ಬೆಂಗಳೂರು ಸೆ.29: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಬಿಡುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಬುಧವಾರ ಬೆಂಗಳೂರು ಬಂದ್ಗೆ (Bengaluru Bandh) ಕರೆ ನೀಡಿದ್ದವು. ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೆ ಖಾಸಗಿ ವಾಹನ ಮತ್ತು ಸರ್ಕಾರಿ ಸಾರಿಗೆ ಬಸ್ ವ್ಯವಸ್ತೆ ಇಲ್ಲದೆ ಜನರು ಪರದಾಡುವಂತಾಯಿತು. ಬಂದ್ ದಿನ ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬರು ತಮ್ಮ ಮನೆಗೆ ತೆರಳಲು ಯಾವುದೇ ವಾಹನ ಸಿಗದೇ 12 ಕಿ.ಮೀ ನಡೆದುಕೊಂಡು ಹೋಗಿದ್ದಾರೆ.
ಈ ಬಗ್ಗೆ ಓರ್ವ ವ್ಯಕ್ತಿ ತನ್ನ ಸ್ನೇಹಿತನ ಈ ಅನುಭವದ ಬಗ್ಗೆ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಟ್ವೀಟ್ ಮಾಡಿದ್ದಾರೆ. “ಯಾವುದೇ ಸಾರಿಗೆ ವ್ಯವಸ್ಥೆ ಸಿಗದೆ ನನ್ನ ಸ್ನೇಹಿತ ಸುಮಾರು 12 ಕಿಮೀ ನಡೆದುಕೊಂಡು ಹೋಗಿದ್ದಾರೆ. ಅವನಿಗೆ ಯಾವುದೇ ಕ್ಯಾಬ್‌ಗಳು, ಆಟೋಗಳು, ರಾಪಿಡೋ ಅಥವಾ ಯಾವುದೇ ವಾಹನ ಸಿಗಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
My friend walked 12Kms back home in Bangalore today.
He wasn’t getting any cabs/autos/rapido or anything else.
Quality of life even for top 1% after having all the means is only hitting lows & lows in this city.#bangaloretraffic pic.twitter.com/puSMXukQvz
— Tushar (@TheTusharLuthra) September 27, 2023
ಇದನ್ನೂ ಓದಿ: ಸೆ.27ರ ಸಂಜೆ ನಾಲ್ಕು ಗಂಟೆಗೆ ಶಾಲೆ ಬಿಟ್ಟ ಮಕ್ಕಳು ಮನೆಗೆ ತಲುಪಿದ್ದು ರಾತ್ರಿ ಎಂಟಕ್ಕೆ !!
ಈ ಟ್ವೀಟ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ನಗರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ 2 ದಿನಗಳ ಕಾಲ ವರ್ಕ್ಫ್ರಾಮ್ ಹೋಮ್ ನೀಡುವುದು ಅಗತ್ಯವಿದೆ. ಮತ್ತೊಬ್ಬರು ಪ್ರತಿಕ್ರಿಯಿ “ನಿಮ್ಮ ಸ್ನೇಹಿತ ನಡೆಯುವಾಗಲೂ ಟ್ರಾಫಿಕ್ ಜಾಮ್ ಎದುರಿಸಿರಬೇಕು. ಏಕೆಂದರೆ ಸಾಮಾನ್ಯವಾಗಿ 12 ಕಿ.ಮೀ ದೂರ ನಡೆಯಲಿ 120-140 ಸಾಕು” ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Fri, 29 September 23