ಬೆಂಗಳೂರಿನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ದವೇ ದಾಖಲಾಯ್ತು FIR
ಈ ಹಿಂದೆ ಇದ್ದ ಪೊಲೀಸ್ ಠಾಣೆಯಲ್ಲೇ ಇದೀಗ ಇನ್ಸ್ಪೆಕ್ಟರ್ ಓರ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಠಾಣೆಯ ಮಾಜಿ ಇನ್ಸ್ಪೆಕ್ಟರ್ ವಿರುದ್ಧ ಹಾಲಿ ಇನ್ಸ್ಪೆಕ್ಟರ್ ಎಫ್‌ಐಆರ್ ದಾಖಲಿಸಿದ್ದಾರೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟಕ್ಕೂ ಆ ಇನ್ಸ್ಪೆಕ್ಟರ್ ಮಾಡಿದ್ದೇನು ಎನ್ನುವುದನ್ನು ನೋಡಿ.
ಬೆಂಗಳೂರು, ಅಕ್ಡೋಬರ್ 01): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಓರ್ವ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧವೇ ಎಫ್‌ಐಆರ್ ದಾಖಲಾಗಿರುವ ಘಟನೆ ನಡೆದಿದೆ. ಇನ್ಸ್ ಪೆಕ್ಟರ್ ಹಿತೇಂದ್ರ ಎಂ.ಎಸ್ ವಿರುದ್ಧ ಬೆಂಗಳೂರಿನ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿಂದೆ ಜೆ.ಪಿ.ನಗರ ಠಾಣೆಯಲ್ಲಿಯೇ ಇನ್ಸ್ ಪೆಕ್ಟರ್ ಆಗಿದ್ದ ಹಿತೇಂದ್ರ, ಕೆಲ ಪ್ರಕರಣಗಲಲ್ಲಿ ವಶಪಡಿಸಿಕೊಂಡಿದ್ದ ಮಾಲನ್ನು ವಾಪಾಸ್ ನೀಡದೇ ದುರುಪಯೋಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸದ್ಯ ಜೆಪಿ ನಗರ ಪೊಲೀಸ್ ಠಾಣೆಯ ಮಾಜಿ ಇನ್ಸ್ಪೆಕ್ಟರ್ ವಿರುದ್ದ ಹಾಲಿ ಇನ್ಸ್ಪೆಕ್ಟರ್ ರಾಧಾಕೃಷ್ಣ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಹಿಂದೆ ಜೆ.ಪಿ.ನಗರ ಠಾಣೆಯಲ್ಲಿಯೇ ಇನ್ಸ್ ಪೆಕ್ಟರ್ ಆಗಿದ್ದ ಹಿತೇಂದ್ರ, ಕೆಲ ಪ್ರಕರಣಗಲಲ್ಲಿ ವಶಪಡಿಸಿಕೊಂಡಿದ್ದ ಮಾಲನ್ನು ವಾಪಾಸ್ ನೀಡಿರಲಿಲ್ಲ. ಅಲ್ಲದೇ ಹಿಂದಿನ ಇನ್ಸ್ ಪೆಕ್ಟರ್ ಹಸ್ತಾಂತರಿಸಿದ್ದ ಮಾಲು ಸಹ ಠಾಣೆಗೆ ಹಾಜರುಪಡಿಸಿರಲಿಲ್ಲ. ವಶಪಡೆದ ಮಾಲನ್ನು ಹಿಂತಿರುಗಿಸುವ ಬಗ್ಗೆ ಹಲವಾರು ಬಾರಿ ಹೇಳಲಾಗಿತ್ತು. ಅಲ್ಲದೇ ಈ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಜ್ಞಾಪನಾ ಪತ್ರ ನೀಡಿದರೂ ಉತ್ತರಿಸಿರಲಿಲ್ಲ. ಹೀಗಾಗಿ ಪ್ರಕರಣಗಳ ಮಾಲನ್ನ ಹಿಂತಿರುಗಿಸದೆ ದುರುಪಯೋಗಿಸಿಕೊಂಡಿರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸ್ವಾಮೀಜಿಗೆ ಕೋಟಿ ರೂ. ವಂಚನೆ ಕೇಸ್: ಆರೋಪಿ ಜೆಡಿಎಸ್ ಮುಖಂಡನ ಕ್ರೈಂ ಡೈರಿ ಬಿಚ್ಚಿಟ್ಟ ಐಜಿಪಿ
ಹಾಲಿ ಇನ್ಸ್ಪೆಕ್ಟರ್ ರಾಧಾಕೃಷ್ಣ ಅವರು ಅದೇ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಇನ್ಸ್ಪೆಕ್ಟರ್ ಹಿತೇಂದ್ರ ವಿರುದ್ಧ ಎಫ್‌ಐಆರ್ ದಾಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ