ಬೆಂಗಳೂರು, (ಆಗಸ್ಟ್ 12): ಹಸಿರು ಮಾರ್ಗದ ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ನಾಗಸಂದ್ರ-ಮಾದವಾರ ಮಾರ್ಗದಲ್ಲಿ ಸಿಗ್ನಲಿಂಗ್ ಟೆಸ್ಟ್ ಹಿನ್ನೆಲೆಯಲ್ಲಿ ನಾಳೆ ಅಂದರೆ ಆಗಸ್ಟ್ 12ರಿಂದ ಆ.15ರವರೆಗೆ ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ನಿಲ್ದಾಣಗಳ ನಡುವೆ ಮೆಟ್ರೋ ವ್ಯತ್ಯಯವಾಗಲಿದೆ. ಆಗಸ್ಟ್ 13ರಂದು ರಾತ್ರಿ 11ರ ಬದಲು ರಾತ್ರಿ 10 ಗಂಟೆವರೆಗೆ ಮೆಟ್ರೋ ಸಂಚಾರ ಸೇವೆ ಇರಲಿದೆ. ಇನ್ನು ಆ.14ರಂದು ಬೆಳಗ್ಗೆ 5ರ ಬದಲು 6 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ.
ಆಗಸ್ಟ್ 14 ಮತ್ತು 15 ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆಯು, ಬೆಳಿಗ್ಗೆ 5ರ ಬದಲಾಗಿ 6ಕ್ಕೆ ಪ್ರಾರಂಭವಾಗುತ್ತದೆ. ಆದಾಗ್ಯೂ, ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಆಗಸ್ಟ್ 13 ಮತ್ತು 14 ರಂದು ರಾತ್ರಿ 11.12 ಗಂಟೆಯವರೆಗೆ ಕೊನೆಯ ರೈಲು ಸೇವೆ ಲಭ್ಯವಿರುತ್ತದೆ.
ಇದನ್ನೂ ಓದಿ: ಹೊಸ ದಾಖಲೆ ಬರೆದ ನಮ್ಮ ಮೆಟ್ರೋ, 12 ವರ್ಷಗಳಲ್ಲಿ ಹಿಂದಿನ ಎಲ್ಲಾ ದಾಖಲೆ ಉಡೀಸ್
ಪೀಣ್ಯ ಇಂಡಸ್ಟ್ರಿಯಿಂದ, ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು ಆಗಸ್ಟ್ 14 ಮತ್ತು 15 ರಂದು ಬೆಳಿಗ್ಗೆ 5 ಗಂಟೆಗೆ ಸಂಚಾರ ಪ್ರಾರಂಭವಾಗುತ್ತದೆ. ಇನ್ನು ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
Curtailment of Metro Trains Services between Peenya Industry & Nagasandra from 13th-15th Aug 2024. Metro Commuters & Public may kindly note the change in the timings during the above days and requested to plan your travel accordingly. pic.twitter.com/FzhcdJwsBh
— ನಮ್ಮ ಮೆಟ್ರೋ (@OfficialBMRCL) August 12, 2024
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:38 pm, Mon, 12 August 24