ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರು: ಹೊಸ ಕ್ರಮ ಕೈಗೊಳ್ಳಲು ಮುಂದಾದ ಬಿಬಿಎಂಪಿ

| Updated By: ವಿವೇಕ ಬಿರಾದಾರ

Updated on: Sep 03, 2024 | 11:35 AM

ಬೆಂಗಳೂರಿನ ಅನೇಕ ಆಸ್ತಿ ಮಾಲೀಕರು ಬಿಬಿಎಂಪಿಗೆ ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ಟಬೇಕಿದೆ. ಒಟಿಎಸ್​ ನಂತರ ಇನ್ನೂ ಅನೇಕರು ಆಸ್ತಿ ತೆರಿಗೆ ಕಟ್ಟಲಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊಸ ಪ್ಲಾನ್​ ಮಾಡಿದೆ. ಏನದು ಪ್ಲಾನ್​​? ಎಷ್ಟು ತೆರಿಗೆ ಬಾಕಿ ಇದೆ? ಇಲ್ಲಿದೆ ಮಾಹಿತಿ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರು: ಹೊಸ ಕ್ರಮ ಕೈಗೊಳ್ಳಲು ಮುಂದಾದ ಬಿಬಿಎಂಪಿ
ಬಿಬಿಎಂಪಿ
Follow us on

ಬೆಂಗಳೂರು, ಸೆಪ್ಟೆಂಬರ್​ 03: ಆಸ್ತಿ ತೆರಿಗೆ (Property Tax) ಪಾವತಿ ಮಾಡದವರಿಗೆ ಬೆಂಗಳೂರು ಮಹಾನಗರ ಪಾಲಿಕೆ (BBMP) ಶೇ.50ರಷ್ಟು ಬಡ್ಡಿ ಮನ್ನಾ ಮಾಡಿ ಒನ್​ ಟೈಮ್​​ ಸೆಟ್ಲಮೆಂಟ್​ (OTS)ಗೆ ಅವಕಾಶ ನೀಡಿದೆ. ಆದರೂ ಕೂಡ ಇನ್ನೂ ಅನೇಕರು ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಆಸ್ತಿ ಮಾಲೀಕರು ಇನ್ನೂವರೆಗೂ ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ತೆರಿಗೆ ಬಾಕಿ ಉಳಿಸಿಕೊಂಡ 49,499 ಆಸ್ತಿಗಳು ಉಪ ನೋಂದಣಾಧಿಕಾರಿಗಳ ಕಚೇರಿ ದಾಖಲೆಗಳಲ್ಲಿ ಬಿಬಿಎಂಪಿ ಹೆಸರಿಗೆ ಸೇರಿಸಿ ಅಟ್ಯಾಚ್ ಮಾಡಲಾಗಿದೆ. 4600 ವಾಣಿಜ್ಯ ಮಳಿಗೆಗಳಿಗೆ ಬೀಗಮುದ್ರೆ ಹಾಕಲಾಗಿದೆ. ಆಸ್ತಿ ತೆರಿಗೆ ಪಾವತಿಸದೆ ಮೊಂಡಾಟವಾಡುತ್ತಿರುವ ಹಾಗೂ ನೋಟಿಸ್‌ಗೂ ಜಗ್ಗದ ಸುಸ್ತಿದಾರರ ಆಸ್ತಿಗಳಿಗೆ ಫಾರಂ-13 ಜಾರಿ ಮಾಡಲಾಗಿದೆ.

ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಬಿಎಂಪಿ ನೋಟಿಸ್

ಉಪ ನೋಂದಣಾಧಿಕಾರಿಗಳ ಕಚೇರಿ ದಾಖಲೆಗಳಲ್ಲಿ ಪಾಲಿಕೆ ಹೆಸರು ಸೇರಿಸುವ ಅಟ್ಯಾಚ್ ಪ್ರಕ್ರಿಯೆಗೆ ಪಾಲಿಕೆ ಮುಂದಾಗಿದೆ. ಅಟ್ಯಾಚ್​ ಆದ ಬಳಿಕ ಸುಸ್ತಿದಾರರು ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು, ಸಾಲ ಸೌಲಭ್ಯ ಪಡೆಯಲು ಹಾಗೂ ಇನ್ನಿತರೆ ಉದ್ದೇಶಕ್ಕೆ ಬಳಸಲು ಆಗಲ್ಲ. ಅಲ್ಲದೇ, ವಲಯವಾರು ಅತಿಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಪ್ರಕಟಿಸಿ ಮಾನ ಹರಾಜು, ಆಸ್ತಿಗಳನ್ನ ಜಪ್ತಿ ಮಾಡಿ, ತೆರಿಗೆ ವಸೂಲು ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.

ಅಟ್ಯಾಚ್ ಮಾಡಿರುವ ಹಾಗೂ ಬೀಗಮುದ್ರೆ ಹಾಕಿರುವ ಆಸ್ತಿಗಳ ವಿವರ

ದಾಸರಹಳ್ಳಿ ವಲಯ

  • ಸುಸ್ತಿದಾರರು: 11,956
  • ತೆರಿಗೆ ಬಾಕಿ: 16.92 ಕೋಟಿ ರೂ.
  • ಅಟ್ಯಾಚ್-4090
  • ಬೀಗ ಮುದ್ರೆ- 166

ಪಶ್ಚಿಮ ವಲಯ

  • ಸುಸ್ತಿದಾರರು- 25,291
  • ತೆರಿಗೆ ಬಾಕಿ – 49.33 ಕೋಟಿ ರೂ.
  • ಅಟ್ಯಾಚ್-9088
  • ಬೀಗ ಮುದ್ರೆ- 1034

ಆರ್ ಆರ್ ನಗರ ವಲಯ

  • ಸುಸ್ತಿದಾರರು-41,066
  • ತೆರಿಗೆ ಬಾಕಿ- 38.52 ಕೋಟಿ ರೂ.
  • ಅಟ್ಯಾಚ್-4554
  • ಬೀಗ ಮುದ್ರೆ- 400

ದಕ್ಷಿಣ ವಲಯ

  • ಸುಸ್ತಿದಾರರು-24,313
  • ತೆರಿಗೆ ಬಾಕಿ- 74.72 ಕೋಟಿ ರೂ.
  • ಅಟ್ಯಾಚ್- 8351
  • ಬೀಗ ಮುದ್ರೆ– 470

ಬೊಮ್ಮನಹಳ್ಳಿ

  • ಸುಸ್ತಿದಾರರು- 41,915
  • ತೆರಿಗೆ ಬಾಕಿ- 62.94 ಕೋಟಿ ರೂ.
  • ಅಟ್ಯಾಚ್- 5444
  • ಬೀಗ ಮುದ್ರೆ- 303

ಮಹದೇವಪುರ

  • ಸುಸ್ತಿದಾರರು- 56,346
  • ತೆರಿಗೆ ಬಾಕಿ- 116.03 ಕೋಟಿ ರೂ.
  • ಅಟ್ಯಾಚ್- 3936
  • ಬೀಗ ಮುದ್ರೆ- 48

ಯಲಹಂಕ

  • ಸುಸ್ತಿದಾರರು- 27,436
  • ತೆರಿಗೆ ಬಾಕಿ-38.43 ಕೋಟಿ ರೂ.
  • ಅಟ್ಯಾಚ್- 4623
  • ಬೀಗ ಮುದ್ರೆ- 416

ಪೂರ್ವ ವಲಯ

  • ಸುಸ್ತಿದಾರರು- 35,898
  • ತೆರಿಗೆ ಬಾಕಿ- 69.89 ಕೋಟಿ ರೂ.
  • ಅಟ್ಯಾಚ್- 9401
  • ಬೀಗ ಮುದ್ರೆ-1317

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ