ಕರಗ ದರ್ಗಾಗೆ ಹೋಗುವ ಸಂಪ್ರದಾಯಕ್ಕೆ ತೀವ್ರ ವಿರೋಧ; 300 ವರ್ಷಗಳ ನಂಟನ್ನು ಮುರಿಯಲು ಮುಂದಾದ ಹಿಂದೂ ಪರ ಸಂಘಟನೆಗಳು

ದರ್ಗಾಗೆ ಕರಗ ಸಾಗಬಾರದು ಎಂಬ ಕೂಗು ಎದ್ದಿದೆ. ಬೆಂಗಳೂರು ಕರಗ ದರ್ಗಾಗೆ ಹೋಗಬಾರದೆಂದು ಕೆಲ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಅಭಿಯಾನ ಶುರು ಮಾಡಿವೆ.

ಕರಗ ದರ್ಗಾಗೆ ಹೋಗುವ ಸಂಪ್ರದಾಯಕ್ಕೆ ತೀವ್ರ ವಿರೋಧ; 300 ವರ್ಷಗಳ ನಂಟನ್ನು ಮುರಿಯಲು ಮುಂದಾದ ಹಿಂದೂ ಪರ ಸಂಘಟನೆಗಳು
ಕರಗ ಉತ್ಸವ
Follow us
| Updated By: ಆಯೇಷಾ ಬಾನು

Updated on:Apr 08, 2022 | 11:33 AM

ಬೆಂಗಳೂರು: ವಿಶ್ವ ವಿಖ್ಯಾತ ಕರಗ ಮಹೋತ್ಸವ(Bengaluru Karaga) ಇದೇ ಏಪ್ರಿಲ್ 16ರಿಂದ ಆರಂಭವಾಗಲಿದೆ. ಹೀಗಾಗಿ ಧರ್ಮರಾಯಸ್ವಾಮಿ ದೇಗುಲದಲ್ಲಿ(Dharmaraya Swamy Temple) ಸಿದ್ಧತೆಗಳು ಶುರುವಾಗಿವೆ. ಆದ್ರೆ ರಾಜ್ಯದಲ್ಲಿ ಸೃಷ್ಟಿಯಾಗಿರುವ ಧರ್ಮ ಸಂಘರ್ಷ ಕರಗದ ಮೇಲೆ ಕರಿ ನೆರಳು ಬೀರಿದೆ. ಸಿಟಿಯ ವೈಭವದ ಉತ್ಸವಕ್ಕೂ ಧರ್ಮದ ಕಿಡಿ ತಟ್ಟಿದೆ. ದರ್ಗಾಗೆ ಕರಗ ಸಾಗಬಾರದು ಎಂಬ ಕೂಗು ಎದ್ದಿದೆ. ಬೆಂಗಳೂರು ಕರಗ ದರ್ಗಾಗೆ ಹೋಗಬಾರದೆಂದು ಕೆಲ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಅಭಿಯಾನ ಶುರು ಮಾಡಿವೆ.

ಬೆಂಗಳೂರು ಕರಗಕ್ಕೆ ಕ್ಷಣಗಣನೆ ಶುರುವಾಗಿದೆ. ಏಪ್ರಿಲ್ 8ರಿಂದ ಶುರುವಾಗಿ ಏಪ್ರಿಲ್ 18ಕ್ಕೆ ಕರಗ ಸಮಾರೋಪಗೊಳ್ಳಲಿದೆ. ಇದರ ಕೊನೆಯ ದಿನದಂದು ಕರಗ ಬೆಂಗಳೂರು ದರ್ಶನವಿರಲಿದೆ. ಈ ವೇಳೆ ಚಿಕ್ಕಪೇಟೆಯ ಮಸ್ತಾನ್ ಸಾಬ್ ದರ್ಗಾಕ್ಕೂ ಭೇಟಿ ಕೊಟ್ಟು ಆಶಿರ್ವಾದ ನೀಡಲಿದೆ. ಆದ್ರೆ, ಈ ಸಲ ಕರಗ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ಕೊಡ ಬಾರದು ಎಂದು ಹಿಂದೂ ಪರ ಸಂಘಟನೆಗಳು ಬೇಡಿಕೆ ಇಟ್ಟಿವೆ. ದೇವಾಲಯಕ್ಕೆ ಮುಸ್ಲಿಮರು ಬಂದು ಪೂಜೆ ಮಾಡಲ್ಲ. ಹೀಗಾಗಿ, ಮುಸ್ಲಿಮರ ದರ್ಗಾಗೆ ನಮ್ಮ ಕರಗ ಯಾಕೆ ಹೋಗ್ಬೇಕು ಎಂದು ಪ್ರಶ್ನೆ ಎತ್ತಿದ್ದಾರೆ. 300ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಕರಗ ಉತ್ಸವದ ಪದ್ಧತಿ ಬದಲಾಯಿಸಲು ಹಿಂದೂ ಪರ ಸಂಘಟನೆಗಳು ಮುಂದಾಗಿವೆ.

ಹಿಂದಿನಿಂದಲೂ ಬಂದಿರೋ ಸಂಪ್ರದಾಯ ತಪ್ಪು. ಅದನ್ನು ಈ ಬಾರಿ ಮುರಿಯ ಬೇಕು ಎಂದು ಹೋರಾಟಗಾರರು ಆಕ್ರೋಶ ಹೊರ ಹಾಕಿವೆ. ನಾವಾಗಿ ಅವರಿಗೆ ಆಹ್ವಾನ ಕೊಡುವುದು ತಪ್ಪು. ಈ ಬಗ್ಗೆ ಮುಂದೆ ಹೋರಾಟ ಮಾಡುತ್ತೀವಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ಕರಗ ಸಮಿತಿ ಜೊತೆಗೆ ಹೋರಾಟಗಾರರು ಮಾತಾಡಿದ್ದಾರೆ. ಇತ್ತ ಕರಗ ಸಮಿತಿ ನೂರಾರು ವರ್ಷಗಳಿಂದ ಈ ಸಂಪ್ರದಾಯ ನಡೆಸಿಕೊಂಡು ಬಂದಿದೆ. ಈ ಬಾರಿಯೂ ನಡೆಯುತ್ತದೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ.

ಅಲ್ಲದೆ ಸ್ಥಳೀಯ ಶಾಸಕ ಉದಯ್ ಗರುಡಚಾರ್, ನಾನೊಬ್ಬ ಹಿಂದೂವಾಗಿ ಕರಗ ಮಸ್ತಾನ್ ದರ್ಗಾಕ್ಕೆ ಹೋಗಬೇಕು ಎಂದು ಹೇಳುತ್ತೇನೆ. ಮಸ್ತಾನ್ ಸಾಬ್ ದರ್ಗಾ ಮಂಡಳಿ ಕೂಡ ಕರಗಮ್ಮನ ಪೂಜೆ ಸಿದ್ಧವಾಗಿದೆ. ಭಾರತವೊಂದು ಜ್ಯಾತ್ಯಾತೀತ ರಾಷ್ಟ್ರ, ಶಾಂತಿ ಸೌಹಾರ್ದತೆಯಿಂದ ಇರಬೇಕು. ಅದಕ್ಕೆ ಧಕ್ಕೆ ತರುವ ಯಾವ ಕೆಲಸವೂ ಆಗಬಾರದು ಅಂದಿದ್ದಾರೆ. ಪ್ರತಿ ಬಾರಿ ಕರಗ ಶಕ್ತ್ಯೋತ್ಸವ ಸಂದರ್ಭದಲ್ಲಿ ಕರಗ ಸಮಿತಿ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿ ಆಹ್ವಾನ ನೀಡ್ತಿದ್ರು. ಆದರೆ ಈ ಬಾರಿ ಮಸ್ತಾನ್ ಸಾಬ್ ದರ್ಗಾದ ಮೌಲ್ವಿಗಳೇ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಆಹ್ವಾನ ನೀಡಿರೋದು ಈ ಬಾರಿಯ ವಿಶೇಷ.

ದರ್ಗಾಕ್ಕೆ ಭೇಟಿ ನೀಡುವಾಗ ನಾವು ಭಕ್ತಿಯಿಂದ ತಾಯಿಯ ಪೂಜೆ ಮಾಡ್ತಿವಿ ಇತ್ತ ಕರಗ ಮಸ್ತಾನ್ ಸಾಬ್ ದರ್ಗಾ ಒಳಗೆ ಬರೋ ವಿಚಾರಕ್ಕೆ ಉತ್ತರ ನೀಡಿರೋ ಮಸ್ತಾನ್ ಸಾಬ್ ದರ್ಗಾ ಪೂಜಾರಿ ತಬ್ರೀಜ್ ಆಹಮದ್, ಮಸ್ತಾನ್ ಸಾಬ್ ಧರ್ಮರಾಯಸ್ವಾಮಿಯ ನಂಟು 300 ವರ್ಷದ್ದು ಎಷ್ಟೇ ವಿವಾದವಿದ್ರು ಪ್ರತಿಬಾರಿಯಂತೆ ಈ ಬಾರಿಯು ಕರಗ ದರ್ಗಾಕ್ಕೆ ಭೇಟಿ ನೀಡುತ್ತೆ. ದರ್ಗಾಗೆ ಭೇಟಿ ಕೊಡಲು ಈಗಾಗಲೇ ನಾವೇ ದೇವಾಲಯಕ್ಕೆ ಹೋಗಿ ಆಹ್ವಾನ ನೀಡಿದ್ದೆವೆ. ಹಿಂದೂ ಮುಸ್ಲಿಂ ಸಂಬಂಧ ಒಡೆಯುವ ಕೆಲಸ ಇಲ್ಲಿ ನಡೆಯಲ್ಲ. ದರ್ಗಾಕ್ಕೆ ಭೇಟಿ ನೀಡುವಾಗ ನಾವು ಭಕ್ತಿಯಿಂದ ಪೂಜೆ ಮಾಡ್ತಿವಿ. ನಮಗೆ ಆ ತಾಯಿ ಆರ್ಶಿವಾದ ಮಾಡ್ತಾಳೆ. ಈ ಬಾರಿಯು ಬಹಳ ವಿಜೃಂಭಣೆಯಿಂದ ಆ ತಾಯಿಗರ ಪೂಜೆ ಮಾಡ್ತಿವಿ ಎಂದಿದ್ದಾರೆ.

ಕರಗ ಉತ್ಸವದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಕರಗ ಸಮಿತಿ ಸೂಚಿಸಿದ ಮಾರ್ಗದಲ್ಲಿಯೇ ಉತ್ಸವ ಸಾಗಲಿದೆ. ಇದಕ್ಕೆ ಯಾರೇ ಅಡ್ಡಿಪಡಿಸಿದ್ರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ತೇವೆ ಎಂದು ಬೆಂಗಳೂರಿನಲ್ಲಿ ಡಿಸಿಪಿ ಅನುಚೇತ್ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರು ಕರಗ ಉತ್ಸವಕ್ಕೆ ಸೂಕ್ತ ಭದ್ರತೆ ಒದಗಿಸಿದ್ದೇವೆ. ಭದ್ರತೆಗಾಗಿ 450 ಪೊಲೀಸರು, KSRP ತುಕಡಿ ನಿಯೋಜನೆ ಮಾಡಲಾಗಿದೆ. ಕರಗ ಉತ್ಸವದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಜಯನಗರದಲ್ಲಿ ಎಸಿ ಸ್ಫೋಟಗೊಂಡು ಸ್ಥಳದಲ್ಲೇ ಒಂದೇ ಮನೆಯ ನಾಲ್ವರು ಸಾವು

ಹಿಂದೂ ಮುಸ್ಲಿಂ ಸಾಮರಸ್ಯದ ಕರಗ ಉತ್ಸವಕ್ಕೆ ಎದುರಾಗಲಿದೆಯಾ ಕಂಟಕ? ದರ್ಗಾ ಪ್ರವೇಶಿಸುತ್ತಾಳ ದ್ರೌಪಧಿಯಮ್ಮ

Published On - 8:35 am, Fri, 8 April 22