AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಕೂಡಿಬಂದ ಮುಹೂರ್ತ: ಯಾವಾಗಿನಿಂದ ಆರಂಭ? ಇಲ್ಲಿದೆ ಮಾಹಿತಿ

ಬೆಂಗಳೂರು ಹಾಗೂ ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭದ ಬಗ್ಗೆ ಮಹತ್ವದ ಅಪ್ಡೇಟ್​​ ಸಿಕ್ಕಿದೆ. ಈ ಪ್ರಮುಖ ರೈಲು ವಾರದಲ್ಲಿ ಆರು ದಿನ ಎರಡೂ ಮಾರ್ಗಗಳಲ್ಲಿ ಸಂಚರಿಸಲಿದ್ದು, 16 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಪ್ರಯಾಣ ಪೂರ್ಣಗೊಳಿಸಲಿದೆ. ಅಷ್ಟಕ್ಕೂ ಈ ರೈಲಿನ ಸಂಚಾರ ಆರಂಭ ಯಾವಾಗಿನಿಂದ? ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಕೂಡಿಬಂದ ಮುಹೂರ್ತ: ಯಾವಾಗಿನಿಂದ ಆರಂಭ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರImage Credit source: PTI
ಪ್ರಸನ್ನ ಹೆಗಡೆ
|

Updated on:Oct 02, 2026 | 3:09 PM

Share

ಬೆಂಗಳೂರು, ಅಕ್ಟೋಬರ್​​ 02: ಸುದೀಘ್ರ ಕಾಯುವಿಕೆಯ ಬಳಿಕ ಕೊನೆಗೂ ರೈಲ್ವೇ ಪ್ರಯಾಣಿಕರಿಗೆ ಶೀಘ್ರವೇ ಶುಭಸುದ್ದಿ ಸಿಗುವ ನಿರೀಕ್ಷೆಯಿದ್ದು, ಎಸ್‌ಎಂವಿಟಿ ಬೆಂಗಳೂರು–ಮುಂಬೈ ಸಿಎಸ್‌ಎಂಟಿ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಇದೇ ತಿಂಗಳ ಕೊನೆಯಲ್ಲಿ ಆರಂಭವಾಗಲಿದೆ ಎಂನ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಶೀಘ್ರದಲ್ಲೇ ರೈಲ್ವೆ ಮಂಡಳಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದ್ದು, ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭವಾದರೆ ಭಾರತದ ಟೆಕ್ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬೈ ನಡುವಿನ ರೈಲು ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ.

ಪ್ರಯಾಣದ ಅವಧಿ ಸುಮಾರು ಸುಮಾರು 16 ಗಂಟೆಗಳಿಗೆ ಇಳಿಕೆ

ಪ್ರಸ್ತುತ ಯೋಜನೆಯ ಪ್ರಕಾರ, ಈ ಪ್ರಮುಖ ರೈಲು ವಾರದಲ್ಲಿ ಆರು ದಿನ ಎರಡೂ ಮಾರ್ಗಗಳಲ್ಲಿ ಸಂಚರಿಸಲಿದ್ದು, 16 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಪ್ರಯಾಣ ಪೂರ್ಣಗೊಳಿಸಲಿದೆ. ಸದ್ಯ ಈ ಎರಡು ನಗರಗಳ ನಡುವೆ ಪ್ರತಿದಿನ ನೇರವಾಗಿ ಸಂಚರಿಸುವ ಏಕೈಕ ರೈಲು ಉದ್ಯಾನ್ ಎಕ್ಸ್‌ಪ್ರೆಸ್ ಆಗಿದ್ದು, ಇದರ ಪ್ರಯಾಣ ಅವಧಿ ಸರಾಸರಿ 24 ಗಂಟೆಯಾಗಿದೆ. ಪ್ರಸ್ತುತ ವೇಳಾಪಟ್ಟಿಯ ಪ್ರಕಾರ, ರೈಲು ರಾತ್ರಿ 10 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.50ಕ್ಕೆ ಮುಂಬೈನ ಸಿಎಸ್‌ಎಂಟಿ ತಲುಪುವ ಸಾಧ್ಯತೆ ಇದೆ. ಹಿಂತಿರುಗುವ ಮಾರ್ಗದಲ್ಲಿ ರಾತ್ರಿ 10.30ಕ್ಕೆ ಮುಂಬೈನಿಂದ ಹೊರಟು ಮಧ್ಯಾಹ್ನ 2.50ಕ್ಕೆ ಬೆಂಗಳೂರಿಗೆ ತಲುಪುವ ಸಾಧ್ಯತೆ ಇದೆ. ಆದರೆ, ವೇಳಾಪಟ್ಟಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

LIVE TV

ಇದನ್ನೂ ಓದಿ: ತಿರುಪತಿ-ವಿಜಯಪುರ ನಡುವೆ ವಿಶೇಷ ರೈಲು: ಇಲ್ಲಿದೆ ಸಂಚಾರದ ಸಮಯ, ನಿಲುಗಡೆ ಇತರ ವಿವರ

ಚಾಲನೆ ನೀಡುವ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದಾಗ್ಯೂ, ರೈಲ್ವೆ ವಲಯಗಳಿಗೆ ಶೀಘ್ರದಲ್ಲೇ ಅನುಕೂಲಕರ ದಿನಾಂಕದಲ್ಲಿ ರೈಲು ಸೇವೆ ಆರಂಭಿಸಲು ಸೂಚನೆ ನೀಡಲಾಗಿದೆ. ಈ ರೈಲು ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವುದಿಲ್ಲ. ಬದಲಿಗೆ ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೊಲ್ಲಾಪುರ ಮತ್ತು ಕಲ್ಯಾಣ್‌ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಮುಂಬೈಗೆ ಸೂಪರ್‌ಫಾಸ್ಟ್ ರೈಲು ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆ ಪ್ರಯಾಣಿಕರಿಂದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಇದೆ. ಹಲವು ಭರವಸೆಗಳ ಹೊರತಾಗಿಯೂ, ಮುಂಬೈ ಮತ್ತು ಬೆಂಗಳೂರು ನಡುವಿನ ರೈಲು ಪ್ರಯಾಣ ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ಘೋಷಣೆಯಾಗಿರುವುದು ಈ ಮಾರ್ಗದ ರೈಲು ಸಂಪರ್ಕವನ್ನು ಮತ್ತಷ್ಟು ವೇಗಗೊಳಿಸುವ ನಿರೀಕ್ಷೆ ಮೂಡಿಸಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:09 pm, Fri, 2 October 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More