Bengaluru News: ಇನ್‌ಸ್ಟಾಗ್ರಾಂ ರೀಲ್‌ಗಾಗಿ ಕಾರ್ ಚೇಸ್ ಮಾಡಿ ಮಿರರ್ ಒಡೆದ ಬೈಕ್ ಸವಾರ ಅರೆಸ್ಟ್
‘ಮಿಸ್ಟರ್ ಕ್ರೇಜಿ’ ಎಂಬ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ಯುವಕ ಬೈಕ್ನಲ್ಲಿ ಚೇಜಿಂಗ್ ಮಾಡಿ ಕಾರಿನ ಸೈಡ್ ಮಿರರ್ ಅನ್ನು ಒಡೆದು ಹಾಕುತ್ತಿರುವುದನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ. ಈ ಸಂಬಂಧ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಆ.03: ಇತ್ತೀಚಿಗೆ ರೀಲ್ಸ್ಗಳ ಟ್ರೆಂಡ್ ಹೆಚ್ಚಾಗಿದೆ. 30 ಸೆಕೆಂಡ್ನ ರೀಲ್ಸ್ ಮಾಡಲು ಎಂತಹ ಅಪಾಯವನ್ನಾದರೂ ಜನ ಆಹ್ವಾನಿಸಲು ಸಿದ್ದರಿರುತ್ತಾರೆ. ಇಲ್ಲೊಬ್ಬ ಯುವಕ ರೀಲ್ಸ್(Instagram Reels) ವಿಚಾರದಲ್ಲಿ ಅರೆಸ್ಟ್ ಆಗಿದ್ದಾನೆ. ರಸ್ತೆಯಲ್ಲಿ ವಿಧ್ವಂಸಕ ವರ್ತನೆ ತೋರಿ ಇನ್‌ಸ್ಟಾಗ್ರಾಂ ರೀಲ್‌ಗಳಲ್ಲಿ ಶೇರ್ ಮಾಡಿದ್ದ ಯುವಕನನ್ನು ಬೆಂಗಳೂರು ಪೊಲೀಸರು(Bengaluru Police) ಬಂಧಿಸಿದ್ದಾರೆ. ‘ಮಿಸ್ಟರ್ ಕ್ರೇಜಿ’ ಎಂಬ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ಯುವಕ ಬೈಕ್ನಲ್ಲಿ ಚೇಸಿಂಗ್ ಮಾಡಿ ಕಾರಿನ ಸೈಡ್ ಮಿರರ್ ಅನ್ನು ಒಡೆದು ಹಾಕುತ್ತಿರುವುದನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ. ಈ ಸಂಬಂಧ ಪೊಲೀಸರು ಬಂಧಿಸಿದ್ದಾರೆ.
ಅವಿನಾಶ್ ಭಟ್ ಎಂಬ ಬಳಕೆದಾರರೊಬ್ಬರು X (ಟ್ವಿಟರ್) ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗೂ ಈ ಇನ್‌ಸ್ಟಾಗ್ರಾಂ ಖಾತೆ ಇತರರನ್ನು ಪ್ರಚೋದಿರುವಂತಿದೆ. ದಯವಿಟ್ಟು ಇವರು ಕಾರ್ ಡ್ರೈವರ್‌ಗೆ ಮಿರರ್ ಒಡೆದದಕ್ಕೆ ಹಣ ನೀಡಿದ್ದಾರ ಎಂದು ನೋಡಿ ಎಂದು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
@alokkumar6994 @BlrCityPolice @BlrCityPolice This Instagram page is supporting this kind of activitieshttps://t.co/hIoJ086oXQ KA50EG4827 should be the vehicle number (NOT SURE)
Is there any action to be taken on this? I consider this HIT AND RUN & making u turn in ONE WAY pic.twitter.com/I6PapuKfWo
— My Name Is Bhat (@avinashnbhat) July 24, 2023
ಇನ್ನು ವಿಡಿಯೋದಲ್ಲಿ ಬೈಕ್ ಸವಾರ ಕಾರನ್ನು ಹಿಂಬಾಲಿಸಿಕೊಂಡು ಬಂದು ಬೈಕ್ ಚಾಲಾಯಿಸುತ್ತಲೇ ಕೈಯಿಂದ ಕಾರಿನ ಸೈಡ್ ಮಿರರ್ ಅನ್ನು ಒಡೆದು ಹಾಕಿದ್ದಾನೆ. ಕನ್ನಡಿ ಧ್ವಂಸವಾಗಿದ್ದು, ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಬೈಕ್ ಸವಾರನನ್ನು ಪತ್ತೆ ಮಾಡಿ ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಬೊಮ್ಮಸಂದ್ರ ಟು ಹೊಸೂರು ಮೆಟ್ರೋ ಅಧ್ಯಯನಕ್ಕೆ ಚೆನ್ನೈ ಮೆಟ್ರೋ ನಿಗಮದಿಂದ ಟೆಂಡರ್ ಆಹ್ವಾನ
ಬೆಂಗಳೂರು (ಉತ್ತರ) ಉಪ ಪೊಲೀಸ್ ಕಮಿಷನರ್ ಸಚಿನ್ ಘೋರ್ಪಡೆ ಅವರು ಈ ಬಗ್ಗೆ X(ಟ್ವಿಟರ್)ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ರಮ ಸ್ಟೆಂಟ್ಗಳಿಂದಾಗಿ ಮಿಸ್ಟರ್ ಕ್ರೇಜಿ ಅವರು ಈಗ ನಮ್ಮ ಅತಿಥಿಯಾಗಿದ್ದಾರೆ. ಟ್ರಾಫಿಕ್ ಉಲ್ಲಂಘನೆಗಾಗಿ ನಾವು ಅವರ ವಾಹನವನ್ನು ಸೀಜ್ ಮಾಡಿದ್ದೇವೆ. ಮತ್ತು ಹಿಂಸಾತ್ಮಕ ನಡವಳಿಕೆಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ದಯಮಾಡಿ ಇಂತಹ ಕ್ರಿಮಿನಲ್ ಕೃತ್ಯಗಳನ್ನು ಮಾಡುವುದನ್ನು ತಡೆಯಿರಿ ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ಬೈಕ್ ಸ್ಟಂಟ್ ಮಾಡುವುದು ಸಾಮಾನ್ಯವಾಗಿ ಕಂಡು ಬರುತ್ತಿರುತ್ತದೆ. ಇದರಿಂದ ರಸ್ತೆಯಲ್ಲಿ ಪ್ರಯಾಣಿಸುವ ಇತರ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತದೆ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಯುವಕರು ಅಪಾಯಕಾರಿ ಸಾಹಸ ಪ್ರದರ್ಶಿಸಿದ ವಿಡಿಯೊಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗುವ ಉದ್ದೇಶದಿಂದ ಯಾರಾದರೂ ರಸ್ತೆಯಲ್ಲಿ ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:40 pm, Thu, 3 August 23