AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ: ಶೀಘ್ರವೇ ನಮ್ಮ ಮೆಟ್ರೋ ಪಿಂಕ್​​ ಲೈನ್​​ ಕಾರ್ಯಾರಂಭ ಸಾಧ್ಯತೆ

ನಮ್ಮ ಮೆಟ್ರೋದ 7.5 ಕಿ.ಮೀ ಉದ್ದದ ಎಲಿವೇಟೆಡ್ ಪಿಂಕ್ ಲೈನ್‌ನಲ್ಲಿ ಬಿಇಎಂಎಲ್ ನಿರ್ಮಿತ ಹೊಸ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿ ತಾತ್ಕಾಲಿಕ ಅನುಮೋದನೆ ನೀಡಿದ್ದು, ಶೀಘ್ರವೇ ಸಾರ್ವಜನಿಕ ಸೇವೆಗೆ ಮುಕ್ತವಾಗುವ ನಿರೀಕ್ಷೆಯಿದೆ. CMRS ಸೆಪ್ಟೆಂಬರ್ ಅಂತ್ಯದೊಳಗೆ ಪಿಂಕ್ ಲೈನ್ ಪರಿಶೀಲಿಸುವ ನಿರೀಕ್ಷೆಯಿದ್ದು, ಬಳಿಕ ಒಂದು ವಾರದೊಳಗೆ ಪ್ರಯಾಣಿಕರ ಸೇವೆಗೆ ಮಾರ್ಗ ಮುಕ್ತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೊಸ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ: ಶೀಘ್ರವೇ ನಮ್ಮ ಮೆಟ್ರೋ ಪಿಂಕ್​​ ಲೈನ್​​ ಕಾರ್ಯಾರಂಭ ಸಾಧ್ಯತೆ
ಶೀಘ್ರವೇ ನಮ್ಮ ಮೆಟ್ರೋ ಪಿಂಕ್​​ ಲೈನ್​​ ಕಾರ್ಯಾರಂಭ ಸಾಧ್ಯತೆ Image Credit source: Tv9 Kannada
ಪ್ರಸನ್ನ ಹೆಗಡೆ
|

Updated on: Sep 24, 2026 | 7:22 AM

Share

ಬೆಂಗಳೂರು, ಸೆಪ್ಟೆಂಬರ್​​ 24: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(BMRCL)ಗೆ ಹೊಸ BEML ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿಯಿಂದ ತಾತ್ಕಾಲಿಕ ಅನುಮೋದನೆ ದೊರೆತಿದೆ. ಇದರಿಂದ ಎಲಿವೇಟೆಡ್ ಪಿಂಕ್ ಲೈನ್‌ ಕೆಲವೇ ವಾರಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಹೆಚ್ಚಾಗಿದೆ. 7.5 ಕಿ.ಮೀ ಉದ್ದದ ಈ ಮಾರ್ಗವನ್ನು ಕಾರ್ಯಾರಂಭಗೊಳಿಸಲು ರೈಲ್ವೆ ಮಂಡಳಿಯ ಅನುಮೋದನೆ ನೀಡಿರುವ ಬಗ್ಗೆ ಬಿಎಂಆರ್​​ಸಿಎಲ್ಲಲ ಮಾಹಿತಿ ಹಂಚಿಕೊಂಡಿದ್ದು, ಈ ಅನುಮೋದನೆಯನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಗೆ (CMRS) ಸಲ್ಲಿಸುವ ದಾಖಲೆಗಳೊಂದಿಗೆ ಲಗತ್ತಿಸಲಾಗುವುದು ಎಂದು ತಿಳಿಸಿದೆ.

ಮೆಟ್ರೋ ರೈಲಿನ ವೇಗಕ್ಕೆ ಮಿತಿ

BMRCLಗೆ ಕಳುಹಿಸಿರುವ ಪತ್ರದಲ್ಲಿ ರೈಲ್ವೆ ಮಂಡಳಿಯು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಆರು ಬೋಗಿಗಳ ರೈಲುಗಳನ್ನು ಗರಿಷ್ಠ 80 ಕಿ.ಮೀ ವೇಗದಲ್ಲಿ ಸಂಚರಿಸಲು ಅನುಮತಿ ನೀಡಿದೆ. ಸೆಕೆಂಡರಿ ಏರ್ ಸ್ಪ್ರಿಂಗ್ ಸಂಪೂರ್ಣವಾಗಿ ತುಂಬಿರುವ ಸಂದರ್ಭದಲ್ಲಿ ಗರಿಷ್ಠ 80 ಕಿ.ಮೀ ವೇಗಕ್ಕೆ ಅನುಮತಿ ನೀಡಲಾಗಿದ್ದು, ಏರ್ ಸಸ್ಪೆನ್ಷನ್ ವ್ಯವಸ್ಥೆಯ ಸೆಕೆಂಡರಿ ಹಂತ ಡಿಫ್ಲೇಟ್ ಆಗಿರುವ ಸಂದರ್ಭದಲ್ಲಿ ಗರಿಷ್ಠ ವೇಗವನ್ನು 49 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ. ರೈಲುಗಳ ಸಂಚಾರವನ್ನು ಗ್ರೇಡ್ ಆಫ್ ಆಟೊಮೇಷನ್ 2 (GoA2)ಕ್ಕೆ ಮಾತ್ರ ರೈಲ್ವೆ ಮಂಡಳಿ ಸೀಮಿತಗೊಳಿಸಿದೆ. ಇದು ಅರೆ-ಸ್ವಯಂಚಾಲಿತ ರೈಲು ನಿಯಂತ್ರಣ ವ್ಯವಸ್ಥೆಯಾಗಿದೆ.

ಇದನ್ನೂ ಓದಿ: ಪಿಂಕ್​ಲೈನ್ ನಮ್ಮ ಮೆಟ್ರೋ ಮಾರ್ಗದ ಮತ್ತೊಂದು ನಿಲ್ದಾಣದ ಹೆಸರು ಬದಲಾವಣೆಗೆ ಆಗ್ರಹ: ಬನ್ನೇರುಘಟ್ಟ ರಸ್ತೆ ಬಂದ್ ಎಚ್ಚರಿಕೆ

ಹೆಚ್ಚಿನ ಹಂತದ ಆಟೊಮೇಷನ್‌ನಲ್ಲಿ ರೈಲುಗಳನ್ನು ಓಡಿಸಲು, ಅನ್‌ಅಟೆಂಡೆಡ್ ಟ್ರೈನ್ ಮ್ಯಾನೇಜ್‌ಮೆಂಟ್ ಸಿಸ್ಟಂ (UTMS)ನ ಸಂಪೂರ್ಣ ಸಾಮರ್ಥ್ಯ ಪರೀಕ್ಷೆ ನಡೆಸಿದ ಬಳಿಕ ಪ್ರತ್ಯೇಕ ಅನುಮೋದನೆ ಪಡೆಯಬೇಕಾಗುತ್ತದೆ. ಹೆಚ್ಚಿನ ಹಂತದ ಆಟೊಮೇಷನ್‌ನಲ್ಲಿ ರಿಮೋಟ್ ಕಾರ್ಯಾಚರಣೆಗೆ ಸಂಬಂಧಿಸಿದ ವಿವಿಧ ಅಪಾಯಗಳನ್ನು ಮೂರನೇ ವ್ಯಕ್ತಿಯಿಂದ, ಸಾಧ್ಯವಾದರೆ ISA ಮೂಲಕ, ಮೌಲ್ಯಮಾಪನ ಮಾಡಬೇಕು ಎಂದು ಮಂಡಳಿ ತಿಳಿಸಿದೆ. ಬಳಿಕವಷ್ಟೇ ಚಾಲಕರಹಿತ ರೈಲು ಸಂಚಾರ (Driverless Train Operation/Unattended Train Operation)ಕ್ಕೆ ಅನುಮತಿ ನೀಡುವಂತೆ ಆಯೋಗವನ್ನು ಸಂಪರ್ಕಿಸಬೇಕು ಎಂದು ಸೂಚಿಸಿದೆ ಎನ್ನಲಾಗಿದೆ.

CMRS ಸೆಪ್ಟೆಂಬರ್ ಅಂತ್ಯದೊಳಗೆ ಪಿಂಕ್ ಲೈನ್ ಪರಿಶೀಲಿಸುವ ನಿರೀಕ್ಷೆಯಿದ್ದು, ಬಳಿಕ ಒಂದು ವಾರದೊಳಗೆ ಪ್ರಯಾಣಿಕರ ಸೇವೆಗೆ ಮಾರ್ಗ ಮುಕ್ತವಾಗುವ ಸಾಧ್ಯತೆ ಇದೆ. CMRS ಅನುಮೋದನೆ ದೊರೆತ ಬಳಿಕ, ಸರ್ಕಾರದ ಅನುಮೋದನೆಗಳಿಗೆ ಒಳಪಟ್ಟು ಯಾವುದೇ ದಿನದಿಂದಲೂ ಪ್ರಯಾಣಿಕರ ಸೇವೆ ಆರಂಭಿಸಲು ಸಿದ್ಧವಿರೋದಾಗಿ ಬಿಎಂಆರ್​​ಸಿಎಲ್​​ ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More