ಬೆಂಗಳೂರಿನಿಂದ 6 ಏರಿಯಾ, ಊರುಗಳಿಗೆ ಮೆಟ್ರೋ ಸಂಚಾರ: ಬಿಎಂಆರ್ಸಿಎಲ್ ಕೈಸೇರಿದ ಫಿಸಿಬಿಲಿಟಿ ಸ್ಟಡಿ ವರದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ ಶುಭ ಸುದ್ದಿವೊಂದನ್ನು ನೀಡಿದೆ. ಬೆಂಗಳೂರಿನ 6 ಹೊಸ ಪ್ರದೇಶಗಳಿಗೆ ಮೆಟ್ರೋ ವಿಸ್ತರಣೆ ಕಾರ್ಯಸಾಧ್ಯತಾ ವರದಿ ಬಿಎಂಆರ್‌ಸಿಎಲ್‌ ಕೈಸೇರಿದ್ದು, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಡಿಪಿಆರ್ ಸಿದ್ಧಪಡಿಸಲಿದೆ. ಚಲ್ಲಘಟ್ಟ-ಬಿಡದಿ, ಸಿಲ್ಕ್ ಇನ್‌ಸ್ಟಿಟ್ಯೂಟ್-ಹಾರೋಹಳ್ಳಿ ಸೇರಿದಂತೆ ಪ್ರಮುಖ ಕೈಗಾರಿಕಾ ವಲಯಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತಿದೆ.

ಬೆಂಗಳೂರಿನಿಂದ 6 ಏರಿಯಾ, ಊರುಗಳಿಗೆ ಮೆಟ್ರೋ ಸಂಚಾರ: ಬಿಎಂಆರ್ಸಿಎಲ್ ಕೈಸೇರಿದ ಫಿಸಿಬಿಲಿಟಿ ಸ್ಟಡಿ ವರದಿ
ನಮ್ಮ ಮೆಟ್ರೋ
Image Credit source: tv9 kannada
Edited By:

Updated on: Oct 02, 2026 | 3:19 PM

ಬೆಂಗಳೂರು, ಅಕ್ಟೋಬರ್​​ 02: ಶೀಘ್ರದಲ್ಲಿ ಬೆಂಗಳೂರಿನಿಂದ 6 ಏರಿಯಾ ಮತ್ತು ಊರುಗಳಿಗೆ ನಮ್ಮ ಮೆಟ್ರೋ ಸಂಚಾರ ಮಾಡಲಿದೆ. 6 ಮಾರ್ಗಗಳ ಫಿಸಿಬಿಲಿಟಿ ಸ್ಟಡಿ ವರದಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಕೈ ಸೇರಿದೆ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ ಗುಡ್​​ ನ್ಯೂಸ್​ ನೀಡಿದೆ.

ಕೈಗಾರಿಕಾ ವಲಯಗಳಿಗೆ ಸಂಪರ್ಕ: ಆರ್ಥಿಕವಾಗಿ ಅಭಿವೃದ್ಧಿ ಹಿನ್ನೆಲೆ ಮೆಟ್ರೋ ವಿಸ್ತರಣೆ 

ಈ ತಿಂಗಳ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಬಿಎಂಆರ್​ಸಿಎಲ್​ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್​​​ ನೀಡುತ್ತಿದ್ದಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಆ ವರದಿಯನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಕಳುಹಿಸಲಿದೆ.

ಇದನ್ನೂ ಓದಿ: ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!: BMRCL ವಿರುದ್ಧ ವಿನೂತನ ಪ್ರತಿಭಟನೆ

ನಗರದ ಪ್ರಮುಖ ಕೈಗಾರಿಕಾ ವಲಯಗಳಿಗೆ ಸಂಪರ್ಕ ಕಲ್ಪಿಸುವುದಕ್ಕೆ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಈ ಮೆಟ್ರೋ ವಿಸ್ತರಣೆ ತುಂಬಾ ಸಹಕಾರಿ ಆಗುತ್ತದೆ. ಆರು ಪ್ರಮುಖ ನಮ್ಮ ಮೆಟ್ರೋ ಮಾರ್ಗಗಳ ವಿಸ್ತರಣೆಗೆ ಪ್ರಸ್ತಾಪ ಸಲ್ಲಿಕೆ ಮಾಡಲಾಗಿದೆ.

ಪ್ರಸ್ತಾವಿತ 6 ಮಾರ್ಗಗಳು ಯಾವವು?

  • ಚಲ್ಲಘಟ್ಟದಿಂದ ಬಿಡದಿ ವರೆಗೆ, ಮಾರ್ಗದ ಅಂದಾಜು ಉದ್ದ 15 ಕಿ.ಮೀ (ಸದ್ಯ ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)
  • ಸಿಲ್ಕ್ ಇನ್ಸ್ಟಿಟ್ಯೂಟ್ ಟು ಹಾರೋಹಳ್ಳಿ ವರೆಗೆ, ಮಾರ್ಗದ ಅಂದಾಜು ಉದ್ದ 24 ಕಿ.ಮೀ (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)
  • ಬೊಮ್ಮಸಂದ್ರ ಟು ಅತ್ತಿಬೆಲೆ ವರೆಗೆ, ಮಾರ್ಗದ ಅಂದಾಜು ಉದ್ದ 11 ಕಿ.ಮೀ (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)

ಇದನ್ನೂ ಓದಿ: ಹೊಸ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ: ಶೀಘ್ರವೇ ನಮ್ಮ ಮೆಟ್ರೋ ಪಿಂಕ್​​ ಲೈನ್​​ ಕಾರ್ಯಾರಂಭ ಸಾಧ್ಯತೆ

  • ಕಾಳೇನ ಅಗ್ರಹಾರ ಟು ಕಾಡುಗೋಡಿ ಟ್ರೀ ಪಾರ್ಕ್ ವರೆಗೆ, ಮಾರ್ಗದ ಅಂದಾಜು ಉದ್ದ 68 ಕಿ.ಮೀ. ಇದು ಅತಿ ಉದ್ದದ ಮಾರ್ಗವಾಗಿದೆ. (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)
  • ಮಾದವಾರ ಟು ತುಮಕೂರು ವರೆಗೆ, ಮಾರ್ಗದ ಅಂದಾಜು ಉದ್ದ 60 ಕಿ.ಮೀ (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)
  • ಕೆ.ಆರ್ ಪುರಂ ಟು ಹೊಸಕೋಟೆ ಬೂದಿಗೆರೆ ಕ್ರಾಸ್​​ ವರೆಗೆ, ಮಾರ್ಗದ ಅಂದಾಜು ಉದ್ದ 16 ಕಿ.ಮೀ. (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us