
ಬೆಂಗಳೂರು, ಮಾರ್ಚ್ 06: ಸದಾಶಿವನಗರದ ಸ್ಯಾಂಕಿ ರಸ್ತೆಯಲ್ಲಿರುವ ಅಂಗಡಿಯವನು (Shopkeeper) ತನ್ನ ಅಂಗಡಿಯು ಹೊರಗಿನವರಿಗೆ ಸರಿಯಾಗಿ ಕಾಣಿಸಲು ಅಡ್ಡಿಯಾಗಿದೆ ಎಂದು ಮರಕ್ಕೆ (Tree) ಆ್ಯಸಿಡ್ (Acid) ಸುರದಿದ್ದಾನೆ. ಈ ಮರವು ಸ್ಯಾಂಕಿ ರಸ್ತೆಯಲ್ಲಿರುವ ಅಮ್ಮನ ಪೇಸ್ಟ್ರೀಸ್ ಮತ್ತು ಅಂಗಡಿ ಗ್ಯಾಲೇರಿಯಾ ಮುಂಬಾಗದಲ್ಲಿದೆ. ಈ ಮರಕ್ಕೆ ಅಂಗಡಿಯವನು ಕಳೆದ ವಾರ ಆ್ಯಸಿಡ್ ಸುರಿದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಿಯರು ಮಂಗಳವಾರ ಮರದ ಬುಡದಲ್ಲಿನ ಆ್ಯಸಿಡ್ ಕಂಡು ನಮಗೆ ಮಾಹಿತಿ ನೀಡಿದರು. ಯಾರೋ ಆಸಿಡ್ ಸುರಿದು ಮರವನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ಮರಗಳ ಸಂರಕ್ಷಣಾಧಿಕಾರಿ ವಿಜಯ್ ನಿಶಾಂತ್ ಹೇಳಿದರು.
ಇದೇ ವರ್ಷದಲ್ಲಿ ಮೂರನೇ ಘಟನೆ
ಇದನ್ನೂ ಓದಿ: ಮಂಗಳೂರು: ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ, ಆರೋಪಿಯ ತಯಾರಿ ಹೇಗಿತ್ತು ಗೊತ್ತಾ?
ಆ್ಯಸಿಡ್ ದಾಳಿಗೆ ಒಳಗಾದ ಮರ
2024 ಆರಂಭದಿಂದ ಇಲ್ಲಿಯವರೆಗು ಇದು ಮೂರನೇ ಘಟನೆಯಾಗಿದೆ. ಜನವರಿಯಲ್ಲಿ ಕೆಆರ್ ಮಾರುಕಟ್ಟೆ ಬಳಿ ಪೊಂಗಮಿಯಾ ಮರಗಳನ್ನು ನಾಶಪಡಿಸುವ ಪ್ರಯತ್ನ ನಡೆದಿತ್ತು. ಎರಡು ತಿಂಗಳ ಅವಧಿಯಲ್ಲಿ ಇದು ಮೂರನೇ ಪ್ರಯತ್ನ ಎಂದು ವಿಜಯ್ ನಿಶಾಂತ್ ಅವರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ