ಬೆಂಗಳೂರಿನಲ್ಲಿ ಬಂಧಿತನಾದ ಪಾಕಿಸ್ತಾನ ಪ್ರಜೆ ಬಳಿ ಇದೆ ಭಾರತದ ಪಾಸ್​ಪೋರ್ಟ್​!

ಇತ್ತೀಚಿಗೆ ಎನ್​ಐಎ ಅಧಿಕಾರಿಗಳು ಜಿಗಣಿಯಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ್ದರು. ಈ ಬೆನ್ನಲ್ಲೇ ಜಿಗಣಿ ಪೊಲೀಸರು ಜಿಗಣಿಯ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ಓರ್ವ ಪಾಕಿಸ್ತಾನ ಪ್ರಜೆಯನ್ನು ಬಂಧಿಸಿದ್ದಾರೆ. ಬಂಧಿತ ಪಾಕಿಸ್ತಾನ ಪ್ರಜೆ ಮತ್ತು ಆತನ ಕುಟುಂಬದ ಬಳಿ ಭಾರತದ ಪಾಸ್​ಪೋರ್ಟ್​ ಇದೆ.

ಬೆಂಗಳೂರಿನಲ್ಲಿ ಬಂಧಿತನಾದ ಪಾಕಿಸ್ತಾನ ಪ್ರಜೆ ಬಳಿ ಇದೆ ಭಾರತದ ಪಾಸ್​ಪೋರ್ಟ್​!
ಪಾಕಿಸ್ತಾನ ಪ್ರಜೆ ರಶೀದ್ ಅಲಿ ಸಿದ್ಧಕಿ
Edited By:

Updated on: Oct 01, 2024 | 3:10 PM

ಆನೇಕಲ್, ಅಕ್ಟೋಬರ್​ 01: ಬಂಧಿತ ಪಾಕಿಸ್ತಾನ ಪ್ರಜೆಗಳನ್ನು (Pakistan citizen) ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಹಲವು ವಿಚಾರಗಳು ಅಧಿಕಾರಿಗಳಿಗೆ ಗೊತ್ತಾಗಿದೆ. ಪಾಕಿಸ್ತಾನ ಪ್ರಜೆ ರಶೀದ್ ಅಲಿ ಸಿದ್ಧಕಿ ಕುಟುಂಬ ಭಾರತಕ್ಕೆ ಅಕ್ರಮವಾಗಿ ನುಸುಳಲು, ಭಾರತೀಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್​ ಮತ್ತು ಡಿಎಲ್ ಎಲ್ಲವನ್ನು ಹೊಂದಲು ಮೆಹದಿ ಫೌಂಡೇಷನ್​ನ ಪ್ರಮುಖ ವ್ಯಕ್ತಿ ಪರ್ವೇಜ್ ಸಹಾಯ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಜಿಗಣಿ ಪೊಲೀಸರು ಪರ್ವೇಜ್​ ಮತ್ತು ಇತನ ಸಂಪರ್ಕದಲ್ಲಿದ್ದವವರಿಗಾಗಿ ಹುಡುಕಾಟ ನಡೆಸಿದ್ದಾರೆ. ಪಾಕಿಸ್ತಾನ ಪ್ರಜೆ ರಶೀದ್ ಅಲಿ ಸಿದ್ಧಕಿಗೆ ಮುಂಬೈ ಮತ್ತು ದೆಹಲಿಯಲ್ಲಿ ಹಲವರು ಪರಿಚಯಸ್ಥರಿದ್ದಾರೆ. ಹೀಗಾಗಿ, ಎರಡು ಪೊಲೀಸ್​​ ತಂಡ ಮುಂಬೈ ಮತ್ತು ದೆಹಲಿಗೆ ತೆರಳಿದೆ. ರಶೀದ್ ಕುಟುಂಬದವರ ಸಂಪರ್ಕದಲ್ಲಿರುವವರಿಗಾಗಿ ಶೋಧ ನಡೆಸುತ್ತಿವೆ.

ಇದನ್ನೂ ಓದಿ:  ರಾಮೇಶ್ವರಂ ಕೆಫೆ ಸ್ಫೋಟ ಆರೋಪಿಗಳ ವಿರುದ್ಧ ಮತ್ತೊಂದು ಚಾರ್ಜ್​ಶೀಟ್ ಸಲ್ಲಿಸಿದ ಎನ್​ಐಎ: ಆಘಾತಕಾರಿ ಮಾಹಿತಿ ಬೆಳಕಿಗೆ

ಪಾಕ್ ಪ್ರಜೆಗಳ ಬಳಿ ಇದೆ ಭಾರತದ ಪಾಸ್‌ಪೋರ್ಟ್

ರಶೀದ್ ಅಲಿ ಸಿದ್ಧಕಿ ಮತ್ತು ಈತನ ಕುಟುಂಬಸ್ಥರ ಬಳಿ ಭಾರತದ ಪಾಸ್​ಪೋರ್ಟ್​ ಪತ್ತೆಯಾಗಿದೆ. ದೆಹಲಿಯ ಪರ್ವೇಜ್ ಮೂಲಕ ಭಾರತೀಯ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಾರೆ. ಪಾಸ್‌ಪೋರ್ಟ್ ಜೊತೆ ಅಧಾರ್, ಪ್ಯಾನ್ ಮತ್ತು ಡಿಎಲ್ ಸಹ ಮಾಡಿಸಿಕೊಂಡಿದ್ದಾರೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಯನ್ನು ಪೊಲೀಸರು ಸೋಮವಾರ ಬಂಧಿಸಿದ್ದರು. ಪಾಕಿಸ್ತಾನ ಪ್ರಜೆ ಸೇರಿಂದತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪಾಕಿಸ್ತಾನ ಪ್ರಜೆ ರಷೀದ್ ಸಿದ್ದಿಕಿ ಅಲಿಯಾಸ್​ ಶಂಕರ್ ಶರ್ಮಾ (48), ಆಯುಷಾ ಅನಿಫ್ ಅಲಿಯಾಸ್​ ಆಶಾ ಶರ್ಮಾ (38), ಮೊಹಮ್ಮದ್ ಹನೀಫ್ ಅಲಿಯಾಸ್​ ರಾಮ್ ಬಾಬಾ ಶರ್ಮಾ (73), ರುಬೀನಾ ಅಲಿಯಾಸ್​ ರಾಣಿ ಶರ್ಮಾ (61) ಬಂಧಿತರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:05 pm, Tue, 1 October 24