BMTC: ಬೆಂಗಳೂರು ನಗರ ಸಾರಿಗೆ ಬಸ್​ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಬಿಎಂಟಿಸಿ ಸಿದ್ಧತೆ

ಬೆಂಗಳೂರು ನಗರದಲ್ಲಿರುವ ಒಟ್ಟು 5 ಸಾವಿರ ಬಿಎಂಟಸಿ ಬಸ್ಸುಗಳಿಗೆ 37 ಕೋಟಿ ವೆಚ್ಚದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲು ಬಿಎಂಟಸಿ ಸಿದ್ಧತೆ ನಡೆಸಿದೆ.

BMTC: ಬೆಂಗಳೂರು ನಗರ ಸಾರಿಗೆ ಬಸ್​ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಬಿಎಂಟಿಸಿ ಸಿದ್ಧತೆ
ಬಿಎಂಟಿಸಿ ಬಸ್​​
Follow us
| Updated By: ವಿವೇಕ ಬಿರಾದಾರ

Updated on:Dec 24, 2022 | 10:42 PM

ಬೆಂಗಳೂರು: ರಾಜ್ಯ – ರಾಜಾಧಾನಿ ಬೆಂಗಳೂರಿನಲ್ಲಿ (Bengaluru) ಇತ್ತೀಚಿಗೆ ಬಿಎಂಟಿಸಿ (BMTC) ಬಸ್ಸುಗಳಿಂದ (Bus) ಅಪಘಾತಗಳು (Accident) ಹೆಚ್ಚಾಗುತ್ತಿವೆ.‌ ಹೀಗಾಗಿ ವಾಹನ ಸವಾರರಂತು ಕಿಲ್ಲರ್ ಬಿಎಂಟಸಿ ಬಸ್ಸುಗಳೆಂದೇ ಕರೆಯೋದಕ್ಕೆ ಶುರುಮಾಡಿದ್ದಾರೆ. ಸಾಲದಕ್ಕೆ ಬಿಎಂಟಿಸಿ ಡ್ರೈವರ್​ಗಳ ತಪ್ಲಿಲ್ಲದಿದ್ದರೂ ಬಸ್ಸುಗಳನ್ನು ಅಡ್ಡಗಟ್ಟಿ ಹೊಡೆಯುವುದಕ್ಕೆ ಶುರುಮಾಡಿಕೊಂಡಿದ್ದಾರೆ. ಇವುಗಳಿಗೆಲ್ಲ ಬ್ರೇಕ್ ಹಾಕುವ ಸಾಲುವಾಗಿ ಬಿಎಂಟಿಸಿ ನಿಗಮ ಹೊಸ ಪ್ಲಾನ್ ಮಾಡಿದೆ. ಹೌದು, ನಗರದಲ್ಲಿರುವ ಒಟ್ಟು 5 ಸಾವಿರ ಬಿಎಂಟಸಿ ಬಸ್ಸುಗಳಿಗೆ ಎರೆಡೆರಡು ಸಿಸಿ ಟಿವಿ ಕ್ಯಾಮೆರಾಗಳನ್ನು (CC cameras) 37 ಕೋಟಿ ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ. ಬಿಎಂಟಿಸಿಗೆ ತಂತ್ರಜ್ಞಾನದ ಅಗತ್ಯವಿದೆ.

ಜೊತೆಗೆ ಬಸ್ಸುಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಮಹಿಳೆಯರ ಸುರಕ್ಷತೆ ಬಹುಮುಖ್ಯವಾಗಿರುವ ಕಾರಣದಿಂದ ಈ ಯೋಜನೆ ಜಾರಿ ಮಾಡಿದ್ದೇವೆ. ಇನ್ನು ಈ ಕ್ಯಾಮೆರಾ ಅಳವಡಿಕೆಯನ್ನು ಮಣಿಪಾಲ್ ಟೆಕ್ನಲಜಿ ಎನ್ನುವ ಸಂಸ್ಥೆ ಅಳವಡಿಕೆ ಮಾಡುತ್ತಿದೆ. ಸದ್ಯ ಈ ವರ್ಷದಲ್ಲಿ ಟೆಸ್ಟಿಂಗ್ ನಡೆಯಲಿದ್ದು, ಜನವರಿ ತಿಂಗಳ ಹೊತ್ತಿಗೆ ಬಿಎಂಟಿಸಿಯ 6 ಸಾವಿರ ಬಸ್ಸುಗಳಲ್ಲಿಯು ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ.

ಬಿಎಂಟಸಿ ಕಂಡೆಕ್ಟರ್ ಮಹೇಶ್:-

ಈ ಬಗ್ಗೆ ಬಿಎಂಟಸಿ ಕಂಡೆಕ್ಟರ್ ಮಹೇಶ್ ಅವರು ಮಾತನಾಡಿ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡುತ್ತಿರುವುದು ಬಿಎಂಟಸಿ ಡ್ರೈವರ್ ಹಾಗೂ ಕಂಡೆಕ್ಟರ್​ಗಳಿಗೆ ಅನುಕೂಲಕರವಾಗುತ್ತಿದ್ದು, ರಸ್ತೆಗಳಲ್ಲಿ ಅಪಾಘಾತಗಳು ನಡೆದಾಗ ಬಿಎಂಟಿಸಿ ಡ್ರೈವರ್, ಕಂಡೆಕ್ಟರ್ ಮೇಲೆಯೇ ಜನರು ದೂರುತ್ತಿದ್ದರು. ಇದೀಗ ಸತ್ಯಾ ಸತ್ಯತೆಗಳು ಗೊತ್ತಾಗಲಿದೆ. ಮಹಿಳೆಯರಿಗೆ ಕಿರುಕುಳ, ಪಿಕ್ ಪಾಕೇಟ್ ಮಾಡುವುದು, ಜಗಳ ಮಾಡುವವರಿಗೆ ಇನ್ಮುಂದೆ ಬ್ರೇಕ್ ಬೀಳಲಿದೆ. ಯಾರೇ ಏನು ತಪ್ಪು ಮಾಡಿದರು ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗುವುದರಿಂದ ನಾವು‌ ಮೇಲಾಧಿಕಾರಿಗಳಿಗೆ ಸಾಕ್ಷಿ ಸಮೇತ ತಿಳಿಸಬಹುದು. ಜನರೇ ಬಂದು ಬಸ್ಸುಗಳಿಗೆ ಗುದ್ದಿದರು ಬಿಎಂಟಿಸಿ ಡ್ರೈವರ್​ಗಳ‌ ಮೇಲೆ ಹಾಕುತ್ತಿದ್ದರು. ಎಷ್ಟೋ ಸಲ ಹೊಡೆಯುವುದಕ್ಕೆ ಬಂದಿದ್ದಾರೆ. ಇದೀಗಾ ಸಿಸಿಟಿವಿ ಕ್ಯಾಮೆರಾಗಳು ಇರುವುದರಿಂದ ಜನರು ಹೆದರುತ್ತಾರೆ ಎಂದು ಹೇಳಿದರು.

ಪ್ರಯಾಣಿಕ ಸಂತೋಷ:-

ಬಿಎಂಟಿಸಿ ಬಸ್ಸುಗಳಲ್ಲಿ ರಾತ್ರಿ ಹೊತ್ತು ಸಂಚಾರ ಮಾಡುವಾಗ ಭಯವಾಗುತ್ತಿತ್ತು. ಇದೀಗ ಭಯ ದೂರವಾಗಿದೆ. ಎಷ್ಟೋ‌ ಬಸ್ಸುಗಳಲ್ಲಿ ಪರ್ಸುಗಳು ಕಳ್ಳತನವಾಗುತ್ತಿದ್ದವು. ಇದೀಗ ಸಿಸಿಟಿವಿ ಕ್ಯಾಮೆರಾಗಳಿಂದ ಮಹಿಳೆಯರಿಗೆ ರಕ್ಷಣೆ ಸಿಗುತ್ತದೆ. ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡುತ್ತಿರುವುದು ಒಳ್ಳೆಯದೆ. ಆದರೆ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ಒಟ್ಟಿನಲ್ಲಿ ಬಿಎಂಟಿಸಿ ಬಸ್ಸುಗಳಿಗೆ ಅಂಟಿರಿವ ಕಿಲ್ಲರ್ ಹಣೆಪಟ್ಟಿಯನ್ನು ಅಧಿಕಾರಿಗಳು ಬದಲಿಸಲು ಹೊರಟಿದ್ದಾರೆ. ಆದರೆ ಈ ಹಿಂದೆ ಅಳವಡಿಸಿರುವ ಕ್ಯಾಮೆರಾಗಳು ಹಳ್ಳ ಹಿಡಿದಿದ್ದು, ಇದೀಗ ಅಳವಡಿಸಲು ಹೊರಟಿರುವ ಕ್ಯಾಮೆರಾಗಳನ್ನು ಬಿಎಂಟಿಸಿ ನಿಗಮ ಎಷ್ಟರಮಟ್ಟಿಗೆ ನಿರ್ವಹಣೆ ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:40 pm, Sat, 24 December 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ