AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ವಾಹನ ಸವಾರರಿಗೆ ನಿರಾಸೆ: ಡಬಲ್ ಡೆಕ್ಕರ್ ಫ್ಲೈಓವರ್ ಟೆಂಡರ್ ರದ್ದುಪಡಿಸಿದ BMRCL

ಪೂರ್ಣ ಪ್ರಮಾಣದಲ್ಲಿ ಫ್ಲೈಓವರ್​ ಮಾಡಲು ಕೇಂದ್ರ ಅನುಮತಿ ನೀಡದ ಹಿನ್ನೆಲೆ ಆರೆಂಜ್ ಮೆಟ್ರೋ ಮಾರ್ಗದ ಪೂರ್ಣ ಡಬಲ್ ಡೆಕ್ಕರ್ ಫ್ಲೈಓವರ್ ಟೆಂಡರ್​​ರನ್ನು ಬಿಎಂಆರ್​ಸಿಎಲ್​ ರದ್ದು ಮಾಡಿದೆ. ಆ ಮೂಲಕ ಬೆಂಗಳೂರು ವಾಹನ ಸವಾರರಿಗೆ ನಿರಾಸೆ ಉಂಟಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ವಾಹನ ಸವಾರರಿಗೆ ನಿರಾಸೆ: ಡಬಲ್ ಡೆಕ್ಕರ್ ಫ್ಲೈಓವರ್ ಟೆಂಡರ್ ರದ್ದುಪಡಿಸಿದ BMRCL
ನಮ್ಮ ಮೆಟ್ರೋImage Credit source: x.com/OfficialBMRCL
ಕಿರಣ್​ ಸೂರ್ಯ
| Edited By: |

Updated on: Oct 05, 2026 | 8:51 PM

Share

ಮುಖ್ಯಾಂಶಗಳು

  • ಆರೆಂಜ್ ಲೈನ್​ನ ಪೂರ್ಣ ಡಬಲ್ ಡೆಕ್ಕರ್ ಫ್ಲೈಓವರ್ ಟೆಂಡರ್ ರದ್ದು
  • ಮೂರನೇ ಹಂತದ ಆರೆಂಜ್ ಮೆಟ್ರೋ ಮಾರ್ಗದ ಕಾಮಗಾರಿಯ ಟೆಂಡರ್‌ ಕ್ಯಾನ್ಸಲ್
  • ಬೆಂಗಳೂರು ವಾಹನ ಸವಾರರಿಗೆ ನಿರಾಸೆ

ಬೆಂಗಳೂರು, ಅಕ್ಟೋಬರ್​ 05: ಕಳೆದ ವರ್ಷವಷ್ಟೇ ಪ್ರಧಾನಿ ನರೇಂದ್ರ ಮೋದಿ 3ನೇ ಹಂತದ ನಮ್ಮ ಮೆಟ್ರೋಗೆ ಶಂಕುಸ್ಥಾಪನೆ ಮಾಡಿದ್ದರು. ಆ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರ ಎಂಡ್-ಟು-ಎಂಡ್ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮತಿ ನೀಡದ ಹಿನ್ನೆಲೆ ಇದೀಗ ಬಿಎಂಆರ್​ಸಿಎಲ್​​ ಕರೆದಿದ್ದ ತನ್ನ ಎಲ್ಲಾ ಸಿವಿಲ್ ಟೆಂಡರ್ ಗಳನ್ನು ಕ್ಯಾನ್ಸಲ್ ಮಾಡಿದೆ.

ಟೆಂಡರ್ ರದ್ದತಿಗೆ ಕಾರಣವೇನು?

ಕಳೆದ ವರ್ಷ ಆಗಸ್ಟ್ 10 ರಂದು ಪ್ರಧಾನಿ ಮೋದಿ ಅವರು 3ನೇ ಹಂತದ ನಮ್ಮ ಮೆಟ್ರೋ ಮಾರ್ಗಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಆರೆಂಜ್ ಮಾರ್ಗದಲ್ಲು ಫುಲ್ ಡಬಲ್ ಡೆಕ್ಕರ್ ಮಾಡಲು ರಾಜ್ಯ ಸರ್ಕಾರ ಅನುಮತಿ ಕೇಳಿತ್ತು. ಪೂರ್ಣ ಪ್ರಮಾಣದ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣದ ಪ್ರಸ್ತಾವನೆಗೆ ಕೇಂದ್ರ ಸರಕಾರದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಇದನ್ನೂ ಓದಿ: ವಾಲ್ಮೀಕಿ ಜಯಂತಿ ಸಾರ್ವತ್ರಿಕ ರಜೆ ದಿನಾಂಕ ಬದಲಾವಣೆ: ಸರ್ಕಾರಿ ನೌಕರರಿಗೆ ಲಾಂಗ್ ಹಾಲಿಡೇ

ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32ಕಿ.ಮೀ ಹಾಗೂ ಕಡಬಗೆರೆ-ಹೊಸಹಳ್ಳಿವರೆಗೆ 12 8. ಒಟ್ಟು 44.65 ಕಿಮೀ ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡದ ಹಿನ್ನೆಲೆ ಬಿಎಂಆರ್ಸಿಎಲ್​​ ಜನವರಿಯಲ್ಲಿ ಕರೆದಿದ್ದ ಮೂರು ಸಿವಿಲ್ ಟೆಂಡರ್​ಗಳನ್ನು ಕ್ಯಾನ್ಸಲ್ ಮಾಡಿದೆ. ಈ ಬಗ್ಗೆ ಮಾತನಾಡಿದ ನಮ್ಮ ಮೆಟ್ರೋ ಪ್ರಯಾಣಿಕರು ‘ಬೆಂಗಳೂರಿಗೆ ಡಬಲ್ ಡೆಕ್ಕರ್ ಅವಶ್ಯಕತೆ ತುಂಬಾ ಇದೆ’ ಎಂದಿದ್ದಾರೆ.

LIVE TV

ಇನ್ನು ಈಗಾಗಲೇ ಐಎಸ್ಎಸ್‌ಸಿ ನಡೆಸಿರುವ ಅಧ್ಯಯನವೂ ಮೆಟ್ರೋ ಮಾರ್ಗದ ಜೊತೆಯಲ್ಲೇ ಫೈ ಓವರ್ ನಿರ್ಮಿಸುವುದರಿಂದ ಜನರು ಖಾಸಗಿ ವಾಹನಗಳನ್ನೇ ಬಳಸಲು ಮುಂದಾಗುತ್ತಾರೆ. ಇದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತದೆ. ವಾಯುಮಾಲಿನ್ಯ ಮತ್ತು ಕಾರ್ಬನ್ ಹೊರಸೂಸುವಿಕೆ ಹೆಚ್ಚಾಗಲಿದೆ ಎಂದು ಎಚ್ಚರಿಸಿತ್ತು.

ಯೋಜನೆಯ ಸ್ವರೂಪ ಮತ್ತು ವೆಚ್ಚದ ಲೆಕ್ಕಾಚಾರ

ಡಬಲ್ ಡೆಕ್ಕರ್​ಗೆ ತಗಲುವ 9700 ಕೋಟಿ ರೂ ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸುವುದಾಗಿ ಹೇಳಿದೆ. ಆದರೆ, ಈವರೆಗೆ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಡಬಲ್ ಡೆಕ್ಟರ್‌ಗೆ ಅನುಮೋದನೆ ದೊರೆತಿಲ್ಲ. ಕೇಂದ್ರ ಸರ್ಕಾರ ಡಬಲ್ ಡೆಕ್ಕರ್​ನಿಂದ ವಾಹನ ದಟ್ಟಣೆ ಹೆಚ್ಚಾಗಲಿದೆ. ಇದರಿಂದ ಮೆಟ್ರೋದಲ್ಲಿ ಸಂಚಾರ ಮಾಡುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಲಿದೆ ಎನ್ನುವುದು ಕೇಂದ್ರದ ಮಾತು. ಆದರೆ ರಾಜ್ಯ ಸರ್ಕಾರ ಮಾತ್ರ ಡಬಲ್ ಫ್ಲೈ ಓವರ್​ನಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಕಡಿಮೆ ಆಗಲಿದೆ ಎಂದು ಮತ್ತೊಮ್ಮೆ ವರದಿ ಸಲ್ಲಿಸಿತ್ತು. ಇತ್ತ ಪ್ರಯಾಣಿಕರು ಕೂಡ ‘ಡಬಲ್ ಡೆಕ್ಕರ್ ಕಾಮಗಾರಿ ಮಾಡಲಿ, ಇದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆ ಆಗುತ್ತದೆ’ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಈ ತಿಂಗಳೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಫಿಕ್ಸ್: ಸಚಿವ ಸಂಪುಟದ ಅನುಮೋದನೆಗೆ ಕಾಯುತ್ತಿರುವ ಸಾರಿಗೆ ಇಲಾಖೆ

ಒಟ್ಟಿನಲ್ಲಿ ರಾಜ್ಯ ಸರ್ಕಾರ ಟ್ರಾಫಿಕ್ ಕಡಿಮೆ ಆಗಲಿ ಎಂದು ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರ ಸಂಪೂರ್ಣ ಮಾರ್ಗದ ಡಬಲ್ ಡೆಕ್ಕರ್​ಗೆ ಅನುಮತಿ ನೀಡುತ್ತಿಲ್ಲ. ಇದರಿಂದ ಬಿಎಂಆರ್ಸಿಎಲ್ ಎಲ್ಲಾ ಸಿವಿಲ್ ಟೆಂಡರ್​ಗಳನ್ನು ಕ್ಯಾನ್ಸಲ್ ಮಾಡಿದ್ದು, ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More