AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಟ್ ಅಂತ ನಿಮ್ಮ ಅಡುಗೆಮನೆಯನ್ನು ಕ್ಲೀನ್ ಮಾಡೋದು ಹೇಗೆ?

ಅಡುಗೆಮನೆ ಯಾವುದೇ ಒಂದು ಮನೆಯ ಕೇಂದ್ರ ಸ್ಥಾನ. ಈ ಅಡುಗೆಮನೆಗೆ ಆ ಮನೆಯ ಯಜಮಾನಿಯೇ ಸರ್ವಾಧಿಕಾರಿ. ಬಹುತೇಕ ಮಹಿಳೆಯರು ತಮ್ಮ ದಿನದ ಅರ್ಧ ಭಾಗವನ್ನು ಅಡುಗೆಮನೆಯಲ್ಲೇ ಕಳೆಯುತ್ತಾರೆ. ಈ ಅಡುಗೆಮನೆಯನ್ನು ಬೇಗ ಕ್ಲೀನ್ ಮಾಡುವುದು ಹೇಗೆಂಬುದರ ಬಗ್ಗೆ ಟಿಪ್ಸ್​ ಇಲ್ಲಿವೆ.

ಥಟ್ ಅಂತ ನಿಮ್ಮ ಅಡುಗೆಮನೆಯನ್ನು ಕ್ಲೀನ್ ಮಾಡೋದು ಹೇಗೆ?
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Jan 25, 2024 | 3:50 PM

Share

ಅಡುಗೆ ಮಾಡುವುದಕ್ಕಿಂತಲೂ ಅಡುಗೆ ಮನೆಯನ್ನು ಕ್ಲೀನ್ ಮಾಡುವುದು ಬಹುತೇಕ ಜನರಿಗೆ ತಲೆನೋವಿನ ಸಂಗತಿ. ನಮ್ಮ ದಿನನಿತ್ಯದ ಜೀವನದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರ ಅಥವಾ ಸುಸ್ತಾಗಿದ್ದಾಗ ಅಡುಗೆಮನೆ ಸ್ವಚ್ಛಗೊಳಿಸಿ, ಮತ್ತೆ ಅಡುಗೆ ಮಾಡುವುದು ಬೇಸರದ ಕೆಲಸ. ಹೆಚ್ಚು ಸಮಯ ವ್ಯರ್ಥ ಮಾಡದರೆ ನಿಮ್ಮ ಅಡುಗೆ ಮನೆಯನ್ನು ಸುಲಭವಾಗಿ ಕ್ಲೀನ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

– ತರಕಾರಿ ಹೆಚ್ಚಿದ ಮರದ ತುಂಡಿನ ಮೇಲೆ ಅಥವಾ ಬೋರ್ಡ್ ಮೇಲೆ ಕಲೆಗಳು ಅಂಟಿವೆಯೇ? ಅದಕ್ಕೆ ಆ ಕಲೆಯ ಮೇಲೆ ಉಪ್ಪನ್ನು ಸಿಂಪಡಿಸಿ, ನಿಂಬೆಹಣ್ಣಿನಿಂದ ಉಜ್ಜಿದರೆ ಕ್ಲೀನ್ ಆಗುತ್ತದೆ.

– ಪ್ಲಾಸ್ಟಿಕ್ ಕಟಿಂಗ್ ಬೋರ್ಡ್‌ಗಳಿಗೆ ಅಡಿಗೆ ಸೋಡಾ ಮತ್ತು ವಿನೆಗರ್ ಮಿಶ್ರಣವನ್ನು ಹಚ್ಚಿ, ಅದನ್ನು ನಿಂಬೆ ರಸದಲ್ಲಿ ಉಜ್ಜಿರಿ.

ಇದನ್ನೂ ಓದಿ: ಕೆಮ್ಮಿ ಕೆಮ್ಮಿ ಸುಸ್ತಾಯ್ತ?; ಅಡುಗೆ ಮನೆಯಲ್ಲೇ ಇದೆ ಪರಿಹಾರ

– ಮಡಿಕೆಗಳು ಮತ್ತು ಹರಿವಾಣಗಳ ಮೇಲೆ ಕಠಿಣವಾದ ಕಲೆಗಳು ಇವೆಯೇ? ನಿಂಬೆ, ಅಡಿಗೆ ಸೋಡಾ ಮತ್ತು ವಿನೆಗರ್ ಸೇರಿಸಿ ಅದನ್ನು ಕುದಿಸಿ ಆ ಮಿಶ್ರಣವನ್ನು ಹಚ್ಚಿರಿ.

– ಜೇನುತುಪ್ಪ ಅಥವಾ ಸಿರಪ್‌ನಂತಹ ಜಿಗುಟಾದ ಪದಾರ್ಥಗಳು ಅಡುಗೆಮನೆಯಲ್ಲಿ ಅಂಟಿದರೆ ಕ್ಲೀನ್ ಮಾಡುವುದು ಕಷ್ಟ. ಆ ಜಿಗುಟುತನವನ್ನು ತಪ್ಪಿಸಲು ಆ ವಸ್ತುಗಳನ್ನು ಬಳಸುವ ಮೊದಲು ನಿಮ್ಮ ಅಳತೆ ಪಾತ್ರೆಗಳ ಮೇಲೆ ಅಡುಗೆ ಎಣ್ಣೆಯನ್ನು ಹಚ್ಚಿರಿ.

– ಅಡುಗೆಮನೆಯಲ್ಲಿ ಸಿಂಕ್ ಬ್ಲಾಕ್ ಆಗುವುದು ಮಾಮೂಲಿ. ಆಗ ಅಡಿಗೆ ಸೋಡಾವನ್ನು ಸಿಂಪಡಿಸಿ, ಅದಕ್ಕೆ ವಿನೆಗರ್ ಸೇರಿಸಿ. ಅದನ್ನು 5 ನಿಮಿಷಗಳ ಕಾಲ ಹಾಗೆಯೇ ಬಿಟ್ಟರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಬಳಿಕ ಬಿಸಿನೀರನ್ನು ಸುರಿಯಿರಿ.

ಇದನ್ನೂ ಓದಿ: ತೆಂಗಿನಕಾಯಿ ಅಡುಗೆಯ ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ಬಹಳ ಮುಖ್ಯ

– ಮೈಕ್ರೋವೇವ್ ಅನ್ನು ಬೇಗ ಕ್ಲೀನ್ ಮಾಡಲು ಒಂದು ಬಟ್ಟಲಿನಲ್ಲಿ ವಿನೆಗರ್ ತೆಗೆದುಕೊಂಡು, ಅದಕ್ಕೆ ಅರ್ಧ ನಿಂಬೆ ಸೇರಿಸಿ. ಒಂದು ನಿಮಿಷ ಮೈಕ್ರೊವೇವ್​ನಲ್ಲಿ ಇಡಿ. ನಂತರ ಅದನ್ನು ಸ್ವಚ್ಛಗೊಳಿಸಿ.

ಇವು ನಿಮ್ಮ ಸಮಯವನ್ನು ಉಳಿಸಲು ಮಾತ್ರವಲ್ಲದೆ ಹಣವನ್ನು ಸಹ ಉಳಿಸಲು ಸಹಾಯ ಮಾಡುವ ತಂತ್ರಗಳಾಗಿವೆ. ನಿಮ್ಮ ಅಡುಗೆಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸಲು ಇವು ಪರಿಣಾಮಕಾರಿಯಾಗಿವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ