ಬೆಂಗಳೂರು, ಆ.16: ಬೆಂಗಳೂರು ನಮ್ಮ ಮೆಟ್ರೋ(Namma Metro) ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, 3ನೇ ಹಂತದ ಮೆಟ್ರೋ ಯೋಜನೆಗೆ ಕೇಂದ್ರ ಸಚಿವ ಸಂಪುಟ ಗ್ರೀನ್ಸಿಗ್ನಲ್ ನೀಡಿದೆ. ಬರೋಬ್ಬರಿ 15,611 ಕೋಟಿ ರೂ. ಕಾಮಗಾರಿ ಇದಾಗಿದ್ದು, ಕೇಂದ್ರ ಒಪ್ಪಿಗೆ ನೀಡಿದೆ. ಕಾರಿಡಾರ್-1 ಜೆಪಿ ನಗರದ ನಾಲ್ಕನೇ ಹಂತದಿಂದ ಕೆಂಪಾಪುರದವರೆಗೆ 21 ಸ್ಟೇಷನ್ಗಳು ಇದ್ದು, 32.15 ಕಿಮೀ ವಿಸ್ತೀರ್ಣವಿದೆ.
ಇನ್ನು ಕಾರಿಡಾರ್- 2 ಹೊಸಹಳ್ಳಿ ಯಿಂದ ಕಡಬಗೆರೆಯವರೆಗೆ ಒಂಬತ್ತು ಸ್ಟೇಷನ್ಗಳಿದ್ದು, 12.50 ಕಿಮೀ ಮಾರ್ಗ ಇದಾಗಿದೆ. ಈ ಮೂಲಕ ಒಟ್ಟು ಮೆಟ್ರೋ ವಿಸ್ತೀರ್ಣ 220.20 ಕಿ.ಮೀ ಹೊಂದಲಿದೆ.
ಇತ್ತೀಚೆಗೆ ಬೆಂಗಳೂರಿನ ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ, ಹೊಸ ಮಾರ್ಗಗಳ ಲೈನ್ನಲ್ಲಿ ಪಿಎಸ್ಡಿ ಡೋರ್ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರೂಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ. ಎಲ್ಲಾ ಮೆಟ್ರೋ ಸ್ಟೇಷನ್ಗಳಿಗೂ ಪಿಎಸ್ಡಿ ಅಳವಡಿಸಲು 700 ರಿಂದ 800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮೆಟ್ರೋ ಟಿಕೆಟ್ ದರ ಹೆಚ್ಚಿಸುವ ಕುರಿತು ಬಿಎಂಆರ್ಸಿಎಲ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಮಧ್ಯೆ ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್ನ್ಯೂಸ್ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ