ಸಿಬ್ಬಂದಿ ಸುರಕ್ಷತೆಗಾಗಿ ಹೊಸ ಹೆಜ್ಜೆ ಇಟ್ಟ ಬೆಂಗಳೂರಿನ ಜಯದೇವ ಆಸ್ಪತ್ರೆ..!

| Updated By: ರಮೇಶ್ ಬಿ. ಜವಳಗೇರಾ

Updated on: Dec 18, 2024 | 9:33 PM

ಪಶ್ಚಿಮ ಬಂಗಾಳದ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆಸ್ಪತ್ರೆಯಲ್ಲೂ ಮಹಿಳೆಯರಿಗೆ ಭದ್ರತೆ ಇಲ್ವಾ ಎನ್ನುವ ಚರ್ಚೆಯಲ್ಲಿರುವಾಗಲೇ ಬೆಂಗಳೂರಿನ ಜಯದೇವ ಆಸ್ಪತ್ರೆ ಸಿಬ್ಬಂದಿ ಭದ್ರತೆಗಾಗಿ ಒಂದು ಆ್ಯಪ್​ ಸಿದ್ಧಪಡಿಸಿದೆ. ಹೌದು.. ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ಭದ್ರತೆಗಾಗಿ ಮೊದಲ ಭದ್ರತಾ ಆಪ್ ರೆಡಿ ಮಾಡಿದೆ. ಮೊದಲ ಪ್ರಯತ್ನದಲ್ಲಿ ಜಯದೇವ ಆಸ್ಪತ್ರೆ ಯಶಸ್ವಿಯಾಗಿದೆ.

ಸಿಬ್ಬಂದಿ ಸುರಕ್ಷತೆಗಾಗಿ ಹೊಸ ಹೆಜ್ಜೆ ಇಟ್ಟ ಬೆಂಗಳೂರಿನ ಜಯದೇವ ಆಸ್ಪತ್ರೆ..!
Jayadeva Hospital
Follow us on

ಬೆಂಗಳೂರು, (ಡಿಸೆಂಬರ್ 18): ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ವೈದ್ಯೆಯ ಭೀಕರ ಕೊಲೆ ಮಹಿಳೆಯರ ರಕ್ಷಣೆಯ ಪ್ರಶ್ನೆ ಹುಟ್ಟಿ ಹಾಕಿದೆ. ಕೆಲಸ ಮಾಡುವ ಜಾಗದಲ್ಲಿರುವ ದುರಳರಿಂದ, ಹೊರಗಿನ ಕಟುಕರಿಂದ ರಕ್ಷಣೆ ಎಲ್ಲಿ ಎಂಬ ಆತಂಕದ ಮಧ್ಯೆ ಬೆಂಗಳೂರಿನ ಸರ್ಕಾರಿ ಸಾಮ್ಯದ ಜಯದೇವ ಆಸ್ಪತ್ರೆ, ತನ್ನ ಸಿಬ್ಬಂದಿಗಳಿಗಾಗಿ ಮೊದಲ ಸೇಫ್ಟಿ ಆಪ್ ಸಿದ್ಧಪಡಿಸಿದೆ. ಹೌದು.. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ತನ್ನ ಸಿಬ್ಬಂದಿಗಳ ರಕ್ಷಣೆಗಾಗಿ ಸುಹೃದ್ ಆ್ಯಪ್ ಬಿಡುಗಡೆಗೊಳಿಸಿದೆ.

ಸುಹೃದ್ ಎಂದರೆ ಒಳ್ಳೆಯ ಹೃದಯ ಎಂದರ್ಥ. ಕರ್ತವ್ಯ ನಿರತ ವೈದ್ಯಕೀಯ ಸಿಬ್ಬಂದಿಗಳು ಯಾವುದೇ ರೀತಿಯ ಕಷ್ಟಕ್ಕೆ ಸಿಲುಕಿದಾಗ ಒಬ್ಬೊರಿಗೊಬ್ಬರು ಹೃದಯವಂತಿಕೆಯಿಂದ ನೆರವಾಗಲಿ ಎಂಬ ಉದ್ದೇಶದೊಂದಿಗೆ ಈ ಆಪ್ ಅಭಿವೃದ್ಧಿ ಪಡಿಸಲಾಗಿದೆ. ಇತ್ತೀಚಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಲೈಗಿಂಕ ಕಿರುಕುಳ, ಹಿಂಸಾಚಾರ ಸೇರಿದಂತೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ಪ್ರಥಮ ಬಾರಿಗೆ ಈ ಕ್ರಮ ಕೈಗೊಳ್ಳಲಾಗಿದೆ.

ಸುಹೃದ್ ಆ್ಯಪ್ ಹೇಗೆ ವರ್ಕ್ ಆಗುತ್ತೆ?

  • ಸುಹೃದ್ ಆ್ಯಪ್ ಅನ್ನು ಸಿಬ್ಬಂದಿಗಳು ತಮ್ಮ ಮೊಬೈಲ್​ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.
  •  ಆ್ಯಪ್​ನಲ್ಲಿ ಎಸ್ಓಎಸ್ ಅಲರ್ಟ್ ಮೂಲಕ ರಕ್ಷಣೆ ಸಿಗುತ್ತದೆ.
  •  ಮಹಿಳೆಯರು ಸುರಕ್ಷತೆ, ರಕ್ಷಣೆಗೆ ಆಪ್ ಒತ್ತುವ ಮೂಲಕ ಸಹಾಯ ಪಡೆಯಬಹುದು.
  •  ಎಸ್ಓಎಸ್ ಮೂಲಕ ವಾಯ್ಸ್ ಮೆಸೇಜ್ ಕಳುಹಿಸಬಹುದು.
  •  ಶೋಷಣೆಗೆ ಒಳಪಟ್ಟ ಲೋಕೇಷನ್ ಶೇರ್ ಮಾಡಬಹುದು.
  •  ಅಲರ್ಟ್ ಮೇಸೆಜ್ ಎಲ್ಲಾ ಸಿಬ್ಬಂದಿಗಳಿಗೆ ತಲಪುತ್ತದೆ.
  •  ಜಿಪಿಎಸ್ ಮಾನಿಟರಿಂಗ್ ಇರುತ್ತದೆ.
  •  ಗಾಬರಿಯಾದರೆ ಜಸ್ಟ್ 3 ಸಲ ಮೊಬೈಲ್ ಶೇಕ್ ಮಾಡಿದ್ರೆ ಸಾಕು ಎಲ್ಲರಿಗೂ ಅಲರ್ಟ್ ಮೆಸೇಜ್ ತಲಪುತ್ತದೆ.
  •  ಆಸ್ಪತ್ರೆಯಲ್ಲಿ ನಡೆಯುವ ಕಿರುಕುಳದ ಬಗ್ಗೆ ಅನಾಮಧೇಯವಾಗಿ ದೂರು ಸಲ್ಲಿಸಬಹುದು.

ಜಯದೇವ ಆಸ್ಪತ್ರೆಯ ಲೈಗಿಂಕ ಕಿರುಕುಳ ತಡೆಗಟ್ಟುವಿಕೆ ತಂಡದ ವತಿಯಿಂದ ಈ ಆಪ್ ಅಭಿವೃದ್ಧಿ ಪಡಿಸಲಾಗಿದೆ. ಇದರ ನೇತೃತ್ವವನ್ನು ಪ್ರೊ.ಜಯಶ್ರೀ ಖರ್ಗೆ ಅವರು ವಹಿಸಿದ್ದಾರೆ. ಡಾ.ಬಂದನ ಅವರು ನಾಥ್ ನೀಡಿದ್ರೆ, ಇಂಜಿನಿಯರ್ ನವೀನ್ ಹೆಗ್ಡೆ ಈ ಆಪ್ ಅಭಿವೃದ್ಧಿ ಪಡಿಸಿದ್ದಾರೆ.

ಒಟ್ಟಿನಲ್ಲಿ ಸಿಬ್ಬಂದಿಗಳ ಸುರಕ್ಷತೆಗಾಗಿ ಜಯದೇವ ಆಸ್ಪತ್ರೆ ಹೊಸ ಹೆಜ್ಜೆ ಮುಂದಿಟ್ಟಿದೆ. ಇದೇ ಮಾದರಿಯಲ್ಲಿ ಎಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಮ ಕೈಗೊಂಡರೆ ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುವ ಹಲ್ಲೆ, ಮಹಿಳೆಯರ ಮೇಲಿನ ಲೈಗಿಂಕ ದೌರ್ಜನ್ಯವನ್ನು ತಡೆಗಟ್ಟಬಹುದು..