ಅಮಾಯಕ ಯುವಕನ ಮೇಲೆ ಪೊಲೀಸರ ದರ್ಪ ಗಾಬರಿ ಹುಟ್ಟಿಸುತ್ತದೆ! ವಿಡಿಯೋ ನೋಡಿ
ಕೆಲ ತಿಂಗಳುಗಳ ಹಿಂದೆ ಪ್ರಾಯಶಃ ಇದೇ ಯುವಕನ ಮೇಲೆ ಪೊಲೀಸರು ದರ್ಪ ಮೆರೆದಿದ್ದರು ಅನಿಸುತ್ತೆ. ಗೃಹ ಸಚಿವರ ನಿವಾಸಕ್ಕೆ ಅರ್ಜಿ ಸಲ್ಲಿಸಲೆಂದು ಬಂದಿದ್ದೇ ಯುವಕನ ಅಪರಾಧವೇ? ಗೂಂಡಾ ಮತ್ತು ರೌಡಿಗಳ ಜೊತೆ ಸ್ನೇಹಿತರಂತೆ ವರ್ತಿಸುವ ಪೊಲೀಸರು ಅಮಾಯಕನ ಮೇಲೆ ಶಕ್ತೊ ಪ್ರದರ್ಶನ ನಡೆಸುವುದನ್ನು ಕನ್ನಡಿಗರು ಖಂಡಿಸುತ್ತಾರೆ.
ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸ್ ರಾಜ್ ನಡೆಯುತ್ತಿದೆಯೇ? ಈ ವಿಡಿಯೋ ನೋಡಿದರೆ ಅಂಥ ಗುಮಾನಿ ಹುಟ್ಟುತ್ತದೆ. ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಅರ್ಜಿ ನೀಡಲು ಬಂದ ಯುವಕನೊಬ್ಬನ ಮೇಲೆ ಪೊಲೀಸರು ದೌರ್ಜನ್ನು ಪ್ರದರ್ಶಿಸಿ ಅವನನ್ನು ವ್ಯಾನಲ್ಲಿ ಎತ್ಹಾಕಿಕೊಂಡು ಹೋಗುತ್ತಿರುವ ದೃಶ್ಯ ಗಾಬರಿ ಮತ್ತು ಆತಂಕ ಮೂಡಿಸುತ್ತದೆ. ಗೂಂಡಾಗಳ ಜೊತೆ ನಡೆದುಕೊಳ್ಳುವ ಹಾಗಿದೆ ಪೊಲೀಸರ ವರ್ತನೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos