ಈಗ ಹಲಾಲ್ ವಿವಾದ, ಯುಗಾದಿ ವರ್ಷತೊಡಕು ಆಚರಣೆ ಸಮಯದಲ್ಲಿ ಹಲಾಲ್ ಮಾಂಸ ಖರೀದಿ ಮಾಡಬೇಡಿ -ಕರೆ

Halal: ಹಲಾಲ್ ಮಾಡಿದ ಮಾಂಸವನ್ನ ಬಾಯ್ಕಾಟ್ ಮಾಡಿ. ಹಲಾಲ್ ಮಾಡಿದ ಮಾಂಸವನ್ನ ಅಲ್ಲಾಗೆ ಅರ್ಪಣೆ ಮಾಡಿರ್ತಾರೆ. ಹಲಾಲ್ ವೇಳೆ ಅಲ್ಲಾನಿಗೆ ಅರ್ಪಣೆ ಮಾಡಲಾಗಿರುತ್ತೆ.

ಈಗ ಹಲಾಲ್ ವಿವಾದ, ಯುಗಾದಿ ವರ್ಷತೊಡಕು ಆಚರಣೆ ಸಮಯದಲ್ಲಿ ಹಲಾಲ್ ಮಾಂಸ ಖರೀದಿ ಮಾಡಬೇಡಿ -ಕರೆ
ಯುಗಾದಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 28, 2022 | 3:39 PM

ಬೆಂಗಳೂರು: ಇನ್ನೇನು ಇದೇ ವಾರಾಂತ್ಯ ಹಿಂದೂಗಳ ಮಹತ್ವದ ಸದಾ ನವನವೀನ ಯುಗಾದಿ ಹಬ್ಬ. ಏಪ್ರಿಲ್ 2 ಶನಿವಾರದಂದು ಯುಗಾದಿ ಹಬ್ಬವಿದ್ದು, ಅದರ ಮಾರನೆಯ ದಿನ ಅಂದರೆ, ಭಾನುವಾರ ವರ್ಷತೊಡಕು ಹಬ್ಬ ಆಚರಣೆಯಿರುತ್ತದೆ (Ugadi Hosa Todaku). ಆದರೆ ಈ ಬಾರಿ ಈ ಹಬ್ಬದ ಸಮಯದಲ್ಲಿ ಹಲಾಲ್ ಮಾಂಸ ಖರೀದಿ ಮಾಡಬೇಡಿ. ಹಲಾಲ್ ಮಾಡಿದ ಮಾಂಸವನ್ನ ಬಾಯ್ಕಾಟ್ ಮಾಡಿ. ಹಲಾಲ್ ಮಾಡಿದ ಮಾಂಸವನ್ನ ಅಲ್ಲಾಗೆ ಅರ್ಪಣೆ ಮಾಡಿರ್ತಾರೆ. ಹಲಾಲ್ ವೇಳೆ ಅಲ್ಲಾನಿಗೆ ಅರ್ಪಣೆ ಮಾಡಲಾಗಿರುತ್ತೆ. ಹೀಗಾಗಿ ಹಲಾಲ್ ಮಾಂಸ ಖರೀದಿ (Halal) ಮಾಡದಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂಗಳಿಗೆ (Hindu Janajagruthi Samiti) ಸಂದೇಶ ರವಾನೆ ಮಾಡಲಾಗಿದೆ. ಹಿಜಾಬ್, ವ್ಯಾಪಾರ ಧರ್ಮದ ಬಳಿಕ ಈಗ ಹಲಾಲ್ ವಿವಾದ ತಲೆದೋರಿದೆ.

ಹಲಾಲ್ ಸರ್ಟಿಫಿಕೇಟ್ ಅಗತ್ಯ ಹಿಂದೂಗಳಿಗೆ ಇಲ್ಲ ಹಿಂದೂ ಅಂಗಡಿಗಳಿಗೆ ಏಕೆ ಹಲಾಲ್ ಸರ್ಟಿಫಿಕೇಟ್ ಬೇಕು, ಹಲಾಲ್‌ ಸರ್ಟಿಫಿಕೇಟ್ ಕೊಡೋದು ಮುಸ್ಲಿಂ ಟ್ರಸ್ಟ್. FSSAI ಕೊಡೋ ಸರ್ಟಿಫಿಕೇಟ್ ಉನ್ನತವಾದದ್ದು. ಇದರ ನಡುವೆ ಹಲಾಲ್ ಸರ್ಟಿಫಿಕೇಟ್ ಯಾಕೆ ಬೇಕು? ಹಲಾಲ್ ಸರ್ಟಿಫಿಕೇಟ್ ನೀಡೋಕೆ ದುಡ್ಡು ಪಡೆಯುತ್ತಾರೆ. ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್ ಹಲಾಲ್ ಸರ್ಟಿಫಿಕೇಟ್ ನೀಡುತ್ತೆ. ಈ ದುಡ್ಡನ್ನ ಹಿಜಾಬ್ ಹೋರಾಟ, ಹಿಂದೂ ವಿರೋಧಿ ಕಾನೂನು ಹೋರಾಟಕ್ಕೆ ಬಳಕೆ ಮಾಡಲಾಗುತ್ತದೆ. ಇದರ ಅಗತ್ಯ ಹಿಂದೂ ಹೋಟೆಲ್ ಗಳಿಗೆ ಬೇಕಾಗಿಲ್ಲ. ಹಿಂದೂಗಳಿಗೆ ಹಲಾಲ್, ಹಲಾಲ್ ಅಲ್ಲದ ಪದಾರ್ಥಕ್ಕೆ ವ್ಯತ್ಯಾಸ ಇಲ್ಲ. ಆದರೆ ಮುಸಲ್ಮಾನನಿಗೆ ಹಲಾಲ್ ಇಲ್ಲದೇ ಇರುವುದು ಹರಾಮ್ ಅಂತಾಗುತ್ತದೆ. ಹಲಾಲ್ ಸರ್ಟಿಫಿಕೇಟ್ ಹಿಂದೂಗಳಿಗೆ ಬೇಡಾ. ಹೀಗಾಗಿ ಕೆಲ ಹೋಟೆಲ್ ಗಳಲ್ಲಿ ಹಲಾಲ್ ಸರ್ಟಿಫಿಕೇಟ್ ತೆಗೆಸಲಾಗ್ತಿದೆ. ಹಿಂದೂ ಜನಜಾಗೃತಿ ಸಮಿತಿ ಈ ಅಭಿಯಾನ ಕೈಗೊಂಡಿದೆ. ಈಗಾಗಲೇ ಬೆಂಗಳೂರಿನ ವಿಜಯನಗರದಲ್ಲಿ ಎರಡು ಮೂರು ಹೋಟೆಲ್ ಗಳಲ್ಲಿ ಹಲಾಲ್ ಬೋರ್ಡ್ ‌ತೆಗೆಯಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ತಿಳಿಸಿದೆ.

‘ಮೈಸೂರು ಹುಲಿ’ ಬಿರುದು ಕೊಟ್ಟವರು ಯಾರು? ಇನ್ನು ಟಿಪ್ಪು ಸುಲ್ತಾನ್ ವೈಭವೀಕರಣ ಬೇಡ- ಸರ್ಕಾರಕ್ಕೆ ಸಲಹೆ ಬೆಂಗಳೂರು: ಕೇವಲ ಶಾಲಾ ಪಠ್ಯದಲ್ಲಿ ವೈಭವೀಕರಣಕ್ಕೆ ಕಂಟಕ ಮಾತ್ರವಲ್ಲ ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ (Mysore Tiger Tipu Sultan) ಎಂಬ ಬಿರುದಿಗೂ ಆಪತ್ತು ಎದುರಾಗಿದೆ. ಮುಖ್ಯವಾಗಿ ಈ ಬಿರುದನ್ನು ತೆಗೆಯುವಂತೆ ಪಠ್ಯ ಪರಿಷ್ಕರಣೆ ಸಮಿತಿ ಸಲಹೆ ನೀಡಿದೆ. ಈಗಾಗಲೇ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಈ ಅಂಶ ಉಲ್ಲೇಖಗೊಂಡಿದೆ. ಸರ್ಕಾರವು ಈ ವರದಿಯನ್ನು ಪರಿಶೀಲನೆ ಮಾಡಿ, ಪರಿಷ್ಕರಣೆಗೆ ಮುಂದಾದ್ರೆ ಬಿರುದಿಗೆ ಕುತ್ತು ಗ್ಯಾರೆಂಟಿ ಎನ್ನಲಾಗಿದೆ. ಹಾಗಾದ್ರೆ ಮುಂದಿನ ಶೈಕ್ಷಣಿಕ ವರ್ಷದಿಂದ ಮೈಸೂರು ಹುಲಿ ಬಿರುದು ಇರೊಲ್ವಾ? ಮೈಸೂರು ಹುಲಿ ಎಂಬ ಬಿರುದಿಗೆ ಕತ್ತರಿ ಹಾಕುತ್ತಾ ರಾಜ್ಯ ಸರ್ಕಾರ? ಎಬ ಪ್ರಶ್ನೆ ಈಗ ಎದ್ದಿದೆ.

ಮೈಸೂರು ಹುಲಿ’ ಎಂಬ ಬಿರುದನ್ನ ಕೈ ಬಿಡುವ ಸಾಧ್ಯತೆಯಿದೆ ಎಂದು ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ, ಚಿಂತಕ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ. ಟಿಪ್ಪುಗೆ ‘ಮೈಸೂರು ಹುಲಿ’ ಎಂದು ಬಿರುದು ಕೊಟ್ಟಿದ್ಯಾರು? ಬಿರುದು ಕೊಟ್ಟಿರುವ ಬಗ್ಗೆ ಮಾಹಿತಿ ಎಲ್ಲೂ ಅಡಕವಾಗಿಲ್ಲ. ಉಲ್ಲೇಕವಾಗಿಲ್ಲ, ದಾಖಲೆಗಳೂ ಇಲ್ಲ. ಸುಖಾ ಸುಮ್ಮನೇ ಮೈಸೂರು ಹುಲಿ ಎಂದು ವೈಭವೀಕರಣ ಮಾಡಲಾಗುತ್ತಿದೆ. ಜಾತಿ ಮತಗಳ ಬಗ್ಗೆ ಟಿಪ್ಪು ಬೇಕಾಬಿಟ್ಟಿಯಾಗಿ ಮಾತನಾಡಿದ್ದಾರೆ ಎಂದು ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.

ಯಾವುದೇ ದಾಖಲೆಯಿಲ್ಲದೆ, ತಪ್ಪುತಪ್ಪಾಗಿ ಟಿಪ್ಪು ಬಗ್ಗೆ ಪರಿಷ್ಕರಣೆ ಮಾಡಿದ್ದ ಬರಗೂರು ರಾಮಚಂದ್ರಪ್ಪ ಈ ಹಿಂದೆ, ಬರಗೂರು ರಾಮಚಂದ್ರಪ್ಪ ಪರಿಷ್ಕರಣೆ ಮಾಡಿದ್ದಾರೆ. ಟಿಪ್ಪುವಿನ ಬಗ್ಗೆ ಬರಗೂರು ರಾಮಚಂದ್ರಪ್ಪಗೆ ಸ್ಪಷ್ಟ ಮಾಹಿತಿ ಇಲ್ಲ. ಮನಸ್ಸಿಗೆ ಬಂದಂತೆ ಟಿಪ್ಪುವಿನ ವೈಭವೀಕರಣ ಮಾಡಲಾಗಿದೆ. ಮುಖ್ಯವಾಗಿ ಈಗ ಟಿಪ್ಪು ಬಿರುದು ತೆಗೆಯುವಂತೆ ವರದಿ ನೀಡಿದ್ದೇವೆ ಎಂದು ರೋಹಿತ್ ಚಕ್ರತೀರ್ಥ ಹೇಳಿದ್ದಾರೆ. ಜಾತಿ ಮತಗಳ ಬಗ್ಗೆ ಟಿಪ್ಪುವಿನ ಮಾತನ್ನೂ ಪಠ್ಯದಿಂದ ತೆಗೆಯಬೇಕು. ಮುಖ್ಯವಾಗಿ 2 ವಿಚಾರಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದೇವೆ ಎಂದು ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಟಿವಿ9 ಜೊತೆ ಮಾತನಾಡುತ್ತಾ ತಿಳಿಸಿದರು.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕರಣೆ ಪಠ್ಯ ಜಾರಿ 15 ದಿನಗಳ ಹಿಂದೆ ಸರ್ಕಾರಕ್ಕೆ ವರದಿ ನೀಡಿದ್ದೇವೆ. ಕೇವಲ ಟಿಪ್ಪು ವಿಚಾರ ಮಾತ್ರವಲ್ಲ ಅನೇಕ ವಿಚಾರಗಳು ಪರಿಷ್ಕರಣೆ ಆಗಿವೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕರಣೆ ಪಠ್ಯ ಜಾರಿಯಾಗಲಿದೆ. ಒಟ್ಟು 1 ರಿಂದ 10ನೇ ತರಗತಿಯ ಪಠ್ಯವನ್ನ ಪರಿಷ್ಕರಣೆ ಮಾಡಿದ್ದೇವೆ. ಈ ಪೈಕಿ 1 ರಿಂದ 5ನೇ ತರಗತಿಯ ಭಾಷಾ ವಿಷಯಗಳು ಹಾಗೂ 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯಗಳ ಪರಿಷ್ಕರಣೆ ಆಗಿದೆ. ಟಿಪ್ಪು ಬಗ್ಗೆ ಹೆಚ್ಚಾಗಿ ವೈಭವೀಕರಣ ಆಗಿರೋ ಹಿನ್ನೆಲೆ ಈ ಎಲ್ಲ ತರಗತಿಯ ಪಠ್ಯಗಳಿಗೂ ಪರಿಷ್ಕರಣೆ ಮಾಡಿದ್ದೇವೆ.

Published On - 3:19 pm, Mon, 28 March 22