ಸೈಬರ್ ಕ್ರೈಂ ನಿಯಂತ್ರಣಕ್ಕೆ ರಾಜ್ಯದಲ್ಲೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರ ಮೆಗಾ ಪ್ಲಾನ್
ಬೆಂಗಳೂರಿನಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಸದ್ದಿಲ್ಲದೇ ಅಮಾಯಕರ ಖಾತೆಗೆ ಕನ್ನ ಹಾಕುತ್ತಿದ್ದ ವಂಚಕರಿಗೆ ಬೆಂಗಳೂರು ನಗರ ಪೊಲೀಸರು ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾಗಿದ್ದಾರೆ. ಸೈಬರ್ ವಂಚನೆಗೆ ಬಳಕೆ ಮಾಡುತ್ತಿದ್ದ ಸಿಮ್ ಕಾರ್ಡ್ಗಳನ್ನು ಬ್ಲಾಕ್ ಮಾಡಲಾಗುತ್ತಿದೆ. ಇದು ರಾಜ್ಯದಲ್ಲೇ ಮೊದಲ ಬಾರಿ ಕೈಗೊಂಡ ಕ್ರಮವಾಗಿದೆ.
ಬೆಂಗಳೂರು, ಸೆ.8: ವಂಚನೆಗೆ ಬಳಕೆ ಮಾಡುತ್ತಿದ್ದ ಸಿಮ್ಗಳನ್ನು ಬ್ಲಾಕ್ ಮಾಡುವ ಮೂಲಕ ಸದ್ದಿಲ್ಲದೇ ಅಮಾಯಕರ ಖಾತೆಗೆ ಕನ್ನ ಹಾಕುತ್ತಿದ್ದ ವಂಚಕರಿಗೆ ಬೆಂಗಳೂರು (Bengaluru) ನಗರ ಪೊಲೀಸರು ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಸೈಬರ್ ಕ್ರೈಂ (Cyber Crime) ನಿಯಂತ್ರಣಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ಕೈಗೊಂಡ ಕ್ರಮ ಇದಾಗಿದೆ.
ನಗರದಲ್ಲಿ ದಿನೇ ದಿನೇ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಸೈಬರ್ ಕ್ರೈಂ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್ ಮಾಡಿದ ಪೊಲೀಸರು, ಸೈಬರ್ ವಂಚನೆಗೆ ಬಳಕೆ ಮಾಡುತ್ತಿದ್ದ ಸಿಮ್ ಕಾರ್ಡ್ಗಳನ್ನೇ ಬ್ಲಾಕ್ ಮಾಡುತ್ತಿದ್ದಾರೆ.
ಜನವರಿಯಿಂದ ಇದುವರೆಗೆ ವಂಚನೆಯಾದ ಸೈಬರ್ ವಂಚನೆ ಪ್ರಕರಣಗಳ ಅಂಕಿ ಅಂಶ ಪಡೆದ ಕಂಟ್ರೋಲ್ ರೂಮ್, ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳಿರುವುದನ್ನು ಪತ್ತೆ ಹಚ್ಚಿದೆ. ಎಲ್ಲಾ ಠಾಣೆಗಳಿಂದ ಸೈಬರ್ ಕೇಸ್ ಡೀಟೆಲ್ಸ್ ಪಡೆದು ವಂಚನೆ ನಂಬರ್ಗಳ ಡೇಟಾ ಸಂಗ್ರಹ ಮಾಡಿದ ಪೊಲೀಸರು, ಯಾವ ಯಾವ ನಂಬರ್ಗಳಿಂದ ವಂಚನೆಯಾಗಿದೆಯೋ ಅಂತಹ ಸಿಮ್ಗಳನ್ನು ಬ್ಲಾಕ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ದೇವನಹಳ್ಳಿ ಶಿಕ್ಷಕನಿಂದ ಬರೋಬ್ಬರಿ 32.25 ಲಕ್ಷ ರೂ. ದೋಚಿದ ಸೈಬರ್ ಖದೀಮ, ಹೇಗೆಲ್ಲ ನಂಬಿಸ್ತಾರೆ ನೋಡಿ..!
ಕೇಂದ್ರ ಗೃಹ ಇಲಾಖೆ ಮತ್ತು ಸಿಮ್ ಸಂಸ್ಥೆಗಳ ಜೊತೆ ಸಂವಹನ ನಡೆಸಿ ಬ್ಲಾಕ್ ಮಾಡಲಾಗುತ್ತಿದೆ. ಅದರಂತೆ ಕೇವಲ 15 ದಿನಗಳಲ್ಲೇ 12 ಸಾವಿರ ಸಿಮ್ಗಳನ್ನು ಪೊಲೀಸರು ಬ್ಲಾಕ್ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ, ಸಿಮ್ಗಳ ಜೊತೆ ಕೃತ್ಯಕ್ಕೆ ಬಳಕೆ ಮಾಡುವ ಮೊಬೈಲ್ಗಳನ್ನೂ ಬ್ಲಾಕ್ ಮಾಡಿಸುತ್ತಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಈ ಸೈಬರ್ ಕಂಟ್ರೋಲ್ ರೂಮ್, ವಂಚನೆಗೆ ಬಳಕೆ ಮಾಡುತ್ತಿದ್ದ ಸಿಮ್ಗಳನ್ನು ಬ್ಲಾಕ್ ಮಾಡುತ್ತಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಹಿಂದಿನ ವರ್ಷದ ಪ್ರಕರಣಗಳನ್ನ ಕೈಗೆತ್ತಿಕೊಳ್ಳಲಿದ್ದಾರೆ.
ಸಿಮ್ ಕಾರ್ಡ್ ನಂಬರ್ ಬ್ಲಾಕ್ ಜೊತೆ ಮೊಬೈಲ್ಗಳನ್ನೂ ಬ್ಲಾಕ್ ಮಾಡುವ ಮೂಲಕ ವಂಚಕರ ಮೂಲ ಪತ್ತೆಗೆ ತಯಾರಿ ನಡೆಸಲಾಗುತ್ತಿದ್ದು, ಬಹುತೇಕ ಸಿಮ್ ನಂಬರ್ಗಳ ಹಿಸ್ಟರಿಯಲ್ಲಿ ಉತ್ತರ ಭಾರತದ ಜಿಲ್ಲೆಗಳದ್ದೇ ನಕಲಿ ಮಾಡಿರುವುದು ಪತ್ತೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ