ಬೆಂಗಳೂರು: ಪಿಜಿಯಲ್ಲಿ ಕಾನೂನು ವಿದ್ಯಾರ್ಥಿ ನೇಣಿಗೆ ಶರಣು

| Updated By: ಆಯೇಷಾ ಬಾನು

Updated on: Aug 07, 2023 | 2:19 PM

ಆರ್ಯಕುಮಾರ್ ನಡ್ಡಾ ಎಂಬ 23 ವರ್ಷದ ಲಾ ಓದುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಿಮಾಚಲ ಪ್ರದೇಶ ಮೂಲದ ಆರ್ಯಕುಮಾರ್ ಓದಿನ ಸಲುವಾಗಿ ನಗರಕ್ಕೆ ಬಂದು ಪಿಜಿಯಲ್ಲಿ ನೆಲೆಸಿದ್ದ.

ಬೆಂಗಳೂರು: ಪಿಜಿಯಲ್ಲಿ ಕಾನೂನು ವಿದ್ಯಾರ್ಥಿ ನೇಣಿಗೆ ಶರಣು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆ.07: ನಗರದ ಖಾಸಗಿ ಕಾಲೇಜಿನಲ್ಲಿ ಕಾನೂನು ಓದುತ್ತಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಆರ್ಯಕುಮಾರ್ ಕೊಠಡಿಯಲ್ಲಿ ಯಾರು ಇಲ್ಲದಿದ್ದಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ನೇಹಿತರು ಪಿಜಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆಗಮಿಸಿದ್ದು ಯುಡಿಆರ್ ದಾಖಲಿಸಿದ್ದಾರೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಡಿ.ಗ್ರೂಪ್ ಲೇಔಟ್ ಸಮೀಪದ ಶ್ರೀಗಂಧ ಕಾವಲು ಬಡಾವಣೆಯಲ್ಲಿ ಪಿಜಿಯಲ್ಲಿ ನೆಲೆಸಿದ್ದ ಆರ್ಯಕುಮಾರ್ ನಡ್ಡಾ ಎಂಬ 23 ವರ್ಷದ ಲಾ ಓದುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಿಮಾಚಲ ಪ್ರದೇಶ ಮೂಲದ ಆರ್ಯಕುಮಾರ್ ಓದಿನ ಸಲುವಾಗಿ ನಗರಕ್ಕೆ ಬಂದು ಪಿಜಿಯಲ್ಲಿ ನೆಲೆಸಿದ್ದ. ಸಮೀಪದ ಖಾಸಗಿ ಕಾನೂನು ಕಾಲೇಜಿನಲ್ಲಿ 3ನೇ ವರ್ಷದ ಕಾನೂನು ಪದವಿಯಲ್ಲಿ ಓದುತ್ತಿದ್ದ. ಇನ್ನು ಆರ್ಯಕುಮಾರ್​ ಕಳೆದ 10 ವರ್ಷದಿಂದ ತೀವ್ರ ಮೈಗ್ರೇನ್‌ನಿಂದ ಬಳಲುತ್ತಿದ್ದ. ಮೈಗ್ರೇನ್ ನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅನ್ನಪೂರ್ಣೇಶ್ವರಿ ನಗರ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಇದನ್ನೂ ಓದಿ: ಶಿವಮೊಗ್ಗ ನಗರದಲ್ಲಿ ಕರಾಟೆ ಕಲರವ, ಗಮನ ಸೆಳೆದ ಕರಾಟೆ ಫೈಟ್- 4ನೇ ಅಂತರಾಷ್ಟ್ರೀಯ ಶಿವಮೊಗ್ಗ ಓಪನ್ ಕರಾಟೆ

ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ನೆಲೆಸಿರುವ ಮೃತನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ನಗರಕ್ಕೆ ಬಂದ ಮೇಲೆ ಮರಣೋತ್ತರ ಪರೀಕ್ಷೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು. ತನಿಖೆ ವೇಳೆ ಸಾವಿಗೆ ಬೇರೆ ಯಾವುದೇ ಕಾರಣ ಪತ್ತೆಯಾಗದ ಕಾರಣ, ಪೊಲೀಸರು ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ನಿಮಗೆ ಬೆಂಬಲ ಬೇಕಾದರೆ ಅಥವಾ ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿರುವ ಯಾರಾದರೂ ತಿಳಿದಿದ್ದರೆ, ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಅಥವಾ ಭಾವನಾತ್ಮಕ ಬೆಂಬಲವನ್ನು ನೀಡುವ ಆತ್ಮಹತ್ಯೆ ತಡೆಗಟ್ಟುವ ಸಂಸ್ಥೆಗಳ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಪರಿವರ್ತನ್ ಕೌನ್ಸೆಲಿಂಗ್ ಸಹಾಯವಾಣಿ ಸೇವೆಗಳು +91 7676 602 602; ಸಹಾಯ ವಾಣಿ ಸಂಖ್ಯೆ, +91 080 25497777, 9886444075, +91 9880396331, ಆರೋಗ್ಯ ಸಹಾಯವಾಣಿ -104.)

ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:34 pm, Mon, 7 August 23