ಬೆಂಗಳೂರು, ಸೆ.09: ನನ್ನ ಅಮ್ಮ (Amma) ನನಗೆ ಎಷ್ಟೆಲ್ಲಾ ಮಾಡ್ತಾಳೆ. ಬೆಳಗ್ಗೆ ಸ್ಕೂಲ್ಗೆ ರೆಡಿ ಮಾಡಲು ಅವಳ ಕೆಲಸ ಕಾರ್ಯ ಅಷ್ಟಿಷ್ಟಲ್ಲ. ಕೋಳಿ ಕೂಗುವ ಮುನ್ನ ಎದ್ದು ತಿಂಡಿ ಮಾಡಿ, ಬುತ್ತಿ ಕಟ್ಟಿ, ನಮ್ಮನ್ನು ಎಬ್ಬಸಿ ರೆಡಿ ಮಾಡಿ ಕಳಿಸ್ತಾಳೆ. ಆದ್ರೆ ಅವಳಿಗೆ ಎಂದೂ ದಣಿವಾಗಲ್ವಾ? ರಾತ್ರಿ ನಿದ್ದೆ (Sleep) ಆದ್ರೂ ಸರಿ ಮಾಡ್ತಾಳಾ ಎಂಬ ಆಲೋಚನೆಗೆ ಇಳಿದ ಈ ಬಾಲಕನನ್ನು ಬಡಿದೆಬ್ಬಿಸಿದ್ದು ವಾಹನಗಳ ಕರ್ಕಶ ದನಿ. ಕರ್ಕಶ ದನಿಗೆ ಕೊನೆ ಇಲ್ವಾ ಎಂಬ ಆಲೋಚನೆಗೆ ಹುಟ್ಟಿಕೊಂಡಿದ್ದೇ ಈ ಅಭಿಯಾನ. ತನ್ನ ತಾಯಿಗಾಗಿ, ತನ್ನವರಿಗಾಗಿ ಈ ಬಾಲಕ ವಾಹನಗಳ ಕರ್ಕಶ ದನಿ ವಿರುದ್ಧ ಧ್ವನಿಯಾಗಿದ್ದಾನೆ.
ಕುಂಜಿತ್ ಲೋಹಿಯ ಎಂಬ ಕೇವಲ 10 ವರ್ಷ ವಯಸ್ಸಿನ 6ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ತನ್ನ ತಾಯಿಗಾಗಿ, ತಾಯಂದಿರಿಗಾಗಿ ಈ ವಿಶಿಷ್ಟ ಅಭಿಯಾನ ಕೈಗೊಂಡಿದ್ದಾನೆ. ಕೇಂದ್ರಿಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕುಂಜಿತ್ ಲೋಹಿಯ ಕಳೆದ ಒಂದೂವರೆ ವರ್ಷಗಳಿಂದ ಡೋಂಟ್ ಹಾಂಕ್ ಅಭಿಯಾನ ಕೈಗೊಂಡಿದ್ದಾನೆ.
ಇದನ್ನೂ ಓದಿ: ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ
ಅಬ್ಬಿಗೆರೆ ನಿವಾಸಿ ಜುಗಲ್ ಲೋಹಿಯ, ಸಾಕ್ಷಿ ಅವರ ಸುಪುತ್ರನಾಗಿರುವ ಕುಂಜಿತ್ ಪ್ರತಿ ದಿನ ಶಾಲೆಗೆ ಹೋಗುವಾಗ, ಸಂಜೆ ಶಾಲೆ ಮುಗಿಸಿ ಬರುವಾಗ ಒಂದೊಂದು ಗಂಟೆ ಅಭಿಯಾನ ಕೈಗೊಳ್ತಾನೆ. ದಯವಿಟ್ಟು ಹಾರ್ನ್ ಮಾಡಬೇಡಿ ಎಂಬ ಬಾಲಕನ ವಿಶಿಷ್ಠ ಅಭಿಯಾನಕ್ಕೆ ಪುಟ್ಟ ತಂಗಿ ಕೃಶ ಕೂಡ ಸಾಥ್ ನೀಡಿದ್ದಾಳೆ. ತನಗಾಗಿ, ಭವಿಷ್ಯದ ಪೀಳಿಗೆಗಾಗಿ ಬಾಲಕ ಕೈಗೊಂಡಿರುವ ಈ ಸ್ಪೆಷಲ್ ಕ್ಯಾಂಪೈನ್ಗೆ ತಾಯಿ, ತಂದೆ ಖುಷಿ ಪಟ್ಟಿದ್ದಾರೆ.
ತಾಯಿ ನೆಮ್ಮದಿಯಿಂದ ನಿದ್ದೆ ಮಾಡಬೇಕು. ಮನೆಯ ನಿಶಬ್ಧ ವಾತಾವರಣದಲ್ಲಿದ್ದು ಹೊರಗೆ ಓದಲು ಬರುವ ನಮಗೆ ಪೀಸ್ಫುಲ್ ಪರಿಸರ ಬೇಕು. ನಿಮ್ಮ ಕರ್ಕಶ ವಾಹನಗಳ ಸದ್ದು ಭವಿಷ್ಯದ ಪೀಳಿಗೆಗೆ ಮಾರಕವಾಗ್ತಿದೆ. ಪ್ಲೀಸ್ ಡೋಂಟ್ ಹಾಂಕ್ ಎಂಬ ಕುಂಜಿತ್ ಅಭಿಯಾನ ಸಿಟಿ ವಾಹನ ಸವಾರರನ್ನು ಎಚ್ಚರಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ