ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಕಾವೇರಿ ಹೋರಾಟದಿಂದ ದೂರ ಉಳಿದ ಕರವೇ ನಾರಾಯಣಗೌಡ: ಆಗಿದ್ದೇನು?

ಕಾವೇರಿ ಪ್ರತಿಭಟನೆಗಾಗಿ ಇಡೀ ಕರುನಾಡು ಕೂಗುತ್ತಿದೆ. ಆದ್ರೆ, ಕನ್ನಡ ಪರ ಸಂಘಟನೆಗಳ ಮಧ್ಯೆ ವೈಯಕ್ತಿ ಪ್ರತಿಷ್ಠೆ ಬಂದಿದೆ. ತಮ್ಮಗೆ ನೇತೃತ್ವ ವಹಿಸದಿದ್ದರಿಂದ ಕರ್ನಾಟಕ ಬಂದ್​ ಹೋರಾಟದಿಂದ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಅವರು ದೂರ ಉಳಿದಿದ್ದಾರೆ. ಅಲ್ಲದೇ ಪ್ರತಿಭಟನೆ ನಡೆಸುತ್ತಿರುವ ಕೆಲ ಕನ್ನಡ ಪರ ಸಂಘಟನೆಗಳ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ.

ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಕಾವೇರಿ ಹೋರಾಟದಿಂದ ದೂರ ಉಳಿದ ಕರವೇ ನಾರಾಯಣಗೌಡ: ಆಗಿದ್ದೇನು?
ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Sep 29, 2023 | 11:57 AM

ಬೆಂಗಳೂರು, (ಸೆಪ್ಟೆಂಬರ್ 29):  ಕಾವೇರಿಗಾಗಿ (Cauvery Water) ಕರುನಾಡು ಕೂಗುತ್ತಿದೆ. ಜೀವಜಲಕ್ಕಾಗಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ಒಂದು ಹನಿ ನೀರನ್ನ ಬಿಡ್ಬಬಾರದು ಎಂದು ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ, ಗಲ್ಲಿ ಗಲ್ಲಿಯಲ್ಲೂ ಕಾವೇರಿ ನಮ್ಮದು ಎನ್ನುವ ಧ್ವನಿ ಮಾರ್ಧನಿಸಿದೆ. ನಮ್ಮ ರಾಜ್ಯದ ರೈತರಿಗೆ (Formers) ಅನ್ಯಾಯ ಮಾಡಿ, ತಮಿಳುನಾಡಿಗೆ (Tamil Nadu)ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡುಗಡೆ ಮಾಡಬಾರದು ಎನ್ನುವ ಆಗ್ರಹ ಜೋರಾಗಿದೆ. ಹೀಗಾಗಿ ಇವತ್ತು ಕರ್ನಾಟಕ ಬಂದ್ (Karnataka bandh) ಆಚರಿಸಲಾಗುತ್ತಿದೆ. ಆದ್ರೆ, ಇದರ ಮಧ್ಯೆ ಕನ್ನಡ ಪರ ಸಂಘಟನೆಗಳ ಮಧ್ಯೆ ಗೊಂದಲ ಸೃಷ್ಟಿಯಾಗಿದ್ದು, ಪ್ರತಿಷ್ಠೆ ಪಶ್ನೆಗಳು ಉದ್ಭವಿಸಿವೆ. ಹೌದು…ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ (TA Narayana Gowda) ಅವರು ತಮ್ಮ ವೈಯಕ್ತಿ ಪ್ರತಿಷ್ಠೆಗಾಗಿ ಕಾವೇರಿ ಹೊರಾಟದಿಂದ ದೂರ ಉಳಿದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಇಂದು(ಸೆ.29) ಮಾಧ್ಯಮಗಳ ಜೊತೆ ಮಾತನಾಡಿದ ನಾರಾಯಣಗೌಡ, ಹೋರಾಟಕ್ಕೆ ನನ್ನ ನೇತೃತ್ವದಲ್ಲಿ ಕರೆಯಬೇಕಿತ್ತು. ಯಾರೋ ನಿನ್ನೆ ಮೊನ್ನೆ ಬಂದವರ ಹಿಂದೆ ನಾನು ಹೋಗ್ಲಾ? ಯಾರೋ ಎರಡು ಸಾವಿರ ಮೂರು ಸಾವಿರ ಖರ್ಚು ಮಾಡುವವನ ಹಿಂದೆ ನಾನು ಹೋಗ್ಲಾ? ಎಂದು ಬಹಿರಂಗವಾಗಿ ಕನ್ನಡಪರ ಸಂಘಟನೆಗಳ ವಿರುದ್ದ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: Karnataka Bandh Live: ಕಾವೇರಿ ಹೋರಾಟಕ್ಕೆ ಸ್ಯಾಂಡಲ್​ವುಡ್​ ಸ್ಟಾರ್​​​ಗಳ ಬೆಂಬಲ; ಫಿಲಂ ಚೇಂಬರ್​​​ ಮುಂದೆ ಪ್ರತಿಭಟನೆ

ವಾಟಾಳ್ ನಾಗರಾಜ್ ಹೋರಾಟದ ಬಗ್ಗೆ ಆಕ್ಷೇಪ ಇಲ್ಲ. ಆದರೆ ಅವರ ಸುತ್ತ ಮುತ್ತ ಇರುವವರ ಬಗ್ಗೆ ಆಕ್ಷೇಪ ಇದೆ. ಬಂದ್ ಬಿಟ್ಟರೆ ನಾನು ಎಲ್ಲರ ಜೊತೆಗೆ ಹೋರಾಡುತ್ತೇನೆ. ಅವರ ಹಿಂದೆ ಹೋಗಬೇಕಾ ನಾನು? ಇತಿಹಾಸ ಇಲ್ವಾ ನಂಗೆ? ನಾಯಕತ್ವ ನಾನು ವಹಿಸಿಕೊಳ್ಳುತ್ತೇನೆ ಎಲ್ಲರೂ ಬರಲಿ. ಮೈಸೂರ್ ಬ್ಯಾಂಕ್ ನಲ್ಲಿ ಹೋರಾಟ ಮಾಡುವ ವಾಟಾಳ್ ಅವರನ್ನು ಒಪ್ಕೋತೀರಾ ನೀವು? ಎಂದು ಕಿಡಿಕಾರಿದರು.

.ಕರ್ನಾಟಕ ಬಂದ್ ಹೋರಾಟ ತಮ್ಮ ನೇತೃತ್ವದಲ್ಲಿ ನಡೆಸಬೇಕೆನ್ನುವುದು ಇತ್ತು. ಆದ್ರೆ, ಅದು ಸಾಧ್ಯವಾಗಿಲ್ಲ. ಇದರಿಂದ ಕೆರಳಿರುವ ನಾರಾಯಣಗೌಡ, ಈ ಬಂದ್​ಗೆ ಬೆಂಬಲ ಕೊಟ್ಟಿಲ್ಲ. ಅಲ್ಲದೇ ಮೊನ್ನೇ ನಡೆದಿದ್ದ ಬೆಂಗಳೂರು ಬಂದ್​ನಲ್ಲೂ ಸಹ ಪಾಲ್ಗೊಂಡಿರಲಿಲ್ಲ.

ಈ ಹಿಂದೆನೇ ಬೆಂಗಳೂರು, ಕರ್ನಾಟಕ ಬಂದ್‌ಗೆ ಕರವೇ ಬೆಂಬಲಿಸುವುದಿಲ್ಲ ಎಂದು ನಾರಾಯಣಗೌಡ ಅವರು ಘೋಷಿಸಿದ್ದರು. ಅಲ್ಲದೇ ಎರಡೂ ಬಂದ್ ಹೋರಾಟದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಯಾವುದೇ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಳ್ಳುವುದಿಲ್ಲ. ಆದರೆ, ಈಗಾಗಲೇ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಹೋರಾಟ ಪ್ರತಿದಿನವೂ ನಡೆಯಲಿದೆ ಎಂದು ಹೇಳಿದ್ದರು.

ಇನ್ನಷ್ಟು ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ