ಬೆಂಗಳೂರಿನ ಸುಮನಹಳ್ಳಿ ಚಿತಾಗಾರ 10 ದಿನಗಳ ಕಾಲ ಬಂದ್​

| Updated By: ವಿವೇಕ ಬಿರಾದಾರ

Updated on: Feb 19, 2024 | 3:02 PM

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ಫೆಬ್ರವರಿ 20 ರಿಂದ ಫೆಬ್ರವರಿ 29ರ ವರೆಗೆ 10 ದಿನಗಳ ಕಾಲ ಬಂದ್​ ಇರಲಿದೆ.

ಬೆಂಗಳೂರಿನ ಸುಮನಹಳ್ಳಿ ಚಿತಾಗಾರ 10 ದಿನಗಳ ಕಾಲ ಬಂದ್​
ವಿದ್ಯುತ್​ ಚಿತಾಗಾರ
Follow us on

ಬೆಂಗಳೂರು, ಫೆಬ್ರವರಿ 19: ತುರ್ತು ನಿರ್ವಹಣೆ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ (Rajrajeshwari Nagar) ವಲಯ ವ್ಯಾಪ್ತಿಯಲ್ಲಿರುವ ಸುಮನಹಳ್ಳಿ ವಿದ್ಯುತ್​ ಚಿತಾಗಾರ (Sumanahalli Electric Chitagar) ಮಂಗಳವಾರ “ಫೆಬ್ರವರಿ 20 ರಿಂದ ಫೆಬ್ರವರಿ 29ರ ವರೆಗೆ” 10 ದಿನಗಳ ಕಾಲ ಬಂದ್​ ಇರಲಿದೆ. ಸುಮನಹಳ್ಳಿ ಚಿತಾಗಾರ ಬದಲು, ಕೆಂಗೇರಿ, ಮೇಡಿ ಅಗ್ರಹಾರ, ಪೀಣ್ಯ ಚಿತಾಗಾರ ಬಳಸಿಕೊಳ್ಳುವಂತೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿ ಮಾಡಿದೆ.

ಬಿಬಿಎಂಪಿ ಪತ್ರದಲ್ಲಿ ಏನಿದೆ?

“ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ದಿನಾಂಕ: 20/02/2024 ರಿಂದ 29/02/2024 (10 ದಿನಗಳು) ವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಈ ಚಿತಾಗಾರಕ್ಕೆ ಮೃತ ದೇಹಗಳನ್ನು ದಹನ ಕ್ರಿಯೆಗೆ ತರುವ ಸಾರ್ವಜನಿಕರು ಸಮೀಪದಲ್ಲಿರುವ ಕೆಂಗೇರಿ, ಮೇಡಿ ಅಗ್ರಹಾರ ಅಥವಾ ಪೀಣ್ಯ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ” ಎಂದು ಮನವಿ ಮಾಡಿದೆ.

ಯುವಕರ ಅಪಾಯಕಾರಿ ವೀಲ್ಹಿಂಗ್

ಬೆಂಗಳೂರಿನ ಬಾಬುಸಪಾಳ್ಯದ ಟಿನ್ ಫಾಕ್ಟರಿ ರಿಂಗ್ ರೋಡ್​ನಲ್ಲಿ ಯುವಕ ಅಪಾಯಕಾರಿಯಾಗಿ ವೀಲ್ಹಿಂಗ್ ಮಾಡಿ ಸಾರ್ವಜನಿಕರಿಗೆ ಉಪದ್ರವ ಕೊಡುತ್ತಿದ್ದಾರೆ. ಯುವಕ ದ್ವಿ ಚಕ್ರ ವಾಹನದಲ್ಲಿ ವೀಲ್ಹಿಂಗ್ ಮಾಡಿರುವುದನ್ನು ಸಾರ್ವಜನಿಕರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಸ್ಮಶಾನ, ಚಿತಾಗಾರದಲ್ಲಿ ನಿರಾಕರಿಸದಂತೆ ಸುತ್ತೋಲೆ

85 ವಾಹನಗಳ ಮೇಲೆ ಬರೋಬ್ಬರಿ 1 ಕೋಟಿ ದಂಡ

ಟ್ರಾಫಿಕ್ ನಿಯಮ ಉಲ್ಲಂಘಿಸಿ 50 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ ದಂಡವಿದ್ದ ವಾಹನಗಳ ವಿರುದ್ದ ದಕ್ಷಿಣ ಸಂಚಾರ ವಿಭಾಗ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆ ವೇಳೆ 84 ದ್ವಿಚಕ್ರ ವಾಹನಗಳು ಮತ್ತು 1 ಕಾರನ್ನು ವಶಕ್ಕೆ ಪಡೆದರು. ವಶಪಡಿಸಿಕೊಂಡ ವಾಹನಗಳ ಮೇಲೆ ಒಟ್ಟು 10,210 ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಒಟ್ಟು 85 ವಾಹನಗಳ ಮೇಲೆ ಬರೋಬ್ಬರಿ 1 ಕೋಟಿ 7 ಲಕ್ಷ ದಂಡ ಬಾಕಿ ಇದೆ. ಸದ್ಯ ಎಲ್ಲಾ ವಾಹನಗಳನ್ನು ಸೀಜ್ ಮಾಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ