ಬೆಂಗಳೂರಿನಲ್ಲಿ ಹಾಡಹಗಲೇ ಹೋಟೆಲ್ ಕ್ಯಾಶಿಯರ್​ ಕೊಲೆ: ಹೌಸ್​ಕೀಪರ್​​ ಬಂಧನ​​

| Updated By: ಗಂಗಾಧರ​ ಬ. ಸಾಬೋಜಿ

Updated on: Jul 20, 2023 | 3:05 PM

ಬೆಂಗಳೂರಿನ ಪ್ರತಿಷ್ಠಿತ ಸಿಟಡೆಲ್​​ ಹೋಟೆಲ್ ಕ್ಯಾಶಿಯರ್​​ ಹತ್ಯೆ ಮಾಡಿರುವಂತಹ ಘಟನೆ ಜೀವನ್ ಭೀಮಾ ನಗರದ ಮುರುಗೇಶ್ ಪಾಳ್ಯದ ಹೋಟೆಲ್​ನಲ್ಲಿ ನಡೆದಿದೆ. ಕುಡಿದ ನಶೆಯಲ್ಲಿ ಹೌಸ್ ಕೀಪರ್​ಯಿಂದ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.​​

ಬೆಂಗಳೂರಿನಲ್ಲಿ ಹಾಡಹಗಲೇ ಹೋಟೆಲ್ ಕ್ಯಾಶಿಯರ್​ ಕೊಲೆ: ಹೌಸ್​ಕೀಪರ್​​ ಬಂಧನ​​
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಜುಲೈ 20: ಹಾಡಹಗಲೇ ಪ್ರತಿಷ್ಠಿತ ಹೋಟೆಲ್​​ ಕ್ಯಾಶಿಯರ್ (cashier)​​ ನನ್ನು ಕೊಲೆ ಮಾಡಿ ಪರಾರಿ ಆಗಿರುವಂತಹ ಘಟನೆ ಜೀವನ್ ಭೀಮಾ ನಗರದ ಮುರುಗೇಶ್ ಪಾಳ್ಯದ ಹೋಟೆಲ್​ನಲ್ಲಿ ನಡೆದಿದೆ. ಸಿಟಡೆಲ್​ ಹೋಟೆಲ್​ನ ಸುಭಾಷ್​ ಮೃತ ಕ್ಯಾಶಿಯರ್​​.​​ ಅದೇ ಹೋಟೆಲ್​ನಲ್ಲಿ ಹೌಸ್ ಕೀಪರ್ ಆಗಿರುವ​​ ಅಭಿಷೇಕ್​ ಎಂಬಾತ ಹತ್ಯೆ ಮಾಡಿದ್ದು, ಸದ್ಯ ಆರೋಪಿಯನ್ನು​ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹೋಟೆಲ್ ಸೋಫಾ ಮೇಲೆ ಸುಭಾಷ್ ಮಲಗಿದ್ದ ವೇಳೆ ದೊಣ್ಣೆಯಿಂದ ಹೊಡೆದು ಹೌಸ್ ಕೀಪರ್ ಅಭಿಷೇಕ್​ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಕುಡಿದ ನಶೆಯಲ್ಲಿ ಕೊಂದಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಮಗನ ಬರ್ತಡೇ ಸಂಭ್ರಮದಲ್ಲಿದ್ದ ತಂದೆಯ ಎದೆಗೆ ಚೂರಿ ಇರಿದ ಹಂತಕರು, ಉದ್ಯಮಿ ಕೊಲೆ ಪ್ರಕರಣಕ್ಕೆ ಬಿಗ್ ಟಿಸ್ಟ್

ಶೀಲಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪತಿ

ಹಾಸನ: ಶೀಲಶಂಕಿಸಿ ಪತ್ನಿಯನ್ನು ಪತಿ ಬರ್ಬರವಾಗಿ ಕೊಲೆ ಮಾಡಿರುವಂತಹ ಘಟನೆ ಹೊಳೆನರಸೀಪುರ ತಾಲೂಕಿನ ಎಸ್.ಅಂಕನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಪತ್ನಿ ಅಂಬಿಕಾ(28)ಳನ್ನು ಕೊಲೆ ಮಾಡಿದ ಪತಿ ಚಂದ್ರಮೌಳಿ. ಹೊಳೆನರಸೀಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ​ಬೆಂಗಳೂರಿನ ಪ್ರತಿಷ್ಠಿತ ಮಠದ ಅರ್ಚಕನ ಜತೆ ಪರಿಚಯ; 1 ಕೋಟಿ ರೂ. ಅಧಿಕ ಹಣ ಪಡೆದು ವಂಚನೆ, ಆರೋಪಿ ಅರೆಸ್ಟ್

ಬಳ್ಳಾರಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

ಬಳ್ಳಾರಿ: ನಗರ ಹೊರವಲಯದ ಗುಗ್ಗರಹಟ್ಟಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಮೆಹಬೂಬ್ ಬಾಷಾ(40) ಮೃತ ವ್ಯಕ್ತಿ. ರಿಯಲ್​ ಎಸ್ಟೇಟ್​ ವ್ಯವಹಾರದ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬಳ್ಳಾರಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:34 pm, Thu, 20 July 23