ಕರ್ನಾಟಕ ಲೋಕಭವನವನ್ನ ಐಇಡಿ RDX ಬಾಂಬ್​​​ನಿಂದ ಸ್ಫೋಟಿಸುವುದಾಗಿ ಬೆದರಿಕೆ

ಬೆಂಗಳೂರಿನ ಲೋಕಭವನಕ್ಕೆ ಜನವರಿ 14ರಂದು ರಾಜ್ಯಪಾಲರ ಇಮೇಲ್ ಐಡಿಗೆ RDX ಬಾಂಬ್ ಸ್ಫೋಟದ ಬೆದರಿಕೆ ಇ-ಮೇಲ್ ಬಂದಿತ್ತು. ಮಧ್ಯಾಹ್ನದೊಳಗೆ ಸ್ಫೋಟಿಸುವುದಾಗಿ ಬಂದಿದ್ದ ಸಂದೇಶದಿಂದ ಆತಂಕ ಸೃಷ್ಟಿಯಾಗಿತ್ತು. ಪೊಲೀಸರು, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಪರಿಶೀಲಿಸಿದಾಗ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ. ಆ ಮೂಲಕ ಹುಸಿ ಕರೆ ಎಂದು ದೃಢಪಟ್ಟಿದೆ.

ಕರ್ನಾಟಕ ಲೋಕಭವನವನ್ನ ಐಇಡಿ RDX ಬಾಂಬ್​​​ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಲೋಕಭವನ

Updated on: Jan 23, 2026 | 6:18 PM

ಬೆಂಗಳೂರು, ಜನವರಿ 23: ಇತ್ತೀಚೆಗೆ ರಾಜ್ಯದ ಹಲವು ಕೋರ್ಟ್​ಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು (Bomb Threat) ಬಂದಿದ್ದವು. ಇದೀಗ ಕರ್ನಾಟಕ ಲೋಕಭವನ (Karnataka Lok Bhavan)
ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆಯ ಇ-ಮೇಲ್​​ ಸಂದೇಶ ಬಂದಿದೆ. ಜನವರಿ 14ರಂದು ರಾಜ್ಯಪಾಲರ ಅಧಿಕೃತ ಮೇಲ್ ಐಡಿಗೆ ಸಂದೇಶ ಕಳಿಸಿರುವ ಕಿಡಿಗೇಡಿಗಳು ಮಧ್ಯಾಹ್ನದೊಳಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ತಪಾಸಣೆ ವೇಳೆ ಇದೊಂದು ಹುಸಿ ಬೆದರಿಕೆ ಕರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಹುಸಿ ಬೆದರಿಕೆ ಕರೆ ಎಂದ ಪೊಲೀಸ್​​​

gaina_ramesh@outlook.com ಎಂಬ ಇ-ಮೇಲ್ ರಾಜ್ಯಪಾಲರ ಅಧಿಕೃತ ಮೇಲ್​​ ಐಡಿಗೆ ಸಂದೇಶ ಬಂದಿದೆ. ಐಇಡಿ RDX ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳಕ್ಕೆ ಯಾವುದೇ ಸ್ಫೋಟಕ ಸಾಮಗ್ರಿ ಪತ್ತೆಯಾಗಿಲ್ಲ. ತಪಾಸಣೆ ನಂತರ ಹುಸಿ ಬೆದರಿಕೆ ಕರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಲೋಕಭವನದ ಅಧಿಕಾರಿಗಳು ಜನವರಿ 20ರಂದೇ ಕೇಸ್ ದಾಖಲಿಸಿದ್ದು, ವಿಧಾನಸೌಧ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇ-ಮೇಲ್​​ ಸಂದೇಶದಲ್ಲಿ ಏನಿದೆ?

ತಮಿಳುನಾಡಿನಲ್ಲಿ 1979ರ ನೈನಾರ್ ದಾಸ್ ಪೊಲೀಸ್ ಒಕ್ಕೂಟವನ್ನು ಜಾರಿಗೆ ತನ್ನಿ. ನಿಮ್ಮ ರಾಜ್ಯಪಾಲರ ಕಚೇರಿಯಲ್ಲಿ 3 ಆರ್‌ಡಿಎಕ್ಸ್ ಬಾಂಬ್‌ಗಳನ್ನು ಬಳಸಿ ಮಾನವ ಆತ್ಮಹತ್ಯಾ ಸ್ಫೋಟಿಸುತ್ತೇವೆ. ಮಧ್ಯಾಹ್ನ 1:35ರೊಳಗೆ ಸಿಬ್ಬಂದಿ ಸ್ಥಳಾಂತರಿಸಿ ಎಂದಿದ್ದಾರೆ.

ಇದನ್ನೂ ಓದಿ: ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ, ಪಾಸ್‌ಪೋರ್ಟ್ ಕಚೇರಿಗೂ ಬಂತು ಇ-ಮೇಲ್

ತಮಿಳುನಾಡು ಕಾನ್‌ಸ್ಟೆಬಲ್‌ಗಳು ನಿವೇತಾ ಪೇತುರಾಜ್ ಮತ್ತು ಇತರ ಡಿಎಂಕೆ ಪತ್ನಿಯರ ಬಟ್ಟೆ ಮತ್ತು ಕೊಳಕು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಒತ್ತಾಯಿಸಲ್ಪಡುತ್ತಾರೆ. ಇದರಿಂದಾಗಿ ಅನೇಕರು ಅವಮಾನ ಅನುಭವಿಸಿದ್ದಾರೆ. ಆದ್ದರಿಂದ, ಮಾಜಿ ಎಲ್‌ಟಿಟಿಇ ಸದಸ್ಯರು ಮತ್ತು ಕಾಶ್ಮೀರ ಐಎಸ್‌ಐ ಸದಸ್ಯರು ಇಂದು ನಿಮ್ಮ ಸರ್ಕಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಈ ಪದ್ಧತಿಯ ವಿರುದ್ಧ ಹೇಳಿಕೆ ನೀಡಲು ಮತ್ತು ತಮಿಳುನಾಡಿನಲ್ಲಿ 1979 ರ ನೈನಾರ್ ದಾಸ್ ಪೊಲೀಸ್ ಯೂನಿಯನ್ ಶಿಫಾರಸುಗಳನ್ನು ಕಾನ್‌ಸ್ಟೆಬಲ್‌ಗಳಿಗೆ ಜಾರಿಗೆ ತರಲು ಪ್ರಯತ್ನಿಸಿದ್ದಾರೆ. ನಮ್ಮ ಬೇಡಿಕೆಗಳನ್ನು ಕೇಳಲು ನಮಗೆ ಬೇರೆ ದಾರಿಯಿಲ್ಲ, ಕ್ಷಮಿಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗದಗ, ಮಂಗಳೂರು ಆಯ್ತು ಈಗ ಭಟ್ಕಳದ ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ!

ಅಮೋನಿಯಂ ನೈಟ್ರೇಟ್ ಬಳಸಿ ತಯಾರಿಸಿದ 3 ಆರ್‌ಡಿಎಕ್ಸ್ ಐಇಡಿಗಳನ್ನು ಈಗಾಗಲೇ ಕಚೇರಿಯಲ್ಲಿ ನಿಗದಿತ ಸ್ಥಳಗಳಲ್ಲಿ ಇರಿಸಲಾಗಿದೆ. ಒಂದಿಬ್ಬರು ಸದಸ್ಯರು ಊಟದ ಸಮಯದಲ್ಲಿ ಕಚೇರಿಗೆ ಬರುತ್ತಾರೆ. ರಿಮೋಟ್ ಕಂಟ್ರೋಲ್ ಟ್ರಿಗ್ಗರ್‌ಗಳನ್ನು ಹೊತ್ತ ಮಾಜಿ ಎಲ್‌ಟಿಟಿಇ ಸದಸ್ಯರು ಟರ್ಮಿನಲ್‌ಗಳಿಂದ 100 ಅಡಿಗಳ ಒಳಗೆ ಬಂದಾಗ ಐಇಡಿಗಳು ಸ್ವಯಂಚಾಲಿತವಾಗಿ ಸ್ಫೋಟಗೊಳ್ಳುತ್ತವೆ. ಒಂದು ವೇಳೆ ಅವು ಸ್ವಯಂಚಾಲಿತವಾಗದಿದ್ದರೆ, ಸದಸ್ಯರು ತಾವೇ ಜಿಲ್ಲಾ ಕಚೇರಿ ಒಳಗೆ ಬಂದು ಶ್ರೀಲಂಕಾದ ಈಸ್ಟರ್ ಕಾರ್ಯಾಚರಣೆಯಂತೆಯೇ ಎಲ್ಲಾ ಸಿಬ್ಬಂದಿ ಮತ್ತು ಪ್ರಯಾಣಿಕರೊಂದಿಗೆ ತಾವೇ ಸಿಡಿಸಿಕೊಳ್ಳುತ್ತಾರೆ ಎಂದು ಉಲ್ಲೇಖಿಸಲಾಗಿದೆ.

ವರದಿ: ಪ್ರದೀಪ್ ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.