ಬೆಂಗಳೂರು ಮೆಟ್ರೋ ಟನಲ್ ಕಾಮಗಾರಿ 2025ರ ಮಾರ್ಚ್ ವೇಳೆಗೆ ಪೂರ್ಣ: ಡಿಕೆ ಶಿವಕುಮಾರ್
ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಶುಕ್ರವಾರ ಬೆಂಗಳೂರು ಮೆಟ್ರೋದ ಪಿಂಕ್ ಲೈನ್ ಸುರಂಗ ಮಾರ್ಗದ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು.
ಬೆಂಗಳೂರು, ಜುಲೈ 14: ಮೆಟ್ರೋದ ಪಿಂಕ್ ಲೈನ್ ಸುರಂಗ ಮಾರ್ಗದ (Bengaluru Metro Tunnel) ಕಾಮಗಾರಿ 2025ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಸುರಂಗ ಮಾರ್ಗದ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಸುರಂಗ ಮಾರ್ಗದಲ್ಲಿ ಒಟ್ಟು 18 ಮೆಟ್ರೋ ನಿಲ್ದಾಣಗಳು ಇರಲಿದೆ ಎಂದರು.
ಅಧಿಕಾರಿಗಳು ಹೇಳುವುದು ಹೇಳುತ್ತಾರೆ, ಆದರೆ ಸಾಧಕ ಬಾಧಕ ನೋಡಬೇಕಾಗುತ್ತದೆ. ಅಧಿಕಾರಿಗಳ ಮಾಹಿತಿ ಪ್ರಕಾರ ಸುರಂಗ ಮಾರ್ಗವು 21.26 ಕಿ.ಮೀ. ಇರಲಿದ್ದು, ಡಬಲ್ ಲೇನ್ ಇರಲಿದೆ. 4 ಪ್ಯಾಕೇಜ್ನಲ್ಲಿ ಯೋಜನೆ ಇದ್ದು ಶೇ 75 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಲಕ್ಕಸಂದ್ರ ಮೆಟ್ರೋ ವೀಕ್ಷಣೆ ಮುಗಿಸಿದ ನಂತರ ಅವರು ಎಂಜಿ ರಸ್ತೆ ಟನಲ್‌ಗೆ ತೆರಳಿ ವೀಕ್ಷಿಸಿದರು.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ನ್ಯೂಸ್: ನಿಮ್ಮ ಸೇವೆಗೆ ಬರಲಿದೆ ‘ಮೆಟ್ರೋಮಿತ್ರಾ’
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 6 ನಿಲ್ದಾಣಗಳೊಂದಿಗೆ 7.50 ಕಿಮೀ ಎಲಿವೇಟೆಡ್ ವಿಭಾಗವನ್ನು ಒಳಗೊಂಡಿದೆ ಮತ್ತು ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ 12 ನಿಲ್ದಾಣಗಳೊಂದಿಗೆ 13.76 ಕಿಮೀ ಭೂಗತ ವಿಭಾಗವನ್ನು ಒಳಗೊಂಡಿದೆ” ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಒಂಬತ್ತು ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ಸುರಂಗ ಕಾಮಗಾರಿಗೆ ತೊಡಗಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಐದು ಟಿಬಿಎಂಗಳು ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಉಳಿದವುಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ