ಬೆಂಗಳೂರು: ಕೆಂಗೇರಿ-ಬೈಯಪ್ಪನಹಳ್ಳಿ ಮಾರ್ಗದ ನಮ್ಮ ಮೆಟ್ರೋ ಸಂಚಾರ(Namma Metro) ಸ್ಥಗಿತವಾಗಿದೆ. ಇದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇಂದು (ಜುಲೈ 04) ತಾಂತ್ರಿಕ ಸಮಸ್ಯೆಯಿಂದ(technical issues) ನಮ್ಮ ಮೆಟ್ರೋ ಸ್ಥಗಿತವಾಗಿದೆ ಎಂದು ತಿಳಿದುಬಂದಿದೆ. ಪೀಕ್ ಟೈಮ್ನಲ್ಲೇ (ಹೆಚ್ಚು ಜನ ಸಂಚರಿಸುವ ಅವಧಿ) ಮೆಟ್ರೋ ಏಕಾಏಕಿ ಸ್ಥಗಿತಗೊಂಡಿದೆ. ಇದರಿಂದ ಕಚೇರಿ, ಶಾಲಾ-ಕಾಲೇಜಿಗೆ ಹೋಗಲು ಮೆಟ್ರೋ ಅವಲಂಬಿಸಿರುವ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.
ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ರೈಲಿನಲ್ಲಿ ಮದ್ಯದ ಬಾಟಲಿ ಸಾಗಾಟಕ್ಕೆ ಅನುಮತಿ ಸಾಧ್ಯತೆ
ನೇರಳೆ ಮಾರ್ಗದ ಕೆಂಗೇರಿ ಟು ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಸ್ಥಗಿತವಾಗಿದ್ದು, ಆಫೀಸ್ಗೆ ಹೊರಟವರೆಲ್ಲ ನಿಲ್ದಾಣದಲ್ಲೇ ಮೆಟ್ರೋಗಾಗಿ ಕಾಯುತ್ತಿದ್ದಾರೆ.
ಇನ್ನು ಮೊನ್ನೇ ಅಷ್ಟೇ ಈ ಮಾರ್ಗದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಭಾನುವಾರ ಎರಡು ಗಂಟೆಗಳ ಕಾಲ ನಮ್ಮ ಮೆಟ್ರೋ ಸ್ಥಗಿತಗೊಳಿಸಲಾಗಿತ್ತು. ಜೂನ್ 30ರಂದು MG ರಸ್ತೆ ಮೆಟ್ರೋದಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಬೆಳಗ್ಗೆ 7ರಿಂದ 9 ಗಂಟೆವರೆಗೆ ಸಂಚರಿಸುವುದಿಲ್ಲ ಎಂದು ಬಿಎಂಆರ್ಸಿಎಲ್ (BMRCL) ಪ್ರಕಟಣೆ ಮೂಲಕ ಮಾಹಿತಿ ನೀಡಿತ್ತು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:09 am, Tue, 4 July 23