ಈ ವರ್ಷ ಎಂಜಿ ರೋಡ್​ನಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಅನುಮಾನ: ಕಾರಣ ಏನು ಗೊತ್ತಾ?

ನ್ಯೂ ಇಯರ್ ಸೆಲೆಬ್ರೇಷನ್ ಎಂದರೆ ಅದು ಸಿಲಿಕಾನ್ ಸಿಟಿ ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್​ನದ್ದು ಎನ್ನುವ ರೀತಿಯಲ್ಲಿ ಆಚರಣೆ ಇರುತ್ತದೆ. ಆದರೆ ಆರ್​​ಸಿಬಿ ವಿಜಯೋತ್ಸವ ಕಾಲ್ತುಳಿತ ಘಟನೆಯ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ ಈ ಬಾರಿ ಹೊಸ ವರ್ಷಾಚರಣೆಗೆ ಅನುಮತಿ ನೀಡುವುದು ಅನುಮಾನ ಎನ್ನಲಾಗಿದೆ.

ಈ ವರ್ಷ ಎಂಜಿ ರೋಡ್​ನಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಅನುಮಾನ: ಕಾರಣ ಏನು ಗೊತ್ತಾ?
ಎಂಜಿ ರೋಡ್​
Updated By: Ganapathi Sharma

Updated on: Dec 11, 2025 | 6:42 AM

ಬೆಂಗಳೂರು, ಡಿಸೆಂಬರ್ 11: ಬೆಂಗಳೂರು (Bengaluru) ನಗರದಲ್ಲಿ ಹೊಸ ವರ್ಷವನ್ನು (New Year) ಭರ್ಜರಿಯಾಗಿ ಸ್ವಾಗತಿಸಲು ಯುವಕ, ಯುವತಿಯರು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಡಿಸೆಂಬರ್ 31 ರ ರಾತ್ರಿ ನ್ಯೂಇಯರ್ ಕಿಕ್ಕೇರಿಸದಂತೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಪೊಲೀಸ್ ಹಾಗೂ ಜಿಬಿಎ ಅಧಿಕಾರಿಗಳು ಈಗಾಗಲೇ ಸರಣಿ ಸಭೆ ಮಾಡಿದ್ದಾರೆ. ಈ ವೇಳೆ ಎಂಜಿ ರೋಡ್​ನಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಹೊಸ ವರ್ಷಾಚರಣೆಗೆ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದ್ದು, ಚಿನ್ನಸ್ವಾಮಿ ಕಾಲ್ತುಳಿತದ ನಂತರ ಸರ್ಕಾರದಿಂದಲೂ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಸಾವಿರಾರು ಜನ ಸೇರುವ ಕಾರ್ಯಕ್ರಮಗಳಿಗೆ ಅನ್ವಯ ಆಗುವಂತೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಬ್ರಿಗೇಡ್ ರೋಡ್ ವ್ಯಾಪಾರಿಗಳ ಅಸೋಸಿಯೇಶನ್ ಸೆಕ್ರೆಟರಿ, ನಾವು ಇಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದಿಲ್ಲ ಕೇವಲ ಲೈಟಿಂಗ್ಸ್ ವ್ಯವಸ್ಥೆ ಮಾತ್ರ ಮಾಡುತ್ತೇವೆ ಎಂದಿದ್ದಾರೆ.

ಕಾರ್ಯಕ್ರಮಗಳಲ್ಲಿ ಏನಾದರೂ ಅನಾಹುತ ಸಂಭವಿಸಿದೆ ಆಯೋಜಕರೇ ಹೊಣೆ ಎಂಬ ನಿಯ ಇದ್ದು, ಹೊಸ ವರ್ಷಾಚರಣೆ ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಯಾರನ್ನು ಹೊಣೆ ಮಾಡುವುದು ಎಂಬ ಪ್ರಶ್ನೆ ಉದ್ಭವಿಸಿದೆ. ಸರ್ಕಾರ ಪೊಲೀಸರ ಮೇಲೆಯೇ ಕ್ರಮ ತೆಗೆದುಕೊಂಡರೇ ಎಂಬ ಆತಂಕ ಪೊಲೀಸರದ್ದಾಗಿದೆ.

ದೆಹಲಿ ಸ್ಫೋಟದ ನಂತರ ಹೈ ಅಲರ್ಟ್ ಆಗಿರುವ ಪೊಲೀಸರು

ಭದ್ರತಾ ದೃಷ್ಟಿಯಿಂದಲೂ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ದೆಹಲಿ ಸ್ಫೋಟದ ನಂತರ ದೇಶಾದ್ಯಂತ ಕಟ್ಟೆಚ್ಚರವಹಿಸಲಾಗಿದೆ. ಹೀಗಾಗಿ ಅಧಿಕಾರಿಗಳು ಹೊಸ ವರ್ಷಾಚರಣೆಯ ಸಾಧಕ ಬಾಧಕಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಸರ್ಕಾರದ ತೀರ್ಮಾನದ ನಂತರವೇ ಎಂಜಿ ರೋಡ್ ಸೆಲೆಬ್ರೇಶನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಬೆಂಗಳೂರಿಗರು, ಅನುಮತಿ ನೀಡಿದರೆ ತುಂಬಾ ಚೆನ್ನಾಗಿರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಈ ವರ್ಷ ಭಾರೀ ಗಮನ ಸೆಳೆದ ಭಾರತದ ಪ್ರಮುಖ ದೇವಾಲಯಗಳಿವು

ಒಟ್ಟಿನಲ್ಲಿ, ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾತಗ ಮಾಡೋಣ ಅಂದುಕೊಂಡಿದ್ದ ಯುವಕ, ಯುವತಿಯರಿಗೆ ಅನುಮತಿ ಸಿಗೋದು ಅನುಮಾನ ಎಂಬ ಸುದ್ದಿ ನೋವುಂಟು ಮಾಡಿರುವುದಂತೂ ಸುಳ್ಳಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ