ಮಾರ್ಚ್​ ಅಂತ್ಯದ ವೇಳೆ ಬೆಂಗಳೂರಿನ ಕೆಎಸ್​ಆರ್​, ಎಸ್​ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ರೈಲು ಕೋಚ್​ ರೆಸ್ಟೋರೆಂಟ್ ಆರಂಭ

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಮಾರ್ಚ್​ ಅಂತ್ಯದ ವೇಳೆಗೆ ರೈಲು ಕೋಚ್ ರೆಸ್ಟೋರೆಂಟ್‌ಗಳು ಶುರುವಾಗಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್​ ಅಂತ್ಯದ ವೇಳೆ ಬೆಂಗಳೂರಿನ ಕೆಎಸ್​ಆರ್​, ಎಸ್​ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ರೈಲು ಕೋಚ್​ ರೆಸ್ಟೋರೆಂಟ್ ಆರಂಭ
ಹುಬ್ಬಳ್ಳಿ ರೈಲು ಕೋಚ್ ರೆಸ್ಟೋರೆಂಟ್​​ ಬೋಗಿ ಬೋಗಿ
Follow us
ವಿವೇಕ ಬಿರಾದಾರ
|

Updated on: Mar 11, 2024 | 7:56 AM

ಬೆಂಗಳೂರು, ಮಾರ್ಚ್​​ 11: ಹಳೆಯ ರೈಲುಗಳನ್ನು ಗುಜರಿಗೆ ಹಾಕುವ ಮೂಲಕ ಐದರಿಂದ ಆರು ಲಕ್ಷ ರೂಪಾಯಿಯನ್ನು ರೈಲ್ವೆ ಇಲಾಖೆ ಪಡೆಯುತ್ತಿತ್ತು. ಆದರೆ ಇದರ ಬದಲು ಏನು ಮಾಡುಬಹುದು ಎಂದು ಯೋಚಿಸುತ್ತಿರುವಾಗಲೆ ರೈಲ್ವೆ ಇಲಾಖೆ ಹೊಸ ಉಪಯಾವೊಂದನ್ನು ಕಂಡುಕೊಂಡಿದೆ. ಅದು ರೈಲು ಕೋಚ್​ ರೆಸ್ಟೋರೆಂಟ್ (Rail Coach Restaurant)​​. ಹೌದು ಬೆಂಗಳೂರಿನ (Bengaluru) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಮತ್ತು ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ (SMVT) ರೈಲು ನಿಲ್ದಾಣದಲ್ಲಿ ಮಾರ್ಚ್​ ಅಂತ್ಯದ ವೇಳೆಗೆ ರೈಲು ಕೋಚ್ ರೆಸ್ಟೋರೆಂಟ್‌ಗಳು ಶುರುವಾಗಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆಯ (South Western Railway Division) ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಕೋಚ್ ರೆಸ್ಟೋರೆಂಟ್‌ ನಿರ್ಮಾಣಕ್ಕೆ 2023ರ ಜೂನ್​​ನಲ್ಲಿ​ ಟೆಂಡರ್​ ಕರೆಯಲಾಗಿತ್ತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ರೈಲು ಕೋಚ್​ ರೆಸ್ಟೋರೆಂಟ್​ನ ಗುತ್ತಿಗೆಯನ್ನು ಒಎಎಂ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ ಮತ್ತು ಬೈಯಪ್ಪನಹಳ್ಳಿ ರೈಲು ನಿಲ್ದಾಣದ ರೈಲು ಕೋಚ್​ ರೆಸ್ಟೋರೆಂಟ್​ನ ಗುತ್ತಿಗೆಯನ್ನು ಗೌರವ್ ಎಂಟರ್‌ಪ್ರೈಸಸ್ ಪಡೆದುಕೊಂಡಿದೆ. ಈ ಗುತ್ತಿಗೆ​​ ಐದು ವರ್ಷಗಳವರೆಗೆ ಇರುತ್ತದೆ.

ಈಗಾಗಲೇ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ರೈಲು ಕೋಚ್ ರೆಸ್ಟೋರೆಂಟ್ ಅನ್ನು ಸ್ಥಾಪಿಸಲಾಗಿದೆ. ರೈಲು ಕೋಚ್ ರೆಸ್ಟೋರೆಂಟ್‌ಗೆ ‘ಬೋಗಿ ಬೋಗಿ’ ಎಂದು ಹೆಸರಿಡಲಾಗಿದೆ. ಈ ರೈಲು ಕೋಚ್​ ರೆಸ್ಟೋರೆಂಟ್​ ಯಶಸ್ವಿಯಾಗಿದೆ. ಹೀಗಾಗಿ ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಆರಂಭಿಸಲಾಗುತ್ತದೆ. ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿರುವ ‘ಬೋಗಿ ಬೋಗಿ’ ರೈಲು ಕೋಚ್ ರೆಸ್ಟೋರೆಂಟ್ 24/7 ಕಾರ್ಯನಿರ್ವಹಿಸುತ್ತದೆ. ಈ ರೆಸ್ಟೋರೆಂಟ್​ ಎಸಿ ಮತ್ತು ನಾನ್-ಎಸಿ ಆಸನಗಳನ್ನು ಹೊಂದಿದೆ.

ಇದನ್ನೂ ಓದಿ: ಮಾರ್ಚ್ 12 ರಿಂದ ಕಲಬುರಗಿ – ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ

ಬೆಂಗಳೂರಿನಲ್ಲಿ ರೈಲು ಕೋಚ್ ರೆಸ್ಟೋರೆಂಟ್‌ ಪ್ರಾರಂಭಿಸಲು 2023 ಅಕ್ಟೋಬರ್​ ಗಡುವು ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಐದು ತಿಂಗಳು ತಡವಾಗಿ ಪ್ರಾರಂಭವಾಗುತ್ತಿದೆ. ರೈಲ್ ಕೋಚ್ ರೆಸ್ಟೋರೆಂಟ್‌ ರೈಲ್ವೇ ನಿಲ್ದಾಣಗಳ ಮುಖ್ಯ ದ್ವಾರದ ಬಳಿ ಸ್ಥಾಪಿಸಲಾಗುತ್ತದೆ. ನೈಋತ್ಯ ರೈಲ್ವೆ ವಿಭಾಗ ಪ್ರತಿಯೊಂದು ರೈಲು ನಿಲ್ದಾಣದಲ್ಲೂ ಇಂತಹ ರೆಸ್ಟೋರೆಂಟ್​ ತೆರೆಯಲು ಯೋಚಿಸಿದೆ.

ಸಸ್ಯಹಾರಿ ಮತ್ತು ಮಾಂಸಾಹಾರಿ ಅಡುಗೆಗಾಗಿ ಪ್ರತ್ಯೇಕ ಅಡುಗೆ ಮನೆ ಇರುತ್ತದೆ. ಮತ್ತು ಈ ರೆಸ್ಟೋರೆಂಟ್​​ನಲ್ಲಿ ಉತ್ತರ ಮತ್ತು ದಕ್ಷಿಣ ಭಾರತೀಯ ಆಹಾರ ಸಿಗುತ್ತದೆ. ರೆಸ್ಟೋರೆಂಟ್‌ ಒಳಗೆ 50 ಜನರು ಕೂರಬಹುದು ಮತ್ತು ಹೆಚ್ಚುವರಿಯಾಗಿ ಹೊರಾಂಗಣದಲ್ಲಿ ಆಸನಗಳಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದರು.

ಹುಬ್ಬಳ್ಳಿ, ಚೆನ್ನೈ, ಹೈದರಾಬಾದ್, ವಿಜಯವಾಡ, ಭೋಪಾಲ್, ಮುಂಬೈ, ನಾಗ್ಪುರ, ಲಕ್ನೋ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿನ ರೈಲು ನಿಲ್ದಾಣಗಳಲ್ಲಿ ಈಗಾಗಲೇ ಈ ರೀತಿ ರೈಲು ರೆಸ್ಟೋರೆಂಟ್‌ಗಳಿವೆ. ಬೆಂಗಳೂರಿಗರು ಕೂಡ ಈ ತಿಂಗಳ ಕೊನೆಯಲ್ಲಿ ಈ ವಿಶಿಷ್ಟ ಅನುಭವವನ್ನು ಪಡೆಯಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ