ಪಿಂಕ್ ಲೈನ್ ಮೆಟ್ರೋ ಟಿಕೆಟ್ ದರ ನಿಗದಿ ಮಾಡಿದ ಬಿಎಂಆರ್ಸಿಎಲ್: ಎಲ್ಲಿಂದ ಎಲ್ಲಿಗೆ ಎಷ್ಟು? ಇಲ್ಲಿದೆ ಮಾಹಿತಿ
ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್‌ನಲ್ಲಿ ನವೆಂಬರ್ 14 ರ ಬೆಳಿಗ್ಗೆ 6 ಗಂಟೆಯಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರವರೆಗೆ 30 ರೂಪಾಯಿ ಟಿಕೆಟ್ ದರ ನಿಗದಿಯಾಗಿದ್ದು, ಐದು ರೈಲುಗಳು ಎಂಟು ನಿಮಿಷಕ್ಕೊಂದರಂತೆ ಸಂಚರಿಸಲಿವೆ. ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ಎಷ್ಟು ಪ್ರಯಾಣ ದರ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ನವೆಂಬರ್ 13: ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್‌ನಲ್ಲಿ ವಾಣಿಜ್ಯ ಸಂಚಾರ ಆರಂಭಕ್ಕೆ ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದ್ದು, ಪ್ರಯಾಣಿಕರ ಟಿಕೆಟ್ ದರವನ್ನು ನಿಗದಿಪಡಿಸಿದೆ. ನವೆಂಬರ್ 14 ರ ಬೆಳಿಗ್ಗೆ 6 ಗಂಟೆಯಿಂದ ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರವರೆಗಿನ ಪಿಂಕ್ ಲೈನ್‌ನಲ್ಲಿ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಪಿಂಕ್ ಲೈನ್ ಮೆಟ್ರೋವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ನವೆಂಬರ್ 13) ಲೋಕಾರ್ಪಣೆಗೊಳಿಸುತ್ತಿದ್ದಾರೆ. ಅದಾದ ನಂತರ ಶನಿವಾರದಿಂದ ಪ್ರಯಾಣಕರ ಸಂಚಾರಕ್ಕೆ ಮುಕ್ತವಾಗಲಿದೆ.
ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರವರೆಗೆ ಪ್ರಯಾಣಿಸಲು 30 ರೂಪಾಯಿ ದರ ನಿಗದಿಪಡಿಸಲಾಗಿದೆ. ಎಸ್.ಜಿ. ಪಾಳ್ಯದಿಂದ ಹುಳಿಮಾವುವರೆಗೆ 20 ರೂಪಾಯಿ, ಐಐಎಂಬಿ (ಬಿಳೇಕಹಳ್ಳಿ)ವರೆಗೆ 20 ರೂಪಾಯಿ ಹಾಗೂ ಎನ್.ಎಸ್. ಪಾಳ್ಯ-ಜೆ.ಪಿ. ನಗರ 4ನೇ ಹಂತದವರೆಗೆ 10 ರೂಪಾಯಿ ಟಿಕೆಟ್ ದರ ಇರಲಿದೆ.
ಎಲ್ಲಿಂದ ಎಲ್ಲಿಗೆ ಎಷ್ಟು ಟಿಕೆಟ್ ದರ?
- ಎಸ್.ಜಿ. ಪಾಳ್ಯ – ಕಾಳೇನ ಅಗ್ರಹಾರ: 30 ರೂಪಾಯಿ
- ಎಸ್.ಜಿ. ಪಾಳ್ಯ – ಹುಳಿಮಾವು: 20 ರೂಪಾಯಿ
- ಎಸ್.ಜಿ. ಪಾಳ್ಯ – ಐಐಎಂಬಿ (ಬಿಳೇಕಹಳ್ಳಿ): 20 ರೂಪಾಯಿ
- ಎಸ್.ಜಿ. ಪಾಳ್ಯ – ಎನ್.ಎಸ್. ಪಾಳ್ಯ-ಜೆ.ಪಿ. ನಗರ 4ನೇ ಹಂತ: 10 ರೂಪಾಯಿ
ಪಿಂಕ್ ಲೈನ್‌ನಲ್ಲಿ ನವೆಂಬರ್ 14 ರಿಂದ ಬಿಇಎಂಎಲ್‌ನಿಂದ ಬಂದಿರುವ ಐದು ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಸುಮಾರು ಎಂಟು ನಿಮಿಷಕ್ಕೊಂದರಂತೆ ರೈಲುಗಳ ಸಂಚಾರ ಇರಲಿದೆ ಎಂದು ತಿಳಿದುಬಂದಿದೆ. ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರದವರೆಗಿನ ಈ ಮೆಟ್ರೋ ಮಾರ್ಗದ ಕಾಮಗಾರಿಗೆ ಒಟ್ಟು 3,470 ಕೋಟಿ ರೂಪಾಯಿ ವೆಚ್ಚವಾಗಿದೆ.
ಪಿಂಕ್ ಲೈನ್ ಮೆಟ್ರೋ ಬಗ್ಗೆ ಮಾಹಿತಿ
ಪಿಂಕ್ ಲೈನ್‌ನ ಮೊದಲ ಹಂತದಲ್ಲಿ ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರವರೆಗೆ ಸುಮಾರು 7.5 ಕಿಲೋಮೀಟರ್ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಮಾಡಲಿದೆ. ಈ ಮಾರ್ಗದಲ್ಲಿ ಆರು ಮೆಟ್ರೋ ನಿಲ್ದಾಣಗಳಿದ್ದು, ಹೊಸ ಸಂಪರ್ಕದಿಂದ ಈ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋಗೆ ಇಂದು ಪ್ರಧಾನಿ ಮೋದಿ ಚಾಲನೆ: 100 ಕಿಮೀ ಗಡಿ ದಾಟಲಿದೆ ಬೆಂಗಳೂರಿನ ಮೆಟ್ರೋ ಜಾಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
