಿರ್ಮಾಣವಾದರೆ ಅಲ್ಲಿ ಹತ್ತು ಪಟ್ಟು ಕಟ್ಟಡಗಳು ಏಳುತ್ತಿವೆ, ಸರ್ಕಾರದ ನಿರ್ಲಕ್ಷ್ಯದಿಂದ ಬೆಂಗಳೂರು ನಗರಕ್ಕೆ ಕಂಟಕವಾಗಿದೆ.

ಮತ್ತಷ್ಟು ಓದಿ: Bengaluru: ಅತ್ಯುತ್ತಮ ಜಾಗತಿಕ ತಂತ್ರಜ್ಞಾನ ಆವಿಷ್ಕಾರ ಕೇಂದ್ರಗಳಲ್ಲಿ ಬೆಂಗಳೂರಿಗೆ ಎಂಟನೇ ಸ್ಥಾನದ ಗರಿ

ಏನೇ ಮಾಡಿದರೂ ಇವರೆಲ್ಲಾ ಬೆಂಗಳೂರಿಗೆ ಬಂದೇ ಬರುತ್ತಾರೆ ಎಂಬ ಮನಸ್ಥಿತಿಯನ್ನು ಬಿಡುಬೇಕು. ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟ ಎಚ್ಚೆತ್ತುಕೊಳ್ಳಬೇಕು, ಉದ್ಯಮಿ ಮೋಹನ್​ ದಾಸ್ ಪೈ ಅವರ ಅಭಿಪ್ರಾಯ ಸೂಕ್ತವಾಗಿದೆ. ದೇಶಕ್ಕೆ ಭರವಸೆದಾಯಕವಾದ ನಗರ ಬೆಂಗಳೂರು, ಇದನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.

ಮೋಹನ್​ದಾಸ್ ಪೈ ಎಕ್ಸ್ ಪೋಸ್ಟ್​
ಬೆಂಗಳೂರಿನ ಐಟಿ ಸ್ಥಾನಮಾನವನ್ನು ಹೈದರಾಬಾದ್ ಸಿಂಹಾಸನದಿಂದ ಕೆಳಗಿಳಿಸುತ್ತಿದೆ. ಕಳೆದ 10 ವರ್ಷಗಳಿಂದ ಬೆಂಗಳೂರನ್ನು ಕಡೆಗಾಣಿಸಲಾಗುತ್ತಿದೆ, ನಗರವನ್ನು ಸುಧಾರಿಸಲು ಮುಂದಾದರೂ ಹೆಚ್ಚಿನ ಆಸಕ್ತಿಯನ್ನು ಸರ್ಕಾರ ತೋರಿಸಲಿ ಎನ್ನುವುದು ನನ್ನ ಆಶಾಭಾವನೆ ಎಂದು ಹೇಳಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us