
ಬೆಂಗಳೂರು, ಮೇ 27: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಬಾಡಿಗೆ ಮನೆಯ ದರಗಳು ಗಗನಕ್ಕೇರುತ್ತಿವೆ. ಹೀಗಾಗಿ ತಿಂಗಳ ಸಂಬಳದ ಮುಕ್ಕಾಲು ಭಾಗ ಹಣವನ್ನು ಮನೆ ಬಾಡಿಗೆಗೆ ಮೀಸಲಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ವ್ಯಕ್ತಿಯೊಬ್ಬರು ಇದೇ ಬಾಡಿಗೆ ಮನೆ ವಿಚಾರವಾಗಿ ಪೋಸ್ಟ್ ಮಾಡಿದ್ದಾರೆ. ಹೌದು, ಬೆಂಗಳೂರಿನಲ್ಲಿ 3 ಬಿಹೆಚ್ ಕೆ ಅಪಾರ್ಟ್ಮೆಂಟ್‌ನ ತಿಂಗಳ ಬಾಡಿಗೆ 1.1 ಲಕ್ಷ ರೂ ಹಾಗೂ ಡೆಪಾಸಿಟ್ 4 ಲಕ್ಷ ರೂಪಾಯಿ ಎಂದಿದ್ದಾರೆ. ಈ ಪೋಸ್ಟ್ ನಗರದ ಗಗನಕ್ಕೇರುತ್ತಿರುವ ವಸತಿ ವೆಚ್ಚಗಳ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.
@kipupwidanshika ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ನ ಶೀರ್ಷಿಕೆಯಲ್ಲಿ ಬೆಂಗಳೂರಿನಲ್ಲಿ 3ಬಿಹೆಚ್ ಕೆ ಮನೆಗೆ 1.1 ಲಕ್ಷ ರೂಪಾಯಿಗೆ ಬಾಡಿಗೆ. ಇದು ನಿಜಕ್ಕೂ ಯಾರೊಬ್ಬರ ಮಾಸಿಕ ಸಂಬಳವೇ? ಎಂದು ಬರೆದುಕೊಂಡಿದ್ದಾರೆ. ಪೋಸ್ಟ್‌ನೊಂದಿಗೆ ಸ್ಕ್ರೀನ್‌ಶಾಟ್‌ನಲ್ಲಿ ದೊಮ್ಮಲೂರು ಮತ್ತು ಇಂದಿರಾನಗರದ ಎಂಬಸಿ ಗಾಲ್ಫ್ ಲಿಂಕ್ಸ್ ಬಿಸಿನೆಸ್ ಪಾರ್ಕ್ ಬಳಿ ಇರುವ ಅರೆ ಸುಸಜ್ಜಿತ 3BHK ಫ್ಲಾಟ್‌ನ ವಿವರಗಳನ್ನು ತೋರಿಸಲಾಗಿದೆ. ಈ ಅಪಾರ್ಟ್ಮೆಂಟ್ ಸುಮಾರು 1800 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.
3bhk on rent for 1.1L in Bangalore??? That’s actually someone’s monthly salary🙏 pic.twitter.com/yycK8Yeuzw
— Anshika Aggarwal (@kipupwidanshika) May 26, 2026
ಖಾಸಗಿ ಟೆರೇಸ್, ಬಾಲ್ಕನಿ, ಪೂಜಾ ಕೊಠಡಿ, ಮಾಡ್ಯುಲರ್ ಅಡುಗೆಮನೆ ಮತ್ತು ಲಿವಿಂಗ್ ರೂಮಿನಲ್ಲಿ ಮರದ ನೆಲಹಾಸು ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮಾಸಿಕ ಬಾಡಿಗೆಯನ್ನು 1.1 ಲಕ್ಷ ರೂ, ನಿರ್ವಹಣಾ ಶುಲ್ಕಗಳು ಸುಮಾರು 6,000 ರೂ ಫ್ಲಾಟ್‌ಗೆ ಭದ್ರತಾ ಠೇವಣಿ 4 ಲಕ್ಷ ರೂ ಎಂದು ಉಲ್ಲೇಖಿಸಿರುವುದನ್ನು ಕಾಣಬಹುದು. ಈ ಅಪಾರ್ಟ್‌ಮೆಂಟ್ ನ ಸಂಕೀರ್ಣದಲ್ಲಿ ಈಜುಕೊಳ, ಜಿಮ್ನಾಷಿಯಂ, ಟೆನಿಸ್ ಕೋರ್ಟ್, ಸ್ಕ್ವಾಷ್ ಕೋರ್ಟ್, ಸ್ಕೇಟಿಂಗ್ ರಿಂಕ್, ಉದ್ಯಾನಗಳು ಮತ್ತು ಸಮುದಾಯ ಭವನ ಸೇರಿದಂತೆ ಇನ್ನಿತ್ತರ ಸೌಲಭ್ಯಗಳನ್ನು ಹೊಂದಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ಕೊಟ್ಟು ಉಪಚರಿಸುವ ಮಹಿಳೆ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಲೂಟಿ ಮಾಡುವ ವಿಧಾನ. ಇದಕ್ಕೆ ಹಣ ನೀಡುವ ಯಾರಾದರೂ ಮೂರ್ಖರೇ ಸರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಅಪಾರ್ಟ್ಮೆಂಟ್ ನನ್ನ ಅಪಾರ್ಟ್ಮೆಂಟ್ ನ ಪಕ್ಕದಲ್ಲಿದೆ. ಹಿಂದಿನ ದಾಖಲೆಗಳ ಆಧಾರದ ಮೇಲೆ ಈ ಮಾಲೀಕರು ಕೆಟ್ಟವರು. ಅವರು ತಮ್ಮ ಫ್ಲಾಟ್ ಅನ್ನು ಬಾಡಿಗೆಗೆ ನೀಡುವ ಮೂಲಕ ಒಂದು ಉಪಕಾರ ಮಾಡುತ್ತಿರುವಂತೆ ವರ್ತಿಸುತ್ತಾರೆ. ಇದು 20 ವರ್ಷ ಹಳೆಯ ಫ್ಲಾಟ್ ಮತ್ತು ಹೊರಗಿನಿಂದ ಬಿರುಕುಗಳು ಗೋಚರಿಸುತ್ತವೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಇನ್ನೊಬ್ಬರು, ಬಾಡಿಗೆ ಮನೆಗಿಂತ ಸ್ವಂತ ಮನೆ ಖರೀದಿಸಿದರೆ ಅದೇ ಬಾಡಿಗೆ ದುಡ್ಡಲ್ಲಿ ಸಾಲ ತೀರಿಸಬಹುದು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ