ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವಕ್ಕೆ ಅಧಿಕೃತ ಚಾಲನೆ; ರಥದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ

ರಥದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಲಾಗಿದೆ. ಇಂದಿನಿಂದ ಮೊದಲಾಗಿ ಏಪ್ರಿಲ್ 16ರ ವರೆಗೆ ನಿತ್ಯ ಪೂಜೆ, ಉತ್ಸವ ನಡೆಯಲಿದೆ. ಏಪ್ರಿಲ್ 16 ರಂದು ಅದ್ಧೂರಿಯಾಗಿ ಕರಗ ಉತ್ಸವ ನಡೆಯಲಿದೆ. ಇಂದಿನಿಂದ ಧರ್ಮರಾಯಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರ ಇರಲಿದೆ.

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವಕ್ಕೆ ಅಧಿಕೃತ ಚಾಲನೆ; ರಥದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ
ಬೆಂಗಳೂರು ಕರಗ ಉತ್ಸವ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Apr 09, 2022 | 9:51 AM

ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವಕ್ಕೆ ಅಧಿಕೃತ ಚಾಲನೆ ಲಭಿಸಿದೆ. ಧರ್ಮರಾಯಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಮತ್ತು ಬೆಳಗಿನ ಜಾವ 5 ಗಂಟೆಗೆ ದೆರವಸ್ಥಾನದ ಮುಂದೆ ಧ್ವಜಾರೋಹಣ ಮಾಡುವ ಮೂಲಕ ಇಂದು (ಏಪ್ರಿಲ್ 9) ಚಾಲನೆ ನೀಡಲಾಗಿದೆ. ದೇವಸ್ಥಾನದ ಮುಖ್ಯ ಅರ್ಚಕ ಎ. ಜ್ಞಾನೇಂದ್ರರಿಂದ ಕರಗಕ್ಕೆ ಚಾಲನೆ ಕೊಡಲಾಗಿದೆ. ರಥದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಲಾಗಿದೆ. ಇಂದಿನಿಂದ ಮೊದಲಾಗಿ ಏಪ್ರಿಲ್ 16ರ ವರೆಗೆ ನಿತ್ಯ ಪೂಜೆ, ಉತ್ಸವ ನಡೆಯಲಿದೆ. ಏಪ್ರಿಲ್ 16 ರಂದು ಅದ್ಧೂರಿಯಾಗಿ ಕರಗ ಉತ್ಸವ ನಡೆಯಲಿದೆ. ಇಂದಿನಿಂದ ಧರ್ಮರಾಯಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರ ಇರಲಿದೆ.

ಈ ಮಧ್ಯೆ ರಾಜ್ಯದಲ್ಲಿ ಸೃಷ್ಟಿಯಾಗಿರುವ ಧರ್ಮ ಸಂಘರ್ಷ ಕರಗದ ಮೇಲೆ ಕರಿ ನೆರಳು ಬೀರಿದೆ. ಸಿಟಿಯ ವೈಭವದ ಉತ್ಸವಕ್ಕೂ ಧರ್ಮದ ಕಿಡಿ ತಟ್ಟಿದೆ. ದರ್ಗಾಗೆ ಕರಗ ಸಾಗಬಾರದು ಎಂಬ ಕೂಗು ಎದ್ದಿದೆ. ಬೆಂಗಳೂರು ಕರಗ ದರ್ಗಾಗೆ ಹೋಗಬಾರದೆಂದು ಕೆಲ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಅಭಿಯಾನ ಶುರು ಮಾಡಿವೆ. ಕರಗದ ಕೊನೆಯ ದಿನದಂದು ಕರಗ ಬೆಂಗಳೂರು ದರ್ಶನವಿರಲಿದೆ. ಈ ವೇಳೆ ಚಿಕ್ಕಪೇಟೆಯ ಮಸ್ತಾನ್ ಸಾಬ್ ದರ್ಗಾಕ್ಕೂ ಕರಗ ಭೇಟಿ ಕೊಟ್ಟು ಆಶಿರ್ವಾದ ನೀಡಲಿದೆ. ಆದ್ರೆ, ಈ ಸಲ ಕರಗ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ಕೊಡ ಬಾರದು ಎಂದು ಹಿಂದೂ ಪರ ಸಂಘಟನೆಗಳು ಬೇಡಿಕೆ ಇಟ್ಟಿವೆ. 300ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಕರಗ ಉತ್ಸವದ ಪದ್ಧತಿ ಬದಲಾಯಿಸಲು ಹಿಂದೂ ಪರ ಸಂಘಟನೆಗಳು ಮುಂದಾಗಿವೆ.

ಇತ್ತ ಕರಗ ಸಮಿತಿ ನೂರಾರು ವರ್ಷಗಳಿಂದ ಈ ಸಂಪ್ರದಾಯ ನಡೆಸಿಕೊಂಡು ಬಂದಿದೆ. ಈ ಬಾರಿಯೂ ನಡೆಯುತ್ತದೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ. ಅಲ್ಲದೆ ಸ್ಥಳೀಯ ಶಾಸಕ ಉದಯ್ ಗರುಡಚಾರ್, ನಾನೊಬ್ಬ ಹಿಂದೂವಾಗಿ ಕರಗ ಮಸ್ತಾನ್ ದರ್ಗಾಕ್ಕೆ ಹೋಗಬೇಕು ಎಂದು ಹೇಳುತ್ತೇನೆ. ಮಸ್ತಾನ್ ಸಾಬ್ ದರ್ಗಾ ಮಂಡಳಿ ಕೂಡ ಕರಗಮ್ಮನ ಪೂಜೆ ಸಿದ್ಧವಾಗಿದೆ. ಭಾರತವೊಂದು ಜ್ಯಾತ್ಯಾತೀತ ರಾಷ್ಟ್ರ, ಶಾಂತಿ ಸೌಹಾರ್ದತೆಯಿಂದ ಇರಬೇಕು. ಅದಕ್ಕೆ ಧಕ್ಕೆ ತರುವ ಯಾವ ಕೆಲಸವೂ ಆಗಬಾರದು ಅಂದಿದ್ದಾರೆ.

ದರ್ಗಾಕ್ಕೆ ಭೇಟಿ ನೀಡುವಾಗ ನಾವು ಭಕ್ತಿಯಿಂದ ತಾಯಿಯ ಪೂಜೆ ಮಾಡ್ತಿವಿ

ಇತ್ತ ಕರಗ ಮಸ್ತಾನ್ ಸಾಬ್ ದರ್ಗಾ ಒಳಗೆ ಬರೋ ವಿಚಾರಕ್ಕೆ ಉತ್ತರ ನೀಡಿರೋ ಮಸ್ತಾನ್ ಸಾಬ್ ದರ್ಗಾ ಪೂಜಾರಿ ತಬ್ರೀಜ್ ಆಹಮದ್, ಮಸ್ತಾನ್ ಸಾಬ್ ಧರ್ಮರಾಯಸ್ವಾಮಿಯ ನಂಟು 300 ವರ್ಷದ್ದು. ಎಷ್ಟೇ ವಿವಾದವಿದ್ರು ಪ್ರತಿಬಾರಿಯಂತೆ ಈ ಬಾರಿಯು ಕರಗ ದರ್ಗಾಕ್ಕೆ ಭೇಟಿ ನೀಡುತ್ತೆ. ದರ್ಗಾಗೆ ಭೇಟಿ ಕೊಡಲು ಈಗಾಗಲೇ ನಾವೇ ದೇವಾಲಯಕ್ಕೆ ಹೋಗಿ ಆಹ್ವಾನ ನೀಡಿದ್ದೆವೆ. ಹಿಂದೂ ಮುಸ್ಲಿಂ ಸಂಬಂಧ ಒಡೆಯುವ ಕೆಲಸ ಇಲ್ಲಿ ನಡೆಯಲ್ಲ. ದರ್ಗಾಕ್ಕೆ ಭೇಟಿ ನೀಡುವಾಗ ನಾವು ಭಕ್ತಿಯಿಂದ ಪೂಜೆ ಮಾಡ್ತಿವಿ. ನಮಗೆ ಆ ತಾಯಿ ಆರ್ಶಿವಾದ ಮಾಡ್ತಾಳೆ. ಈ ಬಾರಿಯು ಬಹಳ ವಿಜೃಂಭಣೆಯಿಂದ ಆ ತಾಯಿಗರ ಪೂಜೆ ಮಾಡ್ತಿವಿ ಎಂದಿದ್ದಾರೆ.

ಕರಗ ಉತ್ಸವದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ

ಕರಗ ಸಮಿತಿ ಸೂಚಿಸಿದ ಮಾರ್ಗದಲ್ಲಿಯೇ ಉತ್ಸವ ಸಾಗಲಿದೆ. ಇದಕ್ಕೆ ಯಾರೇ ಅಡ್ಡಿಪಡಿಸಿದ್ರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ತೇವೆ ಎಂದು ಬೆಂಗಳೂರಿನಲ್ಲಿ ಡಿಸಿಪಿ ಅನುಚೇತ್ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರು ಕರಗ ಉತ್ಸವಕ್ಕೆ ಸೂಕ್ತ ಭದ್ರತೆ ಒದಗಿಸಿದ್ದೇವೆ. ಭದ್ರತೆಗಾಗಿ 450 ಪೊಲೀಸರು, KSRP ತುಕಡಿ ನಿಯೋಜನೆ ಮಾಡಲಾಗಿದೆ. ಕರಗ ಉತ್ಸವದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಿಡ್ಲಘಟ್ಟ: ಕರಗ ಉತ್ಸವದಲ್ಲಿ ಅಶ್ಲೀಲ ನೃತ್ಯ, ವೃದ್ದನ ಜೊತೆ ಬೆಡ್‍ರೂಂ ದೃಶ್ಯದಲ್ಲಿ ಆರ್ಕೆಸ್ಟ್ರಾ ನಟಿಮಣಿಯರ ಫುಲ್ ರೊಮ್ಯಾನ್ಸ್!

ಇದನ್ನೂ ಓದಿ: ಕರಗ ದರ್ಗಾಗೆ ಹೋಗುವ ಸಂಪ್ರದಾಯಕ್ಕೆ ತೀವ್ರ ವಿರೋಧ; 300 ವರ್ಷಗಳ ನಂಟನ್ನು ಮುರಿಯಲು ಮುಂದಾದ ಹಿಂದೂ ಪರ ಸಂಘಟನೆಗಳು

Published On - 7:42 am, Sat, 9 April 22

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು