ಮಕ್ಕಳಲ್ಲಿ ಹೆಚ್ಚಿದ ಸಾಮಾಜಿಕ ಜಾಲತಾಣದ ಗೀಳು: ಪೋಷಕರಿಗೆ ಖಾಸಗಿ ಶಾಲೆಗಳ‌ ಒಕ್ಕೂಟ ಎಚ್ಚರಿಕೆ ಪತ್ರ

|

Updated on: May 28, 2024 | 12:20 PM

ಇತ್ತೀಚಿಗೆ ಶಾಲಾ ಮಕ್ಕಳೇ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್​ ಆಗಿ ಇರುವುದು ಆತಂಕಕ್ಕೆ ಕಾರಣವಾಗಿದೆ. ಅತಿಯಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ಅವರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಬಗ್ಗೆ ಜಾಗರೂಕರಾಗಿ ಇರಿ ಎಂದು ಖಾಸಗಿ ಶಾಲೆಗಳ‌ ಒಕ್ಕೂಟ ಪೋಷಕರಿಗೆ ಪತ್ರ ಬರೆದಿದೆ.

ಮಕ್ಕಳಲ್ಲಿ ಹೆಚ್ಚಿದ ಸಾಮಾಜಿಕ ಜಾಲತಾಣದ ಗೀಳು: ಪೋಷಕರಿಗೆ ಖಾಸಗಿ ಶಾಲೆಗಳ‌ ಒಕ್ಕೂಟ ಎಚ್ಚರಿಕೆ ಪತ್ರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮೇ 28: ಇತ್ತೀಚಿಗೆ ಶಾಲಾ ಮಕ್ಕಳೇ (School Children) ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ (Social Media) ಆ್ಯಕ್ಟಿವ್​ ಆಗಿ ಇದ್ದಾರೆ. ಇದರಿಂದ ಅಪಾಯಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ‌ ಒಕ್ಕೂಟದಿಂದ (Private Schools Union) ಪೋಷಕರಿಗೆ ಎಚ್ಚರಿಕೆ ಸಂದೇಶವೊಂದು ರವಾನೆ ಮಾಡಿದೆ. ಮಕ್ಕಳು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳುತ್ತಿದ್ದು, ಇದರಿಂದ ಅಪಾಯ ಬಂದೊದಗಬಹುದಾದ ಸಾಧ್ಯೆತೆ ಇದೆ. ಹೀಗಾಗಿ ಮಕ್ಕಳ ಬಗ್ಗೆ ಎಚ್ಚರ ವಹಿಸಿ ಎಂದು ಪತ್ರ ಬರೆದಿದೆ.

“ಮಕ್ಕಳಿಗೆ ಸಾಮಾಜಿಕ ಜಾತಾಣದ ಗೀಳು ಅತಿಯಾಗುತ್ತಿದೆ. ವಿದ್ಯಾರ್ಥಿಗಳಿಂದ ತಂತ್ರಜ್ಞಾನದ ದುರ್ಬಳಕೆಯಾಗುತ್ತಿದೆ. ಮಕ್ಕಳ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾಗಿದೆ. ಗುಪ್ತವಾಗಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ, ಬೇರೆ ಬೇರೆ ಹೆಸರುಗಳನ್ನಿಟ್ಟು ಪೋಷಕರಿಗೆ ಗೊತ್ತಿಲ್ಲದೆ ಆಕ್ಟೀವ್ ಆಗಿದ್ದಾರೆ. ಮಕ್ಕಳು ಇತರೆ ಸಹಪಾಠಿಯೊಂದಿಗೆ ಗುಪ್ತ ಸಂಪರ್ಕ, ಪ್ರೀತಿ ಪ್ರೇಮಗಳು, ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ”.

“ಸಾಮಾಜಿಕ ಜಾಲತಾಣದಲ್ಲಿ ಬೈದಾಡುವುದು, ದ್ವೇಷ ಸಾಧಿಸುವುದು, ಅವಮಾನಿಸುವ ಪ್ರಸಂಗ ಹೆಚ್ಚಾಗಿದೆ, ಅಪ್ರಾಪ್ತ ವಿದ್ಯಾರ್ಥಿಗಳು ಈ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದಾರೆ. ಆನ್‌ಲೈನ್ ವ್ಯಾಪಾರಗಳು, ಆನ್‌ಲೈನ್ ಆಟಗಳು, ಆನ್‌ಲೈನ್ ಜೂಜಾಟ, ಮುಂತಾದವುಗಳಲ್ಲಿ 5-6ನೇ ತರಗತಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ತಂದೆ ತಾಯಿಗೆ ಗೊತ್ತಿಲ್ಲದೆ ತಮ್ಮ ಮೊಬೈಲ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಮಕ್ಕಳ ಬಗ್ಗೆ ಜಾಗರೂಕರಾಗಿರಿ” ಎಂದು ಖಾಸಗಿ ಶಾಲಾ ಒಕ್ಕೂಟ ಪತ್ರ ಬರೆದಿದೆ.

ಇದನ್ನೂ ಓದಿ: ಯುವ ಜನತೆಯಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿರುವುದಕ್ಕೆ ಸಾಮಾಜಿಕ ಮಾಧ್ಯಮ ಕಾರಣವೇ?

ಶಾಲಾ ವಿದ್ಯಾರ್ಥಿಗಳ ಇನ್ಸ್ಟಾಗ್ರಾಮ್​ ಗ್ರೂಪ್​ನಲ್ಲಿ ಡೀಪ್​ಫೇಕ್​ ಪೋಟೋ

ಸೋಮವಾರ ಬೆಂಗಳೂರಿನಲ್ಲಿ ಬೆಳಿಕಿಗೆ ಬಂದ ಪ್ರಕರಣ ಪೋಷಕರು ಮತ್ತು ವಿದ್ಯಾರ್ಥಿನಿಯರನ್ನು ಆತಂಕಗೊಳಿಸಿದೆ. ಹೌದು 50ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಒಂದು ಇನ್ಸ್ಟಾಗ್ರಾಮ್ ಗ್ರೂಪ್​ ಮಾಡಿಕೊಂಡಿದ್ದಾರೆ. ಈ ಗ್ರೂಪ್​​ನಲ್ಲಿ ಶಾಲಾ ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಡಿಪ್​ ಫೇಕ್​ ಮುಖಾಂತರ ಅಶ್ಲೀಲವಾಗಿ ಎಡಿಟ್​ ಮಾಡಿ ಹರಿಬಿಡುಲಾಗುತ್ತದೆ.

ವಿದ್ಯಾರ್ಥಿನಿಯ ಫೋಟೋ ಎಡಿಟ್​ ಮಾಡಿ ಬ್ಲ್ಯಾಕ್​ ಮೇಲ್

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಪ್ರಕರಣದಲ್ಲಿ ಯುವಕನೋರ್ವ ಶಾಲಾ ವಿದ್ಯಾರ್ಥಿನಿಯ ಭಾವಚಿತ್ರಗಳನ್ನು ಆಕೆಯ ಸಾಮಾಜಿಕ ಜಾಲತಾಣದ ಅಕೌಂಟ್​ನಿಂದ ತೆಗೆದುಕೊಂಡು ಅಶ್ಲೀಲವಾಗಿ ಎಡಿಟ್​ ಮಾಡಿ, ​ಆಕೆಗೆ ಬ್ಲ್ಯಾಕ್​ ಮಾಡಿದ್ದನು. ಅಲ್ಲದೆ ಆಕೆಯ ತಾಯಿಯ ಭಾವಚಿತ್ರವನ್ನೂ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದನು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:29 am, Tue, 28 May 24