ಬೆಂಗಳೂರು: ಮೊದಲ ಪ್ರಿಯಕರನನ್ನು ಬಿಟ್ಟು ಮತ್ತೊಬ್ಬನ ಸಂಗಡ ಮಾಡಿದ್ದಕ್ಕೆ ತಾಯಿ ಮಗುವಿನ ಹತ್ಯೆ

ಬೆಂಗಳೂರಿನಲ್ಲಿ ನಡೆದ ತಾಯಿ ಮತ್ತು ಮಗುವಿನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ತಿಳಿದುಬಂದಿದೆ. ಗಂಡನಿಂದ ದೂರಾದ ನಂತರ ಜೊತೆಗಿದ್ದ ಪ್ರಿಯಕನ ಬಿಟ್ಟು ಬೇರೊಬ್ಬನ ಜೊತೆ ಸ್ನೇಹ ಮಾಡಿದ್ದಕ್ಕೆ ಮಹಿಳೆ ಮತ್ತು ಮಗುವಿನ ಹತ್ಯೆ ನಡೆದಿರುವ ಅಂಶ ಬೆಳಕಿಗೆ ಬಂದಿದೆ. ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಮಗುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ.

ಬೆಂಗಳೂರು: ಮೊದಲ ಪ್ರಿಯಕರನನ್ನು ಬಿಟ್ಟು ಮತ್ತೊಬ್ಬನ ಸಂಗಡ ಮಾಡಿದ್ದಕ್ಕೆ ತಾಯಿ ಮಗುವಿನ ಹತ್ಯೆ
ಮೊದಲ ಪ್ರಿಯಕನನ್ನು ಬಿಟ್ಟು ಮತ್ತೊಬ್ಬನ ಸಂಗಡ ಮಾಡಿದ್ದಕ್ಕೆ ಬಾಗಲಗುಂಟೆಯಲ್ಲಿ ಮಹಿಳೆ ಮತ್ತು ಮಗುವಿನ ಹತ್ಯೆ
Follow us
Prajwal Kumar NY
| Updated By: Rakesh Nayak Manchi

Updated on:Sep 08, 2023 | 11:09 AM

ಬೆಂಗಳೂರು, ಸೆ.8: ಗಂಡನಿಂದ ದೂರಾದ ನಂತರ ಜೊತೆಗಿದ್ದ ಪ್ರಿಯಕನ ಬಿಟ್ಟು ಬೇರೊಬ್ಬನ ಜೊತೆ ಸ್ನೇಹ ಮಾಡಿದ್ದೇ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ತಾಯಿ ಮಗು ಹತ್ಯೆಗೆ (Murder) ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ. ನವನೀತ (35) ಮತ್ತು ಈಕೆಯ ಎಂಟು 8 ವರ್ಷದ ಸೃಜನ್ ಕೊಲೆಯಾದವರು.

ಮಹಿಳೆ ನವನೀತನಿಗೆ ಚಂದ್ರು ಎಂಬಾತನೊಂದಿಗೆ ವಿವಾಹವಾಗಿತ್ತು. ಈತನಿಂದ ದೂರಾದ ಬಳಿಕ ತನ್ನ ಮಗುವಿನಿಂದಿಗೆ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸ ಮಾಡುತಿದ್ದರು. ಈ ವೇಳೆ ಶೇಖರ್ ಎಂಬಾತನೊಂದಿಗೆ ಸಂಪರ್ಕದಲ್ಲಿದ್ದಳು.

ಇತ್ತೀಚಿಗೆ ಶೇಖರ್ ಬಿಟ್ಟು ಲೋಕೇಶ್ ಎಂಬಾತನ ಸಂಪರ್ಕದಲ್ಲಿ ಇದ್ದಾಳೆ ಎಂದ ಅನುಮಾನ ಶೇಖರ್​ಗೆ ಬಂದಿದೆ. ಕಳೆದ ಒಂದು‌ ವರ್ಷದ ಹಿಂದೆ ನವನೀತಳಿಗೆ ಲೋಕೇಶ್ ಎಂಬುವನ ಜೊತೆ ಸ್ನೆಹವಾಗಿತ್ತು. ಇದನ್ನು ಕಂಡು ಮೊದಲ ಪ್ರಿಯಕರ ಶೇಖರ್, ಆತನ ಸಹವಾಸ ಬಿಡುವಂತೆ ನವನೀತಳಿಗೆ ಎಚ್ಚರಿಕೆ ನೀಡಿದ್ದನು. ಆಕೆಯ ಮೇಲೆ ಹಲ್ಲೆಯೂ ನಡೆಸಿದ್ದನು.

ಇದನ್ನೂ ಓದಿ: ಚಿಕ್ಕಮಗಳೂರು: ಪತ್ನಿಯ ಬರ್ಬರ ಹತ್ಯೆ ಮಾಡಿ ಪೊಲೀಸ್ ಠಾಣೆಗೆ ಬಂದ ಪತಿ

ಇಷ್ಟೆಲ್ಲಾ ಆದ ಮೇಲೂ ನವನೀತ ಲೋಕೇಶ್ ಜೊತೆ ಸಂಬಂಧ ಮುಂದುವರೆಸಿದ್ದಾಳೆ. ಇದರಿಂದ ಕೋಪಗೊಂಡ ಶೇಖರ್, ‌ನವನೀತಳನ್ನು ಕೊಲೆ ಮಾಡುವುದಾಗಿ ಹೇಳಿಕೊಂಡಿದ್ದನು. ಅದರಂತೆ ಶನಿವಾರ ಎಂದಿನಂತೆ ನವನೀತಳ ಮನೆಗೆ ಬಂದಿದ್ದಾನೆ.

ಹೀಗೆ ಮನೆಗೆ ಬಂದ ಶೇಖರ್, ಜ್ಯೂಸ್ ತರುವಂತೆ ನವನೀತಳ 8 ವರ್ಷದ ಮಗನನ್ನು ಅಂಗಡಿಗೆ ಕಳುಹಿಸಿದ್ದಾನೆ. ನಂತರ ನವನೀತಳ ಜೊತೆ ಜಗಳ ಶುರು ಮಾಡಿದ್ದ ಶೇಖರ್, ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ.

ಇತ್ತ, ಅಂಗಡಿಯಿಂದ ಜ್ಯೂಸ್ ತೆಗೆದುಕೊಂಡು ಬಂದಿದ್ದ ಬಾಲಕನಿಗೆ ಮ್ಯಾಜಿಕ್ ಹೇಳಿಕೊಡುತ್ತೇನೆ ಎಂದು ನಂಬಿಸಿ ಸೀರೆಯಿಂದ ಕೈ ಕಾಲುಗಳನ್ನು‌ ಕಟ್ಟಿ ತಲೆ ದಿಂಬಿನಿಂದ‌ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಎರಡು ‌ಮೃತ ದೇಹಗಳನ್ನು ಬೆಡ್​​ರೂಮ್​ನಲ್ಲಿ ಮಂಚದ ಮೇಲೆ ಎಸೆದು ಪರಾರಿಯಾಗಿದ್ದಾನೆ.

ಜೋಡಿ ಕೊಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಗಲಗುಂಟೆ ಠಾಣಾ ಪೊಲೀಸರು, ಆರೋಪಿ ಶೇಖರ್​ನನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Fri, 8 September 23