ಬೆಂಗಳೂರು: ನಗರದ ಅತ್ಯಂತ ಹಳೆಯ, ಬ್ರಿಟಿಷರ ಕಾಲದ ರೈಲು ನಿಲ್ದಾಣಗಳಲ್ಲಿ ಒಂದಾದ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ಸಿಗಲಿದೆ. ಸೌತ್ ವೆಸ್ಟರ್ನ್ ರೈಲ್ವೇ (SWR) ನೆಟ್‌ವರ್ಕ್‌ನಲ್ಲಿರುವ ಅತ್ಯಂತ ಹಳೆಯ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು ಎರಡು ಹಂತದಲ್ಲಿ ಬದಲಾವಣೆಗೆ ಮಾಡಲಾಗುತ್ತೆ. ಹೆಚ್ಚಿದ ಸಾರಿಗೆ ಅಗತ್ಯಗಳನ್ನು ಪೂರೈಸುವ ಸಲುವಾಗಿ ಗಣನೀಯ ಬದಲಾವಣೆ ಮಾಡಲಾಗುತ್ತಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ಈ ಯೋಜನೆಯನ್ನು ಇಪಿಸಿ (ಎಂಜಿನಿಯರಿಂಗ್-ಪ್ರೊಕ್ಯೂರ್‌ಮೆಂಟ್-ಕನ್‌ಸ್ಟ್ರಕ್ಷನ್) ಮೋಡ್‌ನಲ್ಲಿ ಅಂದರೆ ‘ಟರ್ನ್‌ಕೀ’ ಆಧಾರದ ಮೇಲೆ ಕಾರ್ಯಗತಗೊಳಿಸಲಾಗುತ್ತಿದೆ. ಹೀಗಾಗಿ, ಈ ಯೋಜನೆಯ ಎಲ್ಲಾ ಅಂಶಗಳ ಪ್ಲಾನಿಂಗ್, ಸಂಗ್ರಹಣೆ ಮತ್ತು ಕಾರ್ಯಗತಗೊಳಿಸಲು ಒಂದೇ ಏಜೆನ್ಸಿಗೆ ನೀಡಲಾಗಿದೆ. ಈ ಪ್ರೋಜೆಕ್ಟ್ 36 ತಿಂಗಳುಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Indian Railways: ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ಸದ್ಯಕ್ಕಿಲ್ಲ ರಿಯಾಯಿತಿ ದರದ ಟಿಕೆಟ್; ಕೇಂದ್ರ
ಮೊದಲ ಹಂತದಲ್ಲಿ, ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಯಾರ್ಡ್ ಅನ್ನು ₹ 45 ಕೋಟಿ ರೂ ವೆಚ್ಚದಲ್ಲಿ ಮರು ವಿನ್ಯಾಸಗೊಳಿಸಲಾಗುತ್ತಿದೆ. ಈ ಮೂಲಕ ನಾಲ್ಕು ಹೆಚ್ಚುವರಿ ಫ್ಲಾಟ್ ಫಾರ್ಮ್ ಹಾಗೂ ಎರಡು ಹೆಚ್ಚುವರಿ ಹಳಿಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ರೈಲುಗಳು ಈ ನಿಲ್ದಾಣದ ಮೂಲಕ ಚಲಿಸಲಿವೆ. ರೈಲುಗಳ ಸಂಖ್ಯೆ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿನ ಒತ್ತಡವನ್ನು ಕಡಿಮೆ ಮಾಡಿ. ಈ ಯಾರ್ಡ್ ಬೆಂಗಳೂರು ಉಪನಗರ ರೈಲು ಜಾಲದ ಜೊತೆ ಸಂಯೋಜಿಸಲ್ಪಡಲಿದೆ. ತಡೆರಹಿತ ಸಮೂಹ ಸಾರಿಗೆಯ ಅನುಕೂಲಕ್ಕಾಗಿ ಯಾರ್ಡ್ ಅನ್ನು ಉಪನಗರ ರೈಲ್ವೆ ಜಾಲದೊಂದಿಗೆ ಸಂಯೋಜಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬೋರ್ ಬ್ಯಾಂಕ್ ರಸ್ತೆ ಹಾಗೂ ನೇತಾಜಿ ರಸ್ತೆ ಮಧ್ಯೆ ಪಾದಚಾರಿ ಮೇಲ್ಸೇತುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಮರುವಿನ್ಯಾಸ ಕಾಮಗಾರಿ 2023ರ ಫೆಬ್ರವರಿ ಒಳಗೆ ಪೂರ್ಣಗೊಳ್ಳಲಿದೆ.
ಎರಡನೇ ಹಂತದಲ್ಲಿ ಈ ನಿಲ್ದಾಣವನ್ನು ಹೈಟೆಕ್ ವಿಮಾನ ನಿಲ್ದಾಣ ವಿನ್ಯಾಸ ಮಾದರಿಯಲ್ಲಿ 480 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಹೊಸ ನಿಲ್ದಾಣದಲ್ಲಿ ಸಂಪೂರ್ಣ ಹವಾನಿಯಂತ್ರಿತ 216 ಮೀ. ಅಗಲದ ಸಭಾಂಗಣ, ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು, ಜಿ+5 ಬಹುಮಹಡಿ ಪಾರ್ಕಿಂಗ್, ವಾಣಿಜ್ಯ ಚಟುವಟಿಕೆಗಳಿಗೆ ಸ್ಥಳಾವಕಾಶದೊಂದಿಗೆ ಪ್ಲಾಟ್ ಫಾರ್ಮ್ ಮೇಲೆ ರೂಫ್ ಪ್ಲಾಜಾ ನಿರ್ಮಾಣ ಮಾಡಲಾಗುವುದು. ಮಳೆ ನೀರು ಕೊಯ್ಲು ವ್ಯವಸ್ಥೆಯೊಂದಿಗೆ ಹಸಿರು ಕಟ್ಟಡ, ಎಲ್ಇಡಿ ಲೈಟಿಂಗ್ ವ್ಯವಸ್ಥೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಮಾಡಲಾಗುವುದು. ವೈ-ಫೈ ವ್ಯವಸ್ಥೆ, ದಿವ್ಯಾಂಗ ಸ್ನೇಹಿ ನಿಲ್ದಾಣ, ರ‍್ಯಾಂಪ್, ಲಿಫ್ಟ್ಸ್, ಸಬ್ ವೇ ಗಳ ನಿರ್ಮಾಣ, ಸ್ಥಳೀಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಜೊತೆ ಬಹು ಮಾದರಿ ಸಂಯೋಜನೆ ಇರಲಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:54 am, Sat, 17 December 22