ಬೆಂಗಳೂರು, ಜ.25: ಒಂದು ವರ್ಷದ ಮಗು ತನ್ನ ತಂದೆಯನ್ನ ಗುರುತಿಸೋದೇ ಕಷ್ಟ. ಅಂತದ್ರಲ್ಲಿ ಒಂದೂವರೆ ವರ್ಷದ ಮಗು ಎಲ್ಲರ ಹೆಸರನ್ನ ಹೇಳುತ್ತೆ ಅಂದ್ರೆ ನೀವು ನಂಬಲೇ ಬೇಕು. ಹುರಿದಂತೆ ಮತಾನಾಡುತ್ತಿರುವ ಪುಟ್ಟ ಪೋರಿ, ತನ್ನ ತಾಯಿ ತೋರಿಸಿದ ಫೋಟೋಗಳನ್ನ ಕ್ಷಣಮಾತ್ರದಲ್ಲಿ ಗುರುತಿಸುತ್ತಾಳೆ. ಬಂದೂವರೆ ವರ್ಷದ ಸಾನ್ವಿ ಎಂಬ ಪುಟ್ಟ ಪೋರಿ 20 ಬಗೆಯ ಆ್ಯಕ್ಟಿವಿಟಿಸ್ ಗಳನ್ನ ಕಲಿತಿದ್ದು, ಬುಕ್ ಆಫ್ ದ ರೇಕಾರ್ಡ್ ನಲ್ಲಿ ತನ್ನ ಹೆಸರು ಬರುವಂತೆ ಮಾಡಲು ಪ್ರತಿದಿನ ಪ್ರಯತ್ನಿಸುತ್ತಿದ್ದಾಳೆ.
ಸಾಮಾನ್ಯವಾಗಿ ಎರಡು ವರ್ಷದವರೆಗೆ ಮಕ್ಕಳು ತಮ್ಮ ತಂದೆ-ತಾಯಿಯನ್ನ ಗುರುತಿಸುವುದೇ ಕಷ್ಟ. ಅಂತದ್ರಲ್ಲಿ ಈ ಮಗು ಇಂಗ್ಲಿಷ್ ಭಾಷೆಯಲ್ಲಿ ತಿಂಗಳುಗಳು, ವಾರಗಳ ಹೆಸರು, ಒಂದರಿಂದ ಹತ್ತು ಅಂಕಿ, ಬಣ್ಣಗಳನ್ನು ಗುರುತಿಸುತ್ತಾಳೆ, ಸಾಕು ಪ್ರಾಣಿ, ಹಣ್ಣುಗಳನ್ನು ಗುರುತಿಸಿ ಹೆಸರುಗಳನ್ನು ಹೇಳುತ್ತಾಳೆ. ವಾಹನಗಳನ್ನು ಗುರುತಿಸುತ್ತಾಳೆ. ಗಣ್ಯ ವ್ಯಕ್ತಿ, ಗ್ರಹಗಳು, ವಿರುದ್ಧ ಪದಗಳು, ವಿಶ್ವದ 7 ಅದ್ಭುತಗಳನ್ನು ಗುರುತಿಸಿ ಹೇಳುತ್ತಾಳೆ. ಸಾನ್ವಿಯ ಈ ಟ್ಯಾಲೆಂಟ್ಗೆ ಪೋಷಕರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:ಥಟ್ ಅಂತ ನಿಮ್ಮ ಅಡುಗೆಮನೆಯನ್ನು ಕ್ಲೀನ್ ಮಾಡೋದು ಹೇಗೆ?
ಇನ್ನು, ಸಾನ್ವಿ ಮೂರು ತಿಂಗಳು ಇದ್ದಗಿನಿಂದಲೇ ಅವಳಿಗೆ ನಾವು ಪ್ಲೇ ಕಾರ್ಡ್ಸ್ ಗಳನ್ನ ತೋರಿಸುತ್ತಿದ್ವಿ. ನೋಡಿ ರಿಯಾಕ್ಟ್ ಮಾಡ್ತಿದ್ಲೂ. ಇದೀಗಾ ಎಲ್ಲಾ ಹೆಸರುಗಳನ್ನ ತೊದಲು ನುಡಿಯಲ್ಲಿಯೇ ಹೇಳ್ತಾಳೆ. ಒಟ್ಟು 20ಕ್ಕೂ ಹೆಚ್ಚು ಬಗೆ ಬಗೆಯ ವಸ್ತುಗಳನ್ನ ಗುರಿತಿಸುತ್ತಾಳೆ ಅಂತ ಸಾನ್ವಿ ತಾಯಿ ಅನುಷ ತಿಳಿಸಿದರು.
ಒಟ್ನಲ್ಲಿ, ಒಂದೂವರೆ ವರ್ಷದ ಮಕ್ಕಳು ಮಾತಾನಾಡುವುದೇ ಕಷ್ಟ. ಅಂತದ್ರಲ್ಲಿ ಒಂದೂವರೆ ವರ್ಷದ ಸಾನ್ವಿ ಚಿನಕುರುಳಿಯಂತೆ ಮಾತಾನಾಡುವುದಲ್ಲದೇ ನೋಡುಗರನ್ನ ತನ್ನತ್ತ ಸೆಳೆಯುತ್ತಿರುವುದು ಮಾತ್ರ ಸುಳ್ಳಲ್ಲ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ