AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ದೈಹಿಕ ಸಂಪರ್ಕ, ದುಬಾರಿ ಬೈಕ್; ಐಫೋನ್ ಪಡೆದು ಪ್ರಿಯಕರ ಪರಾರಿ

ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ವಿಚ್ಛೇದಿತ ಮಹಿಳೆಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಐದು ತಿಂಗಳು ಲವ್​ ಮಾಡಿ ಬಳಿಕ ಮದುವೆ ಆಗಲ್ಲ ಅಂತ ಹೇಳಿ ಪ್ರಿಯಕರ ಪರಾರಿ ಆಗಿದ್ದಾನೆ. ಇತ್ತ ಆತನಿಗಾಗಿ ಹುಡುಕಿ ಹುಡುಕಿ ಸುಸ್ತಾದ ಮಹಿಳೆ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ದೈಹಿಕ ಸಂಪರ್ಕ, ದುಬಾರಿ ಬೈಕ್; ಐಫೋನ್ ಪಡೆದು ಪ್ರಿಯಕರ ಪರಾರಿ
ಆರೋಪಿ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Nov 15, 2026 | 10:25 AM

Share

ಮುಖ್ಯಾಂಶಗಳು

  • ಮದುವೆ ಆಗುವುದಾಗಿ ಮಹಿಳೆಗೆ ವಂಚನೆ
  • ದುಬಾರಿ ಬೈಕ್, ಐಫೋನ್ ಗಿಫ್ಟ್ ಪಡೆದುಕೊಂಡು ಬಳಿಕ ಊರು ಬಿಟ್ಟು ಪರಾರಿ
  • ಪ್ರಿಯಕರನಿಗಾಗಿ ಹುಡುಕಿ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

ಬೆಂಗಳೂರು, ನವೆಂಬರ್​ 15: ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಗೆ ಹೈದರಾಬಾದ್​ ಮೂಲದ ವ್ಯಕ್ತಿ ವಂಚಿಸಿರುವ ಆರೋಪವೊಂದು ಕೇಳಿಬಂದಿದೆ. ಹಲವಾರು ಬಾರಿ ದೈಹಿಕ ಸಂಪರ್ಕ ಬೆಳಸಿ, ದುಬಾರಿ ಬೈಕ್, ಐಫೋನ್​ ಗಿಫ್ಟ್ ಪಡೆದುಕೊಂಡು ಕೊನೆಗೆ ಊರು ಬಿಟ್ಟು ಪರಾರಿ‌‌‌‌ ಆಗಿದ್ದಾನೆ. ಪ್ರಿಯಕರನಿಗಾಗಿ ಹುಡುಕಿ ಹುಡುಕಿ‌ ಸೋತ ಮಹಿಳೆ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಶೇಖ್ ಮೊಹಮ್ಮದ್ ತೈಯೀಬ್ ಅಲಿಯಾಸ್ ತಾಹೀರ್ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಡೆದಿದ್ದೇನು?

ಸಂತ್ರಸ್ತ ಮಹಿಳೆ ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದು, ಸುಮಾರು 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಪತಿಯೊಂದಿಗಿನ ಮನಸ್ತಾಪದ ಹಿನ್ನೆಲೆ 2026ರ ಮಾರ್ಚ್‌ನಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 11ನೇ ತರಗತಿ ಓದುತ್ತಿರುವ ಮಗನೊಂದಿಗೆ ಕೆ.ಜಿ. ಹಳ್ಳಿ ಪ್ರದೇಶದಲ್ಲಿ ವಾಸವಾಗಿದ್ದರು. ಈ ನಡುವೆ ಮೇ ತಿಂಗಳಲ್ಲಿ ಬಸ್ ನಿಲ್ದಾಣವೊಂದರಲ್ಲಿ ಶೇಖ್ ಮೊಹಮ್ಮದ್ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿತ್ತು.

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಆರೋಪ

ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ತಾಹೀರ್, ಆಕೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೆ, ಮಹಿಳೆಯಿಂದ ದುಬಾರಿ ಬೈಕ್ ಹಾಗೂ ಐಫೋನ್ ಉಡುಗೊರೆಯಾಗಿ ಪಡೆದುಕೊಂಡಿದ್ದಾನೆ. ಸುಮಾರು ಐದು ತಿಂಗಳ ಕಾಲ ಪ್ರೀತಿಯಲ್ಲಿದ್ದ ಬಳಿಕ ತಾಹೀರ್ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ನಂತರ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.

LIVE TV

ಹೈದರಾಬಾದ್‌ಗೆ ತೆರಳಿ ಹುಡುಕಾಟ ನಡೆಸಿದ ಮಹಿಳೆ

ಇನ್ನು ಪ್ರಿಯಕರ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಮಹಿಳೆ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ, ಹೈದರಾಬಾದ್‌ನಲ್ಲಿರುವ ತಾಹೀರ್ ಮನೆಗೂ ತೆರಳಿ ವಿಚಾರಿಸಿದ್ದಾರೆ. ಆದರೆ ಅಲ್ಲಿ ಕೂಡ ಆತ ಪತ್ತೆಯಾಗದ ಹಿನ್ನೆಲೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಇದನ್ನೂ ಓದಿ: ಮಕ್ಕಳಾಗಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ

ಕೊನೆಗೆ ಬೇರೆ ದಾರಿ ಕಾಣದೆ ಮಹಿಳೆ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಶೇಖ್ ಮೊಹಮ್ಮದ್ ತೈಯೀಬ್ ಅಲಿಯಾಸ್ ತಾಹೀರ್ ವಿರುದ್ಧ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಡಿಜೆ ಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ
ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ
ಇಂದು ಈ ರಾಶಿಯವರಿಗೆ ಆರ್ಥಿಕವಾಗಿ ಅಧಿಕ ಲಾಭ
ಇಂದು ಈ ರಾಶಿಯವರಿಗೆ ಆರ್ಥಿಕವಾಗಿ ಅಧಿಕ ಲಾಭ
ನಿಗಮ ಮಂಡಳಿಗಳಲ್ಲಿ ಆರ್‌ಎಸ್‌ಎಸ್ ನಂಟು ಇರುವವರು ಸ್ವತಃ ರಾಜೀನಾಮೆ ನೀಡಬೇಕು
ನಿಗಮ ಮಂಡಳಿಗಳಲ್ಲಿ ಆರ್‌ಎಸ್‌ಎಸ್ ನಂಟು ಇರುವವರು ಸ್ವತಃ ರಾಜೀನಾಮೆ ನೀಡಬೇಕು
"ನಾನು ನೋಡಿದ್ದ ಡಿಕೆಶಿ ಘರ್ಜನೆ ಬೇರೆ ಇತ್ತು, ಈಗಿನವರು ಬೇರೆ"
ಕ್ಯಾನ್ಸರ್ ಪೀಡಿತ ಮಕ್ಕಳನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಿಎಂ
ಕ್ಯಾನ್ಸರ್ ಪೀಡಿತ ಮಕ್ಕಳನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಿಎಂ
ಬಿಗ್​​ಬಾಸ್ ಟಾಸ್ಕ್ ಫಲಿತಾಂಶ ನೀಡಿದ ಎಐ: ಗೆದ್ದಿದ್ದು ಯಾರು?
ಬಿಗ್​​ಬಾಸ್ ಟಾಸ್ಕ್ ಫಲಿತಾಂಶ ನೀಡಿದ ಎಐ: ಗೆದ್ದಿದ್ದು ಯಾರು?
ಅಮಾಯಕ ರೋಷನ್‌ ಹೆಸರಲ್ಲಿ 350 ಕೋಟಿ ರೂ. ವ್ಯವಹಾರ, ಬೆಳಕಿಗೆ ಬಂದಿದ್ದು ಹೇಗೆ
ಅಮಾಯಕ ರೋಷನ್‌ ಹೆಸರಲ್ಲಿ 350 ಕೋಟಿ ರೂ. ವ್ಯವಹಾರ, ಬೆಳಕಿಗೆ ಬಂದಿದ್ದು ಹೇಗೆ
ದೇಗುಲ ಪ್ರವೇಶ ನಿರಾಕರಣೆ ವಿಚಾರ: ಹೆಣ್ಣುಮಕ್ಕಳಿಗೆ ಬೇಸರ ತಂದಿದೆ
ದೇಗುಲ ಪ್ರವೇಶ ನಿರಾಕರಣೆ ವಿಚಾರ: ಹೆಣ್ಣುಮಕ್ಕಳಿಗೆ ಬೇಸರ ತಂದಿದೆ
ಕರ್ನಾಟಕದಲ್ಲಿ ಆಸ್ತಿ ಮಾರ್ಗಸೂಚಿ ಬೆಲೆ ಹೆಚ್ಚಳ: ಖರೀದಿದಾರರಿಗೆ ಆಘಾತ
ಕರ್ನಾಟಕದಲ್ಲಿ ಆಸ್ತಿ ಮಾರ್ಗಸೂಚಿ ಬೆಲೆ ಹೆಚ್ಚಳ: ಖರೀದಿದಾರರಿಗೆ ಆಘಾತ
ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಎಚ್.ಡಿ.ಕುಮಾರಸ್ವಾಮಿ ವಿಶೇಷ ಪೂಜೆ
ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಎಚ್.ಡಿ.ಕುಮಾರಸ್ವಾಮಿ ವಿಶೇಷ ಪೂಜೆ