ಕಲಬುರಗಿ: ಯುವತಿ ಮೇಲೆ KSRP ಪೊಲೀಸ್​ನಿಂದ ಲೈಂಗಿಕ ದೌರ್ಜನ್ಯ

ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಕೆಎಸ್​ಆರ್​ಪಿ ಪೊಲೀಸ್​ ಬಾಳು ಕೊಡುತ್ತಾನೆಂದು ನಂಬಿ ಯುವತಿ ಹೈದರಾಬಾದ್​ನಿಂದ ಕಲಬುರಗಿಗೆ ಬಂದಿದ್ದಾಳೆ. ಆದರೆ, ಕೆಎಸ್​ಆರ್​ಪಿ ಪೊಲೀಸ್​ ಆಕೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಲಬುರಗಿ: ಯುವತಿ ಮೇಲೆ KSRP ಪೊಲೀಸ್​ನಿಂದ ಲೈಂಗಿಕ ದೌರ್ಜನ್ಯ
ಆರೋಪಿ ಯಲ್ಲಾಲಿಂಗ
Follow us
| Updated By: ವಿವೇಕ ಬಿರಾದಾರ

Updated on: Oct 01, 2024 | 1:01 PM

ಕಲಬುರಗಿ, ಅಕ್ಟೋಬರ್​ 01: ಮದುವೆಯಾಗುವುದಾಗಿ ನಂಬಿಸಿ ಕೆಎಸ್ಆರ್​​ಪಿ ಪೊಲೀಸ್ (KSRP Police) ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯಲ್ಲಾಲಿಂಗ ಮೇತ್ರಿ ಅತ್ಯಾಚಾರ ಎಸಗಿದ ಕೆಎಸ್ಆರ್​​ಪಿ ಪೊಲೀಸ್ ಸಿಬ್ಬಂದಿ. ಸಂತ್ರಸ್ತೆ ಯಲ್ಲಾಲಿಂಗ ಮೇತ್ರಿ ವಿರುದ್ಧ ಕಲಬುರಗಿ (Kalaburagi) ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ. ಸಂತ್ರಸ್ತೆ ಹೈದರಾಬಾದ್​ ನಿವಾಸಿಯಾಗಿದ್ದು, ಯುವತಿಗೆ ಆರೋಪಿ ಯಲ್ಲಾಲಿಂಗ ಇನ್​ಸ್ಟಾಗ್ರಾಮ್​ ಮೂಲಕ ಪರಿಚಯವಾಗಿದ್ದಾನೆ.

ಇಬ್ಬರು ಸುಮಾರು ಐದು ತಿಂಗಳು ಇನ್​ಸ್ಟಾಗ್ರಾಮ್​ನಲ್ಲಿ ಮೇಸೆಜ್ ಮಾಡಿದ್ದಾರೆ. ಬಳಿಕ ಮೊಬೈಲ್​ ನಂಬರ್​ ಬದಲಾಯಿಸಿಕೊಂಡಿದ್ದಾರೆ. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಆರೋಪಿ ಯಲ್ಲಾಲಿಂಗ ಸಂತ್ರಸ್ತೆಗೆ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಆರೋಪಿ ಯಲ್ಲಾಲಿಂಗನ ಮಾತನ್ನು ಸಂತ್ರಸ್ತೆ ನಂಬಿದ್ದಾಳೆ.

ಮದುವೆಯಾಗೋಣ ಬಾ ಎಂದು ಆರೋಪಿ ಯಲ್ಲಾಲಿಂಗ ಆಗಸ್ಟ್​ 8 ರಂದು ಸಂತ್ರಸ್ತೆಯನ್ನು ಕಲಬುರಗಿ ಕರೆಸಿಕೊಂಡಿದ್ದಾನೆ. ಆರೋಪಿ ಯಲ್ಲಾಲಿಂಗ ಮಾತು ನಂಬಿ ಸಂತ್ರಸ್ತೆ ಅದೇ ದಿನ ರಾತ್ರಿ ಕಲಬುರಗಿಗೆ ಬಂದಿದ್ದಾಳೆ. ಬಳಿಕ, ಆರೋಪಿ ಯಲ್ಲಾಲಿಂಗ ಆಕೆಯನ್ನು ಬೈಕ್​ನಲ್ಲಿ ಕೂರಿಸಿಕೊಂಡು ಕಲಬುರಗಿ ಬಸ್​ ನಿಲ್ದಾಣ ​ ಎದುರಿನ  ಖಾಸಗಿ ಲಾಡ್ಜ್​ಗೆ ಕರೆದುಕೊಂಡು ಹೋಗಿದ್ದಾನೆ. ರೂಂನಲ್ಲಿ, ಆರೋಪಿ ಯಲ್ಲಾಲಿಂಗ​ ಸಂತ್ರಸ್ತೆಯನ್ನು ಸರಸಕ್ಕೆ ಕರೆದಿದ್ದಾನೆ. ಆಗ ಸಂತ್ರಸ್ತೆ ನಿರಾಕರಿಸಿದ್ದಕ್ಕೆ, ಆಕೆಯ ಮೇಲೆ ಇಡೀ ರಾತ್ರಿ ಅತ್ಯಾಚಾರ ಎಸಗಿದ್ದಾನೆ.

ಮರುದಿನ ಸಂತ್ರಸ್ತೆ ಮದುವೆಯಾಗೋಣ ಎಂದು ಆರೋಪಿ ಯಲ್ಲಾಲಿಂಗಗೆ ಹೇಳಿದ್ದಾಳೆ. ಆಗ, ಆರೋಪಿ ಯಲ್ಲಾಲಿಂಗ “ನನಗೆ ಇವತ್ತು ಹುಮನಾಬಾದದಲ್ಲಿ ಬಂದೋಬಸ್ತ್ ಡ್ಯೂಟಿ ಇದೆ ಇವತ್ತು ಬೇಡ ನಾಳೆ ಮದುವೆಯಾಗೋಣ” ಎಂದು ಹೇಳಿ ಸಂತ್ರಸ್ತೆಯನ್ನು ಲಾಡ್ಜಿನಲ್ಲಿಯೇ ಬಿಟ್ಟು ಹೋಗಿದ್ದಾನೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೊಂದು ಹನಿಟ್ರ್ಯಾಪ್​ ಪ್ರಕರಣ ಬೆಳಕಿಗೆ: ಉದ್ಯಮಿಗಳೇ ಇವರ ಟಾರ್ಗೆಟ್​

ಸಂತ್ರಸ್ತೆ ಸುಮಾರು ಸಲ ಆರೋಪಿ ಯಲ್ಲಾಲಿಂಗಗೆ ಕರೆ ಮಾಡಿದರೂ, ಕರೆಯನ್ನು ಸ್ವೀಕರಿಸಲಿಲ್ಲ. ಮತ್ತೆ ಹೇಗೋ ಸಂತ್ರಸ್ತೆ ಆರೋಪಿ ಯಲ್ಲಾಲಿಂಗನನ್ನು ಸಂಪರ್ಕ ಮಾಡಿದಾಗ, “ನಿನ್ನ ಮದುವೆ ಆಗಲು ನನ್ನ ಮನೆಯಲ್ಲಿ ಒಪ್ಪಿತ್ತಲ್ಲ. ಹಾಗೂ ನನಗೆ ನೀವು ವರದಕ್ಷಣೆ ಹೆಚ್ಚಿಗೆ ಕೊಟ್ಟರೆ ಮದುವೆ ಮಾಡಿಕೊಳ್ಳುತ್ತೇನೆ” ಎಂದು ಸಂತ್ರಸ್ತೆಗೆ ಹೇಳಿದ್ದಾನೆ.

ಇದರಿಂದ ನೊಂದ ಸಂತ್ರಸ್ತೆ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿ ಯಲ್ಲಾಲಿಂಗ ವಿರುದ್ಧ ಬಿಎನ್​ಎಸ್ ಕಾಯ್ದೆ 64,318(B)351,352 ಅಡಿಯಲ್ಲಿ ಕೇಸ್ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ