ಬೆಂಗಳೂರು ಪೊಲೀಸ್​: ಖಾಲಿ ಇವೆ ಸಾವಿರಾರು ಹುದ್ದೆ, ಸರ್ಕಾರದಿಂದ ನೇಮಕಾತಿಗೆ ವಿಳಂಬ ನೀತಿ

ಒಂದೆಡೆ ಬೆಂಗಳೂರಿನಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ಬೆಳಕಿಗೆ ಬಂದಿದೆ. ನಗರದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಇದು ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ.

ಬೆಂಗಳೂರು ಪೊಲೀಸ್​: ಖಾಲಿ ಇವೆ ಸಾವಿರಾರು ಹುದ್ದೆ, ಸರ್ಕಾರದಿಂದ ನೇಮಕಾತಿಗೆ ವಿಳಂಬ ನೀತಿ
ಬೆಂಗಳೂರು ಪೊಲೀಸ್
Follow us
Ganapathi Sharma
|

Updated on: May 28, 2024 | 10:34 AM

ಬೆಂಗಳೂರು, ಮೇ 28: ಒಂದೆಡೆ ಬೆಂಗಳೂರಿನಲ್ಲಿ (Bengaluru) ಅಪರಾಧ ಕೃತ್ಯಗಳ ಹೆಚ್ಚಳ, ಜನ ಸಂಖ್ಯೆ ಹೆಚ್ಚಳದಂಥ ಸಮಸ್ಯೆಗಳಿದ್ದರೆ ಮತ್ತೊಂದೆಡೆ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ (Police) ಇಲ್ಲದಿರುವುದು ಕೂಡ ತಿಳಿದುಬಂದಿದೆ. ನಗರದ ಜನಸಂಖ್ಯೆ ಮತ್ತು ಪೊಲೀಸ್ ಸಿಬ್ಬಂದಿಯ ಅನುಪಾತದಲ್ಲಿ ಭಾರಿ ಅಂತರ ಇದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ 1,825 ಪೊಲೀಸ್ (Bengaluru Police) ಕಾನ್ಸ್‌ಟೇಬಲ್‌ಗಳು (ಪಿಸಿಗಳು) ಮತ್ತು 347 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳು (ಪಿಎಸ್‌ಐಗಳು) ಸೇರಿದಂತೆ 3,814 ಹುದ್ದೆಗಳು ಖಾಲಿ ಇವೆ. ಈ ಕೊರತೆಯು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ವಿವಿಧ ಸವಾಲುಗಳಿಗೆ ಕಾರಣವಾಗಿದೆ.

ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (BPR&D) ಪ್ರಕಾರ, ಪ್ರತಿ 1 ಲಕ್ಷ ಜನಸಂಖ್ಯೆಗೆ 170 ಸಿವಿಲ್ ಪೋಲೀಸರ ಅಗತ್ಯವಿದೆ. ಬೆಂಗಳೂರಿನ ಪ್ರಸ್ತುತ 1.4 ದಶಲಕ್ಷ ಜನಸಂಖ್ಯೆಗೆ ಈಗ ಮಂಜೂರಾದ ಪೊಲೀಸ್ ಬಲವೂ ಸಾಕಾಗುವುದಿಲ್ಲ. ಸದ್ಯ ನಗರಕ್ಕೆ 21,720 ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ಆದರೆ ರಾಜ್ಯದ ರಾಜಧಾನಿಯಲ್ಲಿ ಈಗ 15,475 ಪೊಲೀಸರು ಮತ್ತು ಅಧಿಕಾರಿಗಳಷ್ಟೇ ಇದ್ದಾರೆ. ಇದರಲ್ಲಿ ಡಿಸಿಪಿಗಳು, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಮತ್ತು ವಿಶೇಷ ಪಡೆಗಳ ಎಸಿಪಿಗಳು ಸೇರಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್​​​ಪ್ರೆಸ್’ ವರದಿ ಮಾಡಿದೆ. ಇದು ಈಗಿರುವ ಸಿಬ್ಬಂದಿ ಸಾಮರ್ಥ್ಯ ಮತ್ತು ಅಗತ್ಯವುಳ್ಳ ಸಿಬ್ಬಂದಿಯ ನಡುವಿನ ಗಣನೀಯ ಅಂತರವನ್ನು ಬಹಿರಂಗಪಡಿಸಿದೆ.

ತಂತ್ರಜ್ಞಾನವನ್ನು ಉನ್ನತೀಕರಿಸಿದಾಗ ಕೆಲಸವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ದಕ್ಷತೆಯು ಸುಧಾರಿಸುತ್ತದೆ ಎಂಬುದು ನಿಜ. ಆದರೆ ಸಿಬ್ಬಂದಿ ಸಂಖ್ಯೆ ಕೂಡ ಅಷ್ಟೇ ಅವಶ್ಯಕ. ಉದಾಹರಣೆಗೆ, ಹೊಯ್ಸಳ ಮತ್ತು ಚೀತಾಗಳಂತಹ ಗಸ್ತು ವಾಹನಗಳು ಹೆಚ್ಚುತ್ತಿರುವಾಗ, ಅವುಗಳನ್ನು ನಿರ್ವಹಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯ ಅವಶ್ಯಕತೆಯಿದೆ ಎಂದು ನಿವೃತ್ತ ಡಿಜಿ ಮತ್ತು ಐಜಿಪಿ ರಮೇಶ್ ಎಸ್‌ಟಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಸಿವಿಲ್ ಕಾನ್‌ಸ್ಟೆಬಲ್‌ಗಳು, ಸಶಸ್ತ್ರ ಮೀಸಲು ಮುಂತಾದ ಪೊಲೀಸ್ ಪಡೆಗಳಲ್ಲಿ ಹಲವಾರು ಸಿಬ್ಬಂದಿಗಳಿರುವುದರಿಂದ ನೇಮಕಾತಿ ನಿರಂತರವಾಗಿರಬೇಕು. ಹುದ್ದೆಗಳು ಖಾಲಿ ಇರುವುದನ್ನು ಭರ್ತಿ ಮಾಡದಿದ್ದರೆ ನಿವೃತ್ತಿ, ಮರಣ, ಬಡ್ತಿ ಇತ್ಯಾದಿಗಳಿಂದಾಗಿ ಕೆಲವು ಹುದ್ದೆಗಳು ಖಾಲಿಯಾದಾಗ ಮತ್ತಷ್ಟು ಸಮಸ್ಯೆಯಾಗುತ್ತವೆ ಎಂದು ಅವರು ಹೇಳಿದ್ದಾರೆ.

ಪೊಲೀಸ್ ನೇಮಕಾತಿ: ಸರ್ಕಾರದಿಂದ ವಿಳಂಬ ನೀತಿ

ಅಪರಾಧ, ಜನಸಂಖ್ಯೆ, ಕೈಗಾರಿಕಾ ಮತ್ತು ವಿದ್ಯಾರ್ಥಿಗಳ ಚಟುವಟಿಕೆಗಳು ಮತ್ತು ವಾಹನ ದಟ್ಟಣೆ ಪ್ರತಿದಿನ ಹೆಚ್ಚುತ್ತಿರುವ ಕಾರಣ ಮಂಜೂರಾದ ಪೊಲೀಸ್ ಬಲವನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ಸರ್ಕಾರಕ್ಕೆ ಅನೇಕ ಪ್ರಸ್ತಾವನೆಗಳನ್ನು ಕಳುಹಿಸಿರಬೇಕು. ಎಲ್ಲ ಕ್ಷೇತ್ರಗಳಲ್ಲಿ ನಗರದ ಬೆಳವಣಿಗೆಗೂ ಪೊಲೀಸ್ ಇಲಾಖೆಯ ಬೆಳವಣಿಗೆಗೂ ತಾಳೆಯಾಗುತ್ತಿಲ್ಲ. ಬಜೆಟ್ ನಿರ್ಬಂಧಗಳಿಂದಾಗಿ ಪೊಲೀಸ್ ಬಲವನ್ನು ಹೆಚ್ಚಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ವಾರದಲ್ಲಿ ಎರಡೆರೆಡು ಕೊಲೆ: ಬೆಂಗಳೂರಿನ ನಟೋರಿಯಸ್ ಕೊಲೆಗಾರನ ಹಿನ್ನೆಲೆ ಭಯಾನಕ

ನ್ಯಾಯಾಲಯದ ಕೆಲಸ, ಅಪರಾಧ ಪತ್ತೆ, ರಾತ್ರಿ ಬೀಟ್ ಮುಂತಾದ ಎಲ್ಲಾ ಪ್ರಮುಖ ಮತ್ತು ಸಣ್ಣ ಕೆಲಸಗಳನ್ನು ನಿಭಾಯಿಸುವುದರಿಂದ ಪೊಲೀಸ್ ಇಲಾಖೆಯು ಸರ್ಕಾರದ ಗ್ರೌಂಡ್ ಫೋರ್ಸ್ ಆಗಿದೆ. ಪಿಎಸ್​​ಐಗಳು ಕೆಲಸದ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಸುಧಾರಿಸುತ್ತಾರೆ, ಪರಿಹರಿಸುತ್ತಾರೆ. ಹೀಗಾಗಿ ಸಂಖ್ಯೆ ಹೆಚ್ಚಳ ಅನಿವಾರ್ಯ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು