AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Halal: ಹಲಾಲ್​ ಪ್ರಮಾಣ ಪತ್ರ ವಾರ್: ಹಲಾಲ್ ವಿರುದ್ಧ ಬಾಯ್ಕಟ್ ಅಭಿಯಾನ ಶುರುಮಾಡಿದ ಹಿಂದೂ ಸಂಘಟನೆಗಳು

Halal certificate: ಹಲಾಲ್ ಪತ್ರ ಹಂಚಿಕೆ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಹಲಾಲ್ ಪತ್ರ ಬೇಕಾ? ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಹಲಾಲ್ ಪತ್ರ ನೀಡುವ ಹೆಸರಲ್ಲಿ ಮುಸ್ಲಿಂ ಧಾರ್ಮಿಕ ಹೆಸರಿನ ಕಂಪನಿಗಳು ವಾರ್ಷಿಕ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಿವೆ ಎನ್ನಲಾಗುತ್ತಿದೆ.

Halal: ಹಲಾಲ್​ ಪ್ರಮಾಣ ಪತ್ರ ವಾರ್: ಹಲಾಲ್ ವಿರುದ್ಧ ಬಾಯ್ಕಟ್ ಅಭಿಯಾನ ಶುರುಮಾಡಿದ ಹಿಂದೂ ಸಂಘಟನೆಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 24, 2022 | 5:07 PM

ಬೆಂಗಳೂರು: ಹಲಾಲ್ ಪತ್ರ (Halal certificate) ಹಂಚಿಕೆ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಹಲಾಲ್ ಪತ್ರ ಬೇಕಾ? ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಹಲಾಲ್ ಪತ್ರ ನೀಡುವ ಹೆಸರಲ್ಲಿ ಮುಸ್ಲಿಂ ಧಾರ್ಮಿಕ ಹೆಸರಿನ ಕಂಪನಿಗಳು ವಾರ್ಷಿಕ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಿವೆ. ಇದರ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆ ಹಾಗೂ ಹಲಾಲ್​ಗೆ ಬಾಯ್ಕಟ್ ಅಭಿಯಾನ ಶುರುಮಾಡಿದ್ದು‌ ಇದೀಗ ಹಲಾಲ್ ಸರ್ಟಿಫಿಕೇಟ್ ವಿರುದ್ಧ ಮಸೂದೆ ಜಾರಿಗೊಳಿಸುವ ಹಂತಕ್ಕೆ ಬಂದಿದೆ. ಬೆಳಗಾವಿ ಅಧಿವೇಶದನಲ್ಲಿ ಮಸೂದೆ ಬಗ್ಗೆ ಚರ್ಚೆಗೆ ಬರುವ ಮುಂಚಿತವೇ ಹಲಾಲ್ ಪ್ರಮಾಣ ಪತ್ರದ ಬಗ್ಗೆ ಹುಯಿಲೆಬ್ಬಿಸಿದ್ದವರಿಗೆ ಭಾರೀ ಹಿನ್ನೆಡೆ ತಂದಿದೆ. ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡಗಳಿಗೆ ಹಲಾಲ್ ಸರ್ಟಿಫೈಡ್ ಕಟ್ಟಡ ಎಂಬ ಪ್ರಮಾಣ ಪತ್ರ ನೀಡಲು ಮುನಿಸಿಪಲ್​ ಕಾಯ್ದೆಗಳಲ್ಲಿ ಅವಕಾಶವೇ ಇಲ್ಲ ಎಂದು ರಾಜ್ಯ ಸರ್ಕಾರವೇ ಒಪ್ಪುಕೊಂಡಿದೆ.

ಹಲಾಲ್ ಪ್ರಮಾಣಪತ್ರ ನೀಡುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ: ಎನ್ ರವಿಕುಮಾರ್

ಆಸ್ಪತ್ರೆಗಳೂ ಸೇರಿದಂತೆ ಇನ್ನಿತರ ಕಟ್ಟಡಗಳಿಗೂ ಹಲಾಲ್ ಪ್ರಮಾಣಪತ್ರ ನೀಡುತ್ತಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಸಂಭವಿಸುತ್ತಿದೆ. ಇದರಿಂದ ತೆರಿಗೆ ಮೂಲಕ ಬರಬೇಕಾದ ಹಣತಪ್ಪಿ ಹೋಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ರು. ಅಲ್ಲದೇ ಈ ಸಂಬಂಧ ಖಾಸಗಿ ವಿಧೇಯಕವನ್ನೂ ಮಂಡಿಸಲಾಗುವುದು ಎಂದು ಹೇಳಿದ್ದರು. ಆದರೆ ಬೆಳಗಾವಿ ಅಧಿವೇಶನದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ನೀಡಿರುವ ಉತ್ತರ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಎನ್​. ರವಿಕುಮಾರ್ ಅವರಿಗೆ ನೀಡಿರುವ ಉತ್ತರದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡಗಳಿಗೆ ಹಲಾಲ್ ಸರ್ಟಿಫೈಡ್ ಕಟ್ಟಡ ಎಂಬುದಾಗಿ ಪ್ರಮಾಣ ಪತ್ರ ನೀಡಲು ಮುನಿಸಿಪಲ್ ಕಾಯ್ದೆಗಳಲ್ಲಿ ಅವಕಾಶವೇ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: HALAL vs JATKA: ದಸರಾ ಸಂಭ್ರಮದಲ್ಲೂ ಸದ್ದು ಮಾಡುತ್ತಿದೆ ಹಲಾಲ್​ VS ಜಟ್ಕಾ ಕಟ್ ಅಭಿಯಾನ

ರಾಜ್ಯದಲ್ಲಿ ಹಲವಾರು ಕಟ್ಟಡಗಳ ಹಲಾಲ್ ಸರ್ಟಿಫೈಡ್ ಕಟ್ಟಡ ಎಂಬುದಾಗಿ ಜಾಹೀರಾತು ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಈ ಕುರಿತು ಸರ್ಕಾರದ ನಿಲುವೇನು, ಸರ್ಕಾರವು ಎಂದಿನಿಂದ ಹಲಾಲ್ ಪ್ರಮಾಣೊತ್ರವನ್ನು ನೀಡುತ್ತಿದೆ ಎಂದು ಎಂಎಲ್​ಸಿ ರವಿಕುಮಾರ್ ಅವರು ಚುಕ್ಕೆಗುರುತಿನ ಪ್ರಶ್ನೆ ಕೇಳಿದ್ದರು.

ಹಲಾಲ್ ಸರ್ಟಿಫೈಡ್ ಕಟ್ಟಡ ಕುರಿತು ನಗರಾಭಿವೃದ್ಧಿ ಸಚಿವ ಸ್ಪಷ್ಟನೆ  

ಈ ಎಲ್ಲಾ ಪ್ರಶ್ನೆಗಳಿಗೂ ಉತ್ತಸಿರುವ ನಗರಾಭಿವೃದ್ಧಿ ಸಚಿವ ಹಲಾಲ್ ಸರ್ಟಿಫಿಕೇಟ್​ನ್ನು ನಗರ ಸ್ಥಳೀಯ ಸಂಸ್ಥೆಗಳಿಂದ ನೀಡುವುದಿಲ್ಲ. ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡಗಳಿಗೆ ಹಲಾಲ್ ಸರ್ಟಿಫೈಡ್ ಕಟ್ಟಡ ಎಂಬ ಪ್ರಮಾಣ ಪತ್ರ ನೀಡುತ್ತಿರುವ ಯಾವುದೇ ಪ್ರಕರಣವೂ ವರದಿಯಾಗಿರುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಹಲಾಲ್ ಆಹಾರಗಳನ್ನು ನಿಷೇಧಿಸುವಂತೆ ಬಿಜೆಪಿ ನಾಯಕರ ಆಗ್ರಹ; ಅದು ಉಗ್ರಗಾಮಿಗಳ ಅಸ್ತ್ರವೆಂದ ಪಕ್ಷ

ಹಲಾಲ್ ಪತ್ರ ನೀಡಲು ಅವಕಾಶ ಇಲ್ಲ: ರವಿಕುಮಾರ್

ಇತ್ತ ಬಿಬಿಎಂಪಿ ಕೂಡಾ ಹಲಾಲ್ ಸರ್ಟಿಫಿಕೇಟ್ ನೀಡುವ ಬಗ್ಗೆ ಬಿಬಿಎಂಪಿಯಿಂದ ಯಾವುದೇ ಅನುಮತಿ ಪತ್ರ ಪಡೆದಿಲ್ಲ. ಹಲಾಲ್ ಪತ್ರ ನೀಡಲು ಅವಕಾಶ ಇಲ್ಲ ಅಂತಾ ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಜಂಟಿ ‌ನಿರ್ದೇಶಕ ರವಿಕುಮಾರ್ ಮಾಹಿತಿ ನೀಡಿದ್ದು, ಕ್ರಮ ತೆಗೆದುಕೊಳ್ಳುವ ಬಗ್ಗೆ ಸೂಚನೆ ನೀಡುತ್ತಾರಂತೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡುರುವ ಮುಸ್ಲಿಂ ಮುಖಂಡರು ವಾಸ್ತು ಬರೆದು ಕೊಡುವ ಪುರೋಹಿತರು ಯಾರ ಅನುಮತಿ ಪಡೆದಿರುತ್ತಾರೆ? ಅಂತಾ ಪ್ರಶ್ನೆ ಕೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ