Namma Metro: ವಾಟ್ಸಪ್ ​ಆಧಾರಿತ QR ಕೋಡ್ ಟಿಕೆಟಿಂಗ್ ಮೂಲಕ ತಿಂಗಳಿಗೆ ಎಷ್ಟು ಜನ ಪ್ರಯಾಣಿಸುತ್ತಾರೆ? ಇಲ್ಲಿದೆ ಅಂಕಿ-ಅಂಶ

ಏಪ್ರಿಲ್​ ತಿಂಗಳ ಅಂತ್ಯದ ವೇಳೆಗೆ ನಮ್ಮ ಮೆಟ್ರೋ ವಾಟ್ಸಪ್ ​ಆಧಾರಿತ QR ಕೋಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು 3 ಲಕ್ಷ ಜನ ಪ್ರಯಾಣಿಕರು ಸಂಚರಿಸಲಿದ್ದಾರೆ.

Namma Metro: ವಾಟ್ಸಪ್ ​ಆಧಾರಿತ QR ಕೋಡ್ ಟಿಕೆಟಿಂಗ್ ಮೂಲಕ ತಿಂಗಳಿಗೆ ಎಷ್ಟು ಜನ ಪ್ರಯಾಣಿಸುತ್ತಾರೆ? ಇಲ್ಲಿದೆ ಅಂಕಿ-ಅಂಶ
ನಮ್ಮ ಮೆಟ್ರೋ ಕ್ಯೂರ್​ ಕೋಡ್​ ಟಿಕೆಟ್​
Follow us
|

Updated on:Apr 25, 2023 | 8:50 AM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಮ್ಮ ಮೆಟ್ರೋ (Namma Metro) ಪ್ರಾರಂಭವಾಗಿ 11 ವರ್ಷವಾಯಿತು. ಅತಿ ವೇಗದ ಮತ್ತು ಟ್ರಾಫಿಕ್‌ ಮುಕ್ತ ಪ್ರಯಾಣವನ್ನು ನಮ್ಮ ಮೆಟ್ರೋ ಒದಗಿಸುತ್ತಿದೆ. ಇದು ಅತಿದೊಡ್ಡ ಸಂಪರ್ಕ ಜಾಲವಾಗಿ ಬೆಳದು ನಿಂತಿದೆ. ಮೆಟ್ರೋ ಕಳೆದ ವರ್ಷ 2022ರ ನವೆಂಬರ್​ನಲ್ಲಿ WhatsApp ಆಧಾರಿತ QR ಕೋಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಸುಲಭವಾಗಿ ಟಿಕೆಟ್ ಖರೀದಿ ವ್ಯವಸ್ಥೆಯನ್ನು ಆರಂಭಿಸಿತ್ತು. ಏಪ್ರಿಲ್​ ತಿಂಗಳ ಅಂತ್ಯದ ವೇಳೆಗೆ QR ಕೋಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು 3 ಲಕ್ಷ ಜನ ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ದಿ ಹಿಂದೂ ವರದಿ ಮಾಡಿದೆ.

ಫೆಬ್ರವರಿಯಲ್ಲಿ 2,45,219, ಕಳೆದ ತಿಂಗಳು ಮಾರ್ಚ್‌ನಲ್ಲಿ 2,96,765 ಪ್ರಯಾಣಿಕರು QR ಕೋಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಬಳಸಿದ್ದರು. ಇನ್ನು ಈ ತಿಂಗಳು ಏಪ್ರಿಲ್ 1 ರಿಂದ 15ರ ವರೆಗೆ, 1,76,061 ಪ್ರಯಾಣಿಕರು WhatsApp QR ಕೋಡ್ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಈ ಅಂಕಿ-ಸಂಖ್ಯೆಗಳನ್ನು ನೋಡಿದರೇ ಇದೇ ತಿಂಗಳು 3 ಲಕ್ಷ ಪ್ರಯಾಣಿಕರು ಈ ವ್ಯವಸ್ಥೆಯನ್ನು ಬಳಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​​: ಕ್ಯೂಆರ್ ಕೋಡ್ ಆಧಾರಿತ ಟಿಕೆಟ್​ ವ್ಯವಸ್ಥೆ

ದೈನಂದಿನ ಪ್ರಯಾಣಿಕರಿಗೆ ಹೋಲಿಸಿದರೇ ಈ ಅಂಕಿ ಸಂಖ್ಯೆ ಕಡಿಮೆ. ಹೌದು ಪ್ರತಿದಿನ ನಮ್ಮ ಮೆಟ್ರೋದಲ್ಲಿ 5 ಲಕ್ಷ ಜನರು ಸಂಚರಿಸುತ್ತಾರೆ. ಫೆಬ್ರವರಿಯಲ್ಲಿ ಒಂದು ದಿನಕ್ಕೆ ಕ್ಯೂಆರ್ ಕೋಡ್ ಟಿಕೆಟ್ ಖರೀದಿಸುವವರ ಸಂಖ್ಯೆ 83,813 ಆಗಿತ್ತು. ಸದ್ಯ ಪ್ರತಿದಿನ 10 ಸಾವಿರ ಪ್ರಯಾಣಿಕರು ಕ್ಯೂಆರ್ ಕೋಡ್​ ಟಿಕೆಟಿಂಗ್​ ವ್ಯವಸ್ಥೆಯನ್ನು ಉಯೋಗಿಸುತ್ತಿದ್ದಾರೆ.

5.9 ಲಕ್ಷ ದೈನಂದಿನ ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿದರೇ, ಮೆಟ್ರೋ ತಿಂಗಳಿಗೆ ಸುಮಾರು 1.5 ಕೋಟಿ ಜನರು ಸಂಚರಿಸುತ್ತಾರೆ. ಅಂದರೆ ಪ್ರಸ್ತುತ ವಾಟ್ಸಾಪ್ ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಶೇ 60 ರಷ್ಟು ಜನರು ಮಾತ್ರ ಬಳಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:09 am, Tue, 25 April 23

ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
7 ಸಿಕ್ಸ್​ಗಳೊಂದಿಗೆ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದ ಪೊಲಾರ್ಡ್
7 ಸಿಕ್ಸ್​ಗಳೊಂದಿಗೆ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದ ಪೊಲಾರ್ಡ್
ಸೆಮಿಕಂಡಕ್ಟರ್ ಕ್ಷೇತ್ರದ ಸಿಇಒಗಳಿಂದ ಮೋದಿಗೆ ಪ್ರಶಂಸೆ
ಸೆಮಿಕಂಡಕ್ಟರ್ ಕ್ಷೇತ್ರದ ಸಿಇಒಗಳಿಂದ ಮೋದಿಗೆ ಪ್ರಶಂಸೆ
ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಶೋ ರೂಮ್​ಗೆ ಬೆಂಕಿ
ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಶೋ ರೂಮ್​ಗೆ ಬೆಂಕಿ