ಬೆಂಗಳೂರಿನಲ್ಲಿ ಮನೆ ಬಾಡಿಗೆ ಕೇಳಿದ್ದಕ್ಕೆ ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ, ಪೊಲೀಸರ ನಿರ್ಲಕ್ಷ್ಯ ಆರೋಪ
ಬಾಡಿಗೆ ಕೇಳಿದ ಶ್ರೀದೇವಿ ಎಂಬುವವರ ಮೇಲೆ ಸದ್ದಾಂ ಎಂಬಾತ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಕಳೆದ ತಿಂಗಳು ನಡೆದಿರುವ ಘಟನೆ, ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು, ಆ.10: ನಗರದ ಮುನೇಶ್ವರನಗರದಲ್ಲಿ ಮನೆ ಬಾಡಿಗೆ(House Rent) ಕೇಳಿದ್ದಕ್ಕೆ ಮಹಿಳೆಯನ್ನು ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನಡೆದಿದೆ(Assault). ಬಾಡಿಗೆ ಕೇಳಿದ ಶ್ರೀದೇವಿ ಎಂಬುವವರ ಮೇಲೆ ಸದ್ದಾಂ ಎಂಬಾತ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಕಳೆದ ತಿಂಗಳು ನಡೆದಿರುವ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಶ್ರೀದೇವಿ ಅವರು ಘಟನೆ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ(Bandepalya Police Station) ದೂರು ದಾಖಲಿಸಿದ್ದು ಕೊಲೆಯತ್ನದ ಸೆಕ್ಷನ್ ದಾಖಲಿಸದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗುತ್ತಿದೆ.
ಫಯಾಜ್ ಎಂಬುವವರ ಕಟ್ಟಡದಲ್ಲೇ ಶ್ರೀದೇವಿ ಬಾಡಿಗೆಗೆ ಇದ್ದರು. ಫಯಾಜ್ ಕುಟುಂಬ ವಿದೇಶದಲ್ಲಿರೋದರಿಂದ ಶ್ರೀದೇವಿಗೆ ಉಸ್ತುವಾರಿ ನೀಡಿದ್ದರು. ಹಾಗಾಗಿ ಇಡೀ ಕಟ್ಟಡದ ಜವಾಬ್ದಾರಿಯನ್ನು ಶ್ರೀದೇವಿ ನೋಡಿಕೊಂಡಿದ್ದರು. ಬಾಡಿಗೆ ಹಣ ಪಡೆದು ವಿದೇಶದಲ್ಲಿದ್ದ ಫಯಾಜ್ಗೆ ನೀಡುತ್ತಿದ್ದರು. ಅದರಂತೆ ಶ್ರೀದೇವಿ ವಾಸವಾಗಿದ್ದ ಬಿಲ್ಡಿಂಗ್ನಲ್ಲೇ ವಾಸವಾಗಿದ್ದ ನಜೀರ್ ಕುಟುಂಬ ಕಳೆದ 3 ತಿಂಗಳಿಂದ ಬಾಡಿಗೆ ನೀಡಿರಲಿಲ್ಲ. ಈ ಹಿನ್ನೆಲೆ ಜೋರು ಧ್ವನಿಯಲ್ಲಿ ಮನೆ ಬಾಡಿಗೆ ನೀಡುವಂತೆ ಕೇಳಿದ್ದರು. ಇದೇ ವಿಚಾರವನ್ನು ನಜೀರ್ ತನ್ನ ಮಗ ಸದ್ದಾಂ ಬಳಿ ಹೇಳಿದ್ದ.
ಆಕ್ರೋಶದಿಂದ ಶ್ರೀದೇವಿ ಮನೆ ಬಳಿ ಹೋಗಿ ಸದ್ದಾಂ ಕಿರಿಕ್ ಮಾಡಿದ್ದಾನೆ. ಈ ವೇಳೆ ಚಾಕುವಿನಿಂದ ಮುಖ, ಕೈ ಕೊಯ್ದು ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಶ್ರೀದೇವಿ ಅವರು ಬಂಡೇಪಾಳ್ಯ ಠಾಣೆಗೆ ದೂರು ನೀಡಿದ್ದಾರೆ. ಕೊಲೆಯತ್ನದ ಸೆಕ್ಷನ್ ದಾಖಲಿಸದೇ ಬಂಡೇಪಾಳ್ಯ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ. ಮುನೇಶ್ವರನಗರದಲ್ಲಿ ಕಳೆದ ತಿಂಗಳು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕಾಸು ಇದ್ದೋನೆ ಬಾಸ್, ಟಿವಿ9 ವರದಿ ಬೆನ್ನಲ್ಲೇ ಇಬ್ಬರು ಸಿಬ್ಬಂದಿ ಸಸ್ಪೆಂಡ್
ಬೆಂಗಳೂರಿನಲ್ಲಿ ವಿದೇಶಿ ಪ್ರಜೆ ಸೇರಿ 7 ಡ್ರಗ್ ಪೆಡ್ಲರ್ಗಳ ಬಂಧನ
ಶೇಷಾದ್ರಿಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ವಿದೇಶಿ ಪ್ರಜೆ ಸೇರಿ 7 ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ಸಾಹಿಲ್, ನಾಸಿರ್, ಆದಂ ಖಾನ್, ಸಮೀರ್, ನೈಜೀರಿಯಾ ಮೂಲದ ಹ್ಯಾಪಿನೆಸ್ ಎಂಬ ಮಹಿಳೆ ಸೇರಿ 7 ಜನರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತ ಆರೋಪಿಗಳಿಂದ 300 ಗ್ರಾಂ ಎಂಡಿಎಂಎ ಮಾತ್ರೆ ಜಪ್ತಿ ಮಾಡಲಾಗಿದೆ. ದೆಹಲಿಯಿಂದ ಡ್ರಗ್ಸ್ ಆಮದು ಮಾಡಿಕೊಳ್ಳುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು ಸಪ್ಲೈ ಮಾಡುತ್ತಿರುವವರನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಶೇಷಾದ್ರಿಪುರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ